ಕಲಾಕ್ಷೇತ್ರದಲ್ಲಿ ಕೃಷ್ಣ ಸಂಧಾನ-ಮಂತ್ರ ಮಯೂರಿ ಯಕ್ಷಗಾನ, ಮಿಸ್ ಮಾಡ್ಲೇಬೇಡಿ
ಬೆಂಗಳೂರು, ಜೂನ್ 13: ಯಕ್ಷಸಿಂಧೂರ ಕಲಾಮಂಡಳಿಯು ಇದೇ ಜೂನ್ 15ರಂದು ಕೃಷ್ಣ ಸಂಧಾನ- ಮಂತ್ರ ಮಯೂರಿ ಯಕ್ಷಗಾನವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಸ್ತುತಪಡಿಸುತ್ತಿದೆ.
ರಾತ್ರಿ 10 ಗಂಟೆಗೆ ಯಕ್ಷಗಾನ ಆರಂಭವಾಗಲಿದೆ. ಊರಿನ ತಿರುಗಾಟ ಮುಗಿಸಿದ ಮೇಳಗಳು ರಾಜಧಾನಿಯತ್ತ ಮುಖ ಮಾಡುತ್ತಿವೆ. ಆಟಕ್ಕಾಗಿ ಕಾಯುತ್ತಿರುವ ಕಲಾಕ್ಷೇತ್ರದ ಕಲಾರಸಿಕರ ವಲಯಕ್ಕೆ ನಿರೀಕ್ಷೆ ಹೆಚ್ಚುತ್ತಿದೆ .
ಈ ಬಾರಿ ಜೂನ್‌ನಲ್ಲೆ ಪೌರಾಣಿಕ ಮತ್ತು ಸಾಮಾಜಿಕ ಉಭಯ ಪ್ರೇಕ್ಷಕ ವರ್ಗಕ್ಕೂ ಒಂದೇ ದಿನ ಸವಿ ಉಣಬಡಿಸಲು ಯಕ್ಷಸಿಂಧೂರ ತಂಡ ಸಜ್ಜಾಗುತ್ತಿದೆ . ತೆಂಕುತಿಟ್ಟಿನ ಭಾರಿ ಬಿಸಿಯ ವಾಕ್ ವೈಖರಿಯ ಜೋಡಿ ಪೆರ್ಮದೆ ಜಯಪ್ರಕಾಶ್ ಶೆಟ್ಟರ ಕೌರವನಿಗೆ ರಂಗಾಭಟ್ಟರ ಕೃಷ್ಣ , ಇದು ಈಗಾಗಲೇ ಪ್ರೇಕ್ಷಕರಲ್ಲಿ ಚರ್ಚೆಯಾಗುತ್ತಿದೆ . ಇಬ್ಬರು ಅತ್ಯುತ್ತಮ ಕೂಟದ ಕಲಾವಿದರು ಆಟದಲ್ಲಿ ಅದೂ ಬಡಗಿನಲ್ಲಿ ಹಿಲ್ಲೂರು ಗಾನ ಸಾರಥ್ಯದಲ್ಲಿ ಹೇಗೆ ಸಂಧಾನ ಮಾತುಕತೆ ಮಾಡಲಿದ್ದಾರೆ ಎನ್ನುವುದಕ್ಕೆ ನೀವು ಸಾಕ್ಷಿಯಾಗಬೇಕು .

ಇನ್ನು ಊರಿನ ತಿರುಗಾಟದಲ್ಲಿ ಜನಮೆಚ್ಚುಗೆಯ ಪ್ರಸಂಗ ಮಂತ್ರ ಮಯೂರಿ . ಈಗ ಚಾಲ್ತಿಯಲ್ಲಿರುವ ಸ್ತ್ರೀ ವೇಷಧಾರಿ ಸುಧೀರ್ ಉಪ್ಪೂರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಹಟ್ಟಿಯಂಗಡಿ ಮೇಳದ ಹಿಟ್ ಪ್ರಸಂಗವಿದು. ಅವಳಿ ರಂಗಸ್ಥಳದಲ್ಲಿ ಪ್ರದರ್ಶನಗೊಳ್ಳುವ ಈ ಪ್ರಸಂಗದ ಕಥಾಹಂದರ ಈಗಾಗಲೇ ಸದ್ದು ಮಾಡುತ್ತಿದೆ .
ಐರಬೈಲ್ ಆನಂದ ಶೆಟ್ಟಿ , ಸುರೇಶ ಶೆಟ್ಟಿ , ಹೆನ್ನಾಬೈಲ್ ವಿಶ್ವನಾಥ , ಪ್ರಶಾಂತ ಗಾಣಿಗ , ನಿತೀನ್ ಶೆಟ್ಟಿ , ಭರತ್ ಪರ್ಕಳ , ಹಳ್ಳಾಡಿ ಜಯರಾಮ ಶೆಟ್ಟಿ , ಯಳಬೇರು ಶೇಖರ ಶೆಟ್ಟಿ , ದೇವಲ್ಕುಂದ , ಕಿರಾಡಿ , ರಾಜೇಶ್ ಬೈಕಾಡಿ , ಅಮಾಸ್‌ಬೈಲ್ , ಇನ್ನಿತರರ ರಂಗವೈಭವದ ಆಟ ಕಾಣಬೇಕೆಂಬ ಕುತೂಹಲಕ್ಕೆ ಕಲಾಕ್ಷೇತ್ರವೇ ದಾರಿ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications