• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಾವ ಬಿಜೆಪಿ ನಾಯಕರೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿಲ್ಲ: ಕೃಷ್ಣಬೈರೇಗೌಡ

|
   Lok Sabha Elections 2019 : ಕೇಂದ್ರ ಸರ್ಕಾರದ ಆಡಳಿತದ ದುಷ್ಪರಿಣಾಮ ಬಿಚ್ಚಿಟ್ಟ ಕೃಷ್ಣಬೈರೇಗೌಡ

   ಬೆಂಗಳೂರು, ಏಪ್ರಿಲ್ 12: ಕೇಂದ್ರದ ಬಿಜೆಪಿ ಸರಕಾರದ ಐದು ವರ್ಷಗಳ ಅವಧಿಯಲ್ಲಿ ದೇಶದ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಆದರೆ ಬಡವರು ಮತ್ತು ದುಡಿಯುವ ವರ್ಗದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂತಹ ಆರ್ಥಿಕ ಅಸಮತೋಲನ ಬೆಳವಣಿಗೆ ದೇಶಕ್ಕೆ ಒಟ್ಟಾರೆ ಅಭಿವೃದ್ಧಿಗೆ ಮಾರಕ ಎಂದು ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.

   ಗುರುವಾರ ಮಹಾಲಕ್ಷ್ಮಿ ಲೇಔಟ್ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಕೆಬಿಜಿ ಅವರು, ಕೇಂದ್ರದ ಬಿಜೆಪಿ ಸರಕಾರ ದೇಶದ ಸರ್ವತೋಮುಖ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಿದೆ. ಬದಲಿಗೆ ಶ್ರೀಮಂತರ ಪರವಾಗಿ ಕೆಲಸ ಮಾಡಿದೆ. ಈ ಅವಧಿಯಲ್ಲಿ ದೇಶದ ಶ್ರೀಮಂತರು ಮತ್ತಷ್ಟು ಧನಿಕರಾಗಿದ್ದಾರೆ. ಆದರೆ ದುಡಿಯುವ ವರ್ಗ ಮತ್ತು ಬಡವರ ಆರ್ಥಿಕ ಪರಿಸ್ಥಿತಿಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂತಹ ಆರ್ಥಿಕ ಬೆಳವಣಿಗೆ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ. ‌ಈ ಪರಿಸ್ಥಿತಿಗೆ ಕೇಂದ್ರದ ಬಿಜೆಪಿ ಸರಕಾರವೇ ಕಾರಣ ಎಂದರು.

   ಬೆಲೆ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ. ಬೆಲೆ ನಿಯಂತ್ರಣ ಮಾಡುವಲ್ಲಿ ಸೋತಿದೆ. ಇದರ ಪರಿಣಾಮ ನೇರವಾಗಿ ಬಡವರ ಬದುಕನ್ನು ಶೋಚನೀಯ ಸ್ಥಿತಿಗೆ ತಳ್ಳಿದೆ. ಶ್ರೀಮಂತರ ಮೂರೂವರೆ ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಕೇಂದ್ರ ಸರಕಾರ ರೈತರ ಸಾಲ ಮನ್ನಾ ವಿಚಾರಕ್ಕೆ ಬಂದರೆ ಅದೊಂದು ಅಶಿಸ್ತಿನ ಕ್ರಮ ಎನ್ನುತ್ತದೆ. ಇದರಿಂದಲೇ ಅವರು ಯಾರ ಪರ ಕೆಲಸ ಮಾಡುತ್ತಾರೆ ಎಂಬುದು ತಿಳಿಯುತ್ತದೆ ಎಂದರು.

   'ಬಿಜೆಪಿ ನಾಯಕರು ದೇಶಕ್ಕಾಗಿ ಏನು ತ್ಯಾಗ ಮಾಡಿದ್ದಾರೆ'

   'ಬಿಜೆಪಿ ನಾಯಕರು ದೇಶಕ್ಕಾಗಿ ಏನು ತ್ಯಾಗ ಮಾಡಿದ್ದಾರೆ'

   ಸದಾ ದೇಶಪ್ರೇಮ, ದೇಶದ ಭದ್ರತೆ ಬಗ್ಗೆ ಮಾತನಾಡುವ ಬಿಜೆಪಿ ಪಕ್ಷದವರು ನಮ್ಮನ್ನು ದೇಶದ್ರೋಹಿಗಳಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇವರಷ್ಟೇ ದೇಶಪ್ರೇಮಿಗಳಾ? ಕಾಂಗ್ರೆಸ್ ಸರ್ಕಾರ ಇದ್ದ ಕಾಲದಲ್ಲಿ ದೇಶಕ್ಕೆ ಭದ್ರತೆ ಇರಲಿಲ್ಲವೇ? ನಾವು ಮಾಡಿರುವ ದೇಶ ದ್ರೋಹವಾದರೂ ಏನು? ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟರು. ಬಿಜೆಪಿ ನಾಯಕರು ಯಾರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ? ಇವರಿಂದ ನಾವು ದೇಶಪ್ರೇಮ ಕಲಿಯಬೇಕೇ?ಅಣ್ಣ ತಮ್ಮಂದಿರ ನಡುವೆ ದ್ವೇಷ ತಂದಿಡುವ ಇವರು ದೇಶ ಕಟ್ಟುತ್ತಾರಾ? ಕಪ್ಪು ಹಣ ತಂದು ತಲಾ ಹದಿನೈದು ಲಕ್ಷ ಹಂಚುತ್ತೇವೆ ಎಂದು ಹಸಿ ಸುಳ್ಳು ಹೇಳಿಕೊಂಡೇ ಬಡವರನ್ನು ಶೋಷಿಸಿದ ಇವರ ನಿಜ ಬಣ್ಣ ಏನೆಂದು ತಡವಾಗಿ ಆದರೂ ದೇಶದ ಜನಕ್ಕೆ ಅರ್ಥವಾಗುತ್ತಿದೆ ಎಂದರು.

   ಗೋಪಾಲಯ್ಯ ಮನೆಯಲ್ಲಿ ಮುಖಂಡರೊಂದಿಗೆ ಸಭೆ

   ಗೋಪಾಲಯ್ಯ ಮನೆಯಲ್ಲಿ ಮುಖಂಡರೊಂದಿಗೆ ಸಭೆ

   ಗೋಪಾಲಯ್ಯ ಮನೆಯಲ್ಲಿ ಮುಖಂಡರೊಂದಿಗೆ ಸಭೆ

   ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ.ಗೋಪಾಲಯ್ಯ ಅವರ ಮನೆಯಲ್ಲಿ ನೇಕಾರರ ಜೊತೆ ಸಭೆ ನಡೆಸಿ, ನೋಟ್ ಬ್ಯಾನ್ ನಿಂದಾಗಿ ಸಣ್ಣಪುಟ್ಟ ಉದ್ಯಮಗಳು ಮುಚ್ಚಿ ಹೋದವು. ಅದರ ಪರಿಣಾಮ ನಿಮ್ಮ ಮೇಲೆ ಕೂಡ ಅಗಿದೆ. ಸದಾನಂದಗೌಡರು ಕ್ಷೇತ್ರದಿಂದ ಗೆದ್ದು ಸಚಿವರಾದ ಬಳಿಕ ಇಲ್ಲಿನ ಜನರಿಗಾಗಿ ಮಾಡಿದ ಕೆಲಸವಾದರೂ ಏನು ಎಂಬುದನ್ನು ನೀವು ವಿವೇಚನೆ ಮಾಡಿ. ಆಮೇಲೆ ಯಾರಿಗೆ ಮತ ನೀಡಬೇಕು ಎಂಬುದನ್ನು ನಿರ್ಧರಿಸಿ ಎಂದು ಮತದಾರರಿಗೆ ಮನವಿ ಮಾಡಿದರು.

   ಉದ್ಯಾನಗಳಿಗೆ ತೆರಳಿ ಮತ ಯಾಚನೆ

   ಉದ್ಯಾನಗಳಿಗೆ ತೆರಳಿ ಮತ ಯಾಚನೆ

   ಇದಕ್ಕೂ ಮುನ್ನ ಬೆಳಗ್ಗೆ ಆರೂವರೆಗೆ ಶಂಕರಮಠ ರಸ್ತೆಯ ವಿವೇಕಾನಂದ ಉದ್ಯಾನ ಹಾಗೂ ನಂದಿನಿ ಲೇಔಟ್ ನ ಸರ್ಕ್ಯುಲರ್ ಉದ್ಯಾನಗಳಿಗೆ ತೆರಳಿ ವಾಯು ವಿಹಾರಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಮತ ನೀಡುವಂತೆ ಮನವಿ ಮಾಡಿದರು. ಬಳಿಕ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ವ್ಯಾಪಾರಿಗಳ ಕುಂದು ಕೊರತೆಗಳನ್ನು ಆಲಿಸಿ ಮತಯಾಚನೆ ಮಾಡಿದರು. ನಂತರ, ಕಮಲಾನಗರ ಮಾರ್ಕೆಟ್ ಮತ್ತು ಗೆಳೆಯರ ಬಳಗ ವೃತ್ತದಲ್ಲಿ ಸಾರ್ವಜನಿಕ ಸಭೆ ನಡೆಸಿ ಮತಯಾಚಿಸಿದರು.

   ಹಲವು ಕಡೆ ಪ್ರಚಾರ ಸಭೆ ನಡೆಸಿದ ಕೃಷ್ಣಬೈರೇಗೌಡ

   ಹಲವು ಕಡೆ ಪ್ರಚಾರ ಸಭೆ ನಡೆಸಿದ ಕೃಷ್ಣಬೈರೇಗೌಡ

   ಮಧ್ಯಾಹ್ನದ ಬಳಿಕ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ತೆರಳಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಸ್ಥಳೀಯ ಶಾಸಕ ಸೋಮಶೇಖರ್ ಗೌಡ ಹಾಗೂ ಜೆಡಿಎಸ್ ಮುಖಂಡ ಜವರೇಗೌಡ ಅವರು ಕೆಬಿಜಿ ಅವರೊಂದಿಗೆ ಭರ್ಜರಿ ಪ್ರಚಾರ ನಡೆಸಿದರು‌. ಯಶವಂತಪುರ ವಿಧಾನಸಭಾ ಕ್ಷೇತ್ರದ ನೆಲಗುಳಿ, ಸೋಮನಹಳ್ಳಿ, ತಟ್ಟುಗುಪ್ಪೆ, ಕಗ್ಗಲಿಪುರ, ತಾತಗುನಿ, ಕೆ. ಗೊಲ್ಲಹಳ್ಳಿ ಮತ್ತಿತರ ಪ್ರದೇಶಗಳಿಗೆ ತೆರಳಿ ಪ್ರಚಾರ ಮಾಡಿದರು. ಈ ವೇಳೆ ಇಬ್ಬರೂ ನಾಯಕರು ಮಾತನಾಡಿ ನಮ್ಮ ನಡುವೆ ಹಿಂದಿನಿಂದಲೂ ಸ್ಪರ್ಧೆ ಇರುವುದು ನಿಜ. ಆದರೆ ಕೃಷ್ಣ ಬೈರೇಗೌಡ ಅವರಂತ ಮುತ್ಸದ್ದಿ ನಾಯಕರಿಗೆ ಬೆಂಬಲ ನೀಡಲು ಒಟ್ಟಿಗೆ ಬಂದಿದ್ದೇವೆ. ಕಾರ್ಯಕರ್ತರು ಕೂಡ ಕೃಷ್ಣ ಬೈರೇಗೌಡ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

   English summary
   Congress candidate Krishna Byre Gowda did campaign in Bengaluru North constituency. He said Sadananda Gowda did no work in constituency.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X