ಖರ್ಗೆ ಕುಟುಂಬಕ್ಕೆ ಬಿಜೆಪಿ ಅಭ್ಯರ್ಥಿ ಬೆದರಿಕೆ ಆರೋಪ: ಕಾಂಗ್ರೆಸ್ ಆಕ್ರೋಶ

ಖರ್ಗೆ ಕುಟುಂಬವನ್ನು ಮುಗಿಸ್ತೇನೆ ಎಂದು ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸದ್ಯ ವೈರಲ್ ಆಗಿದ್ದು, ಕಾಂಗ್ರೆಸ್ ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೆಪಿಸಿಸಿ ಬಿಜೆಪಿ ವಿರುದ್ಧ ಹರಿಹಾಯ್ದಿದೆ.

ದಲಿತ ಸಮುದಾಯದ ನಾಯಕನನ್ನು ಮುಗಿಸಲು ಬಿಜೆಪಿ ಸಂಚು ಮಾಡಿದ್ಯಾ ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ಗಂಭೀರವಾದ ಆರೋಪ ಮಾಡಿದೆ. ಖರ್ಗೆ ಅವರನ್ನು ಹತ್ಯೆ ಮಾಡಲೆಂದೇ ರೌಡಿಶೀಟರ್ ಒಬ್ಬನಿಗೆ ಟಿಕೆಟ್ ನೀಡಿದ್ದೀರಾ ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದೆ.

 KPCC Tweets Audio Of BJP Candidate Manikanta Rathod Threatening Kharge Family

ಪ್ರಶ್ನಿಸುತ್ತಾರೆ ಎನ್ನುವ ಕಾರಣಕ್ಕೆ ದ್ವೇಷವಾ?

ದಲಿತ ಸಮುದಾಯದ ಉನ್ನತ ನಾಯಕ, ದೇಶದ ಹಿರಿಯ ಹಾಗೂ ಮುತ್ಸದ್ದಿ ನಾಯಕ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಅವರ ಅವರ ಇಡೀ ಕುಟುಂಬವನ್ನು ಹತ್ಯೆ ಮಾಡುವ ಬಿಜೆಪಿಯ ಸಂಚು ಮಣಿಕಂಠ ರಾಥೋಡನ ಬಾಯಲ್ಲಿ ಹೊರಬಂದಿದೆ. ಖರ್ಗೆ ಕುಟುಂಬದ ಹತ್ಯೆಗೆ ನೀಡಿದ ಸುಪಾರಿಗಾಗಿಯೇ ರೌಡಿ ಶೀಟರ್‌ಗೆ ಟಿಕೆಟ್ ನೀಲಾಗಿದೆಯೇ ನರೇಂದ್ರ ಮೋದಿಯವರೇ ಎಂದು ಪ್ರಶ್ನೆ ಮಾಡಿದೆ. ಪ್ರಶ್ನಿಸುತ್ತಾರೆ ಎಂಬ ಒಂದೇ ಕಾರಣಕ್ಕೆ ಈ ಪರಿ ದ್ವೇಷವೇ? ಎಂದು ಕೇಳಿದೆ.

ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರವನ್ನು ದುಃಸ್ವಪ್ನದಂತೆ ಕಾಡುತ್ತಿದ್ದಾರೆ. ಕರ್ನಾಟಕದಲ್ಲಿ ಪ್ರಿಯಾಂಕ್ ಖರ್ಗೆ ಇಲ್ಲಿನ ಬಿಜೆಪಿ ಸರ್ಕಾರವನ್ನು ಎಡಬಿಡದೆ ಕಾಡಿದ್ದಾರೆ. ಹಲವು ಹಗರಣಗಳನ್ನು ಪ್ರಶ್ನಿಸಿದ್ದಾರೆ, ಈ ಕಾರಣಕ್ಕೆ ಇಡೀ ಖರ್ಗೆ ಕುಟುಂಬವನ್ನೇ ಮುಗಿಸುವ ಸಂಚೇ ಎಂದು ಪ್ರಶ್ನಿಸಿದೆ.

ದಲಿತ ನಾಯಕರೊಬ್ಬರು ನನ್ನನ್ನು ಈ ಪರಿ ಕಾಡುತ್ತಾರೆ ಎಂದ ಇಗೋ ಹರ್ಟ್ ಆಗಿದೆಯೇ ನರೇಂದ್ರ ಮೋದಿಯವರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ದೇಶದ ಪ್ರಮುಖ ನಾಯಕರು, ದೇಶದ ಪ್ರಮುಖ ನಾಯಕರು, ದಲಿತ ಸಮುದಾಯಗಳ ಸಾಕ್ಷಿಪ್ರಜ್ಞೆ, ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಹತ್ಯೆಗೆ ಸುಪಾರಿ ಕೊಟ್ಟವರಾರು? ತಮ್ಮದೇ ಪಕ್ಷದ ಅಭ್ಯರ್ಥಿಯ ಸಂಚು ಬಯಲಾದರೂ ಪ್ರಧಾನಿ ಏಕೆ ಮಾತಾಡುತ್ತಿಲ್ಲ? ಎಂದು ಕೇಳಿದೆ.

ಚುನಾವಣೆ ಸಮೀಪದಲ್ಲೇ ಇರುವ ಸಂದರ್ಭದಲ್ಲಿ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಆಡಿಯೋ ರಾಜಕೀಯ ಅಸ್ತ್ರವಾಗುವ ಸಾಧ್ಯತೆ ಇದೆ. ಮಣಿಕಂಠ ರಾಥೋಡ್ ಪರವಾಗಿ ಮೋದಿ ಮಾಡಬೇಕಿದ್ದ ಚುನಾವಣಾ ಸಮಾವೇಶ ಕೂಡ ರದ್ದಾಗಿತ್ತು. ಆದರೆ ಯೋಗಿ ಆದಿತ್ಯನಾಥ್ ಮಣಿಕಂಠ ರಾಥೋಡ್ ಪರವಾಗಿ ಪ್ರಚಾರ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+