Get Updates
Get notified of breaking news, exclusive insights, and must-see stories!

ಕನ್ನಡಿಗರ ಬಗ್ಗೆ ಹೋಟೆಲ್‌ ಎಲ್‌ಇಡಿ ಸ್ಕ್ರೀನ್‌ನಲ್ಲಿ ಹಿಂದಿಯ ಅತಿ ಕೆಟ್ಟ ಪದ ಬಳಸಿ ಅವಮಾನ!

ಬೆಂಗಳೂರಿನಲ್ಲಿ ಹಿಂದಿಭಾಷಿಕರ ಪುಂಡಾಟಿಕೆ ಮಿತಿಮೀರಿದೆ. ಕನ್ನಡ ನೆಲದಲ್ಲೇ ನಿಂತು ಕನ್ನಡ ಹಾಗು ಕನ್ನಡಿಗರ ಬಗ್ಗೆ ಅವಹೇಳನ ಮಾಡುತ್ತಿರುವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಬೆಂಗಳೂರಿನ ಕೋರಮಂಗಲದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕನ್ನಡಿಗರ ಬಗ್ಗೆ ಹಿಂದಿಯಲ್ಲಿ (ಕನ್ನಡಿಗ ಮದರ್***) ಎಂದು ಅತಿ ಕೆಟ್ಟ ಪದ ಬಳಕೆ ಮಾಡಿ, ಅದನ್ನು ಹೋಟೆಲ್‌ನ ಎಲ್‌ಇಡಿ ಸ್ಕ್ರೀನ್‌ನಲ್ಲಿ ಹಾಕಲಾಗಿದೆ. ಈ ವಿಡಿಯೋ ವೈರಲ್‌ ಆಗಿದ್ದು, ಕೂಡಲೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಕನ್ನಡಿಗರು ಕೂಡ ಈ ಘಟನೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಕೋರಮಂಗಲದ ಹೋಟೆಲ್‌ ಡಿಎಸ್‌ ಸೂಟ್ಸ್‌ನಲ್ಲಿ ಮುಂದೆ ಹಾಕಿದ್ದ ಎಲ್‌ಇಡಿ ಸ್ಕ್ರೀನ್‌ನಲ್ಲಿ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಹಿಂದಿ ಪದ ಬಳಕೆ ಮಾಡಲಾಗಿದೆ. ಇದನ್ನು ರಾಜಾರೋಷವಾಗಿ ಡಿಸ್‌ಪ್ಲೇ ಮಾಡಿರುವುದು ಗೊತ್ತಾಗಿ, ಆ ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಇದು ಶುಕ್ರವಾರ ನಡೆದಿರುವ ಘಟನೆ ಎಂದು ಗೊತ್ತಾಗಿದೆ. ಕನ್ನಡಿಗರ ಜಾಗದಲ್ಲೇ ಬಂದು ಕನ್ನಡಿಗರ ಬಗ್ಗೆ ಇಷ್ಟು ಕೆಟ್ಟದಾಗಿ ಪದ ಬಳಕೆ ಮಾಡಿರುವ ಈ ಹೋಟೆಲ್‌ನವರನ್ನು ಕೂಡಲೇ ಬಂಧಿಸಿ, ಹೋಟೆಲ್‌ ಬಂದ್‌ ಮಾಡಿಸಿ ಎಂದು ಆಗ್ರಹ ಕೇಳಿಬಂದಿದೆ.

Koramangala Hotel Sparks Outrage Over Derogatory Hindi Message Against Kannadigas

ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಈ ಹೋಟೆಲ್‌ಗೆ ಬೀಗ ಜಡಿದು, ತಕ್ಷಣ ಹೋಟಲ್ ಮಾಲೀಕನನ್ನ ಅರೆಸ್ಟ್ ಮಾಡಿ ಎಂದು ಬೆಂಗಳೂರು ಪೊಲೀಸರಿಗೆ ಟ್ಯಾಗ್‌ ಮಾಡಲಾಗಿದೆ. ಅನ್ನ ಕೊಡುವ ಭೂಮಿಗೆ ಇವರ ನಿಯತ್ತು ಇಷ್ಟೇ ನೋಡಿ. ಆರು ಕೋಟಿ ಕನ್ನಡಿಗರನ್ನ ಈ ರೀತಿ ಕೆಟ್ಟ ಪದದಿಂದ ನಿಂದಿಸಿರುವ ಇವರನ್ನು ಸುಮ್ಮನೆ ಬಿಡಬಾರದು ಎಂದು ಗರಂ ಆಗಿದ್ದಾರೆ.

Take a Poll

ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಕೂಡ ಈ ವಿಡಿಯೋ ಶೇರ್‌ ಮಾಡಿಕೊಂಡು ಆಕ್ರೋಶ ಹೊರಹಾಕಿದ್ದಾರೆ. ಇವರ ಮೇಲೆ ಕೇಸ್ ಆಗಲೇಬೇಕು. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಕೆಲಸ. ಕೋರಮಂಗಲದ ಹೋಟೆಲ್‌ ಜಿಎಸ್‌ ಸೂಟ್ಸ್‌ ಬಳಿ ಶುಕ್ರವಾರ ರಾತ್ರಿ ಈ ವಿಡಿಯೋ ರೆಕಾರ್ಡ್ ಆಗಿದೆ. ಈ ಹಿಂದಿವಾಲಾಗಳಿಂದ ಪದೇ ಪದೇ ಕನ್ನಡಿಗರನ್ನು ಕೆಣಕುವ ಕೆಲಸ ಆಗ್ತಿದೆ. ಈ ಬಾರಿ ಕನ್ನಡಿಗರನ್ನ ಬಹಳ ಕೆಟ್ಟದ್ದಾಗಿ ನಿಂದಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಕನ್ನಡಿಗರ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿರುವ ಆರೋಪದ ಮೇರೆಗೆ ಹೋಟೆಲ್ ಮ್ಯಾನೇಜರ್ ಹಾಗೂ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಅಲ್ಲಿ ಅಳವಡಿಸಿದ್ದ ಬೋರ್ಡ್‌ ಕೂಡ ಕಿತ್ತ ಹಾಕಲಾಗಿದೆ. ಇದನ್ನು ಬೇಕಂತಲೇ ಉದ್ದೇಶಪೂರ್ವಕವಾಗಿ ಪರಭಾಷಿಕರು ಮಾಡಿದ್ದಾರೆ ಎಂದು ಕನ್ನಡಿಗರು ಗರಂ ಆಗಿದ್ದಾರೆ. ಇಂತಹ ಹೋಟೆಲ್‌ ಬೆಂಗಳೂರಿನಲ್ಲಿ ಇರಬಾರದು, ಅದನ್ನು ನೆಲಸಮ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕನ್ನಡ ಹಾಗೂ ಕನ್ನಡಿಗರ ಮೇಲೆ ಸ್ವಂತ ನೆಲದಲ್ಲೇ ಪರಭಾಷಿಕರ ಉಪಟಳ ಮಿತಿಮೀರಿದ್ದು, ಕೂಡಲೇ ಇದನ್ನು ನಿಯಂತ್ರಣಕ್ಕೆ ತರಲು ಬಲವಾದ ಕಾನೂನು ಜಾರಿ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಹೋಟೆಲ್‌ ಮಾಲೀಕನ ಮೇಲೆ ಎಫ್‌ಐಆರ್‌

ಕನ್ನಡಿಗರನ್ನು ಅವಮಾನಿಸುವ ರೀತಿಯಲ್ಲಿ ಹಿಂದಿಯಲ್ಲಿ ಪದ ಬಳಕೆ ಮಾಡಿದ ಎಲ್‌ಇಡಿ ಸ್ಕ್ರೀನ್‌ ಅಳವಡಿಸಿದ್ದ ಆರೋಪದ ಮೇರೆಗೆ ಕೋರಮಂಗಲ ಹೋಟೆಲ್ ಜೀ ಎಸ್ ಸೂಟ್ಸ್ ಮಾಲೀಕನ ಮೇಲೆ ಯುವ ಕರ್ನಾಟಕ ವೇದಿಕೆ ದೂರು ನೀಡಿದೆ. ಈ ಸಂಬಂಧ ಪೊಲೀಸರು ದೂರು ಪಡೆದು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ರೂಪೇಶ್‌ ರಾಜಣ್ಣ, ಕನ್ನಡಿಗರಿಗೆ ನ್ಯಾಯಕ್ಕಾಗಿ ನಿಂತ ಯುಕವೇ ಇಂದು ನಮ್ಮ ಯುವ ಕರ್ನಾಟಕ ವೇದಿಕೆ ತಂಡ ಹೋಟೆಲ್‌ನಲ್ಲಿ ಹಾಕಿದ್ದ ಫಲಕ ತೆಗೆಯಿಸಿ, ಕನ್ನಡಿಗರನ್ನ ತುಚ್ಚವಾಗಿ ನಿಂದಿಸಿ ಫಲಕ ಹಾಕಿದ್ದ ಕೋರಮಂಗಲ ಹೋಟೆಲ್ ಜೀ ಎಸ್ ಸೂಟ್ಸ್ ಮಾಲೀಕನ ಮೇಲೆ ಪೊಲೀಸ್ ದೂರು ದಾಖಲು ಮಾಡಿದ್ದೇವೆ ಎಂದಿದ್ದಾರೆ.

ಸಾರ್ವಜನಿಕವಾಗಿ ಕನ್ನಡಿಗರ ತಾಯಿಯ ಬಗ್ಗೆ ಕೆಟ್ಟ ಶಬ್ದಗಳಿಂದ ನಿಂದಿಸಿ ಬರೆಯಲಾಗಿದ್ದ ಹೋಟೆಲ್ ವಿರುದ್ಧ ಹೋರಾಟ ಮಾಡಿ ಜೊತೆಗೆ ಆ ಹೋಟೆಲ್ ಮೇಲೆ ಎಫ್‌ಐಆರ್‌ ಮಾಡಿಸುವ ಮೂಲಕ ಕನ್ನಡಿಗರ ಭಾವನೆಗೆ ಧಕ್ಕೆ ಮಾಡಿರುವ ಕಿಡಿಗೇಡಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ. ಇವರನ್ನು ಬಂಧಿಸಿದರೆ ಸಾಲದು, ಕನ್ನಡಿಗರ ತಾಯಂದಿರ ಬಗ್ಗೆ ನೀಚ ಪದ ಬಳಕೆ ಮಾಡಿದ ಇವರನ್ನು ಕನ್ನಡದ ನೆಲದಲ್ಲಿ ಇರಲು ಅವಕಾಶ ಕೊಡದೆ, ಗಡಿಪಾರು ಮಾಡಬೇಕು. ಇದರಿಂದ ಉಳಿದವರಿಗೂ ಎಚ್ಚರಿಕೆಯ ಪಾಠವಾಗಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.

ಕನ್ನಡಿಗರ ತಾಯಿಯನ್ನು ನಿಂದಿಸಿದ ನಾಡದ್ರೋಹಿ ಹೋಟೆಲ್ ಬೋರ್ಡ್ ಕಿತ್ತು ಹಾಕುವ ಮೂಲಕ, ಹೋಟೆಲ್ ಸಂಪೂರ್ಣ ಖಾಲಿ ಮಾಡಿಸಿ ಬಂದ್ ಮಾಡಿಸಿ ಬೀಗ ಹಾಕಲಾಗಿದೆ. ಈಗಾಗಲೇ ಆ ಬೋರ್ಡ್ ಹಾಗೂ ಹೋಟೆಲ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿ ಎಫ್‌ಐಆರ್‌ ಹಾಕುವ ಮೂಲಕ ಕನ್ನಡಿಗರ ಹೋರಾಟಕ್ಕೆ ಪೊಲೀಸರು ಸ್ಪಂದಿಸಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಅವರನ್ನು ಗಡಿಪಾರು ಮಾಡಿ ಎಂದ ಜೆಡಿಎಸ್‌

ಕರ್ನಾಟಕದಲ್ಲಿ ವ್ಯಾಪಾರ ಮಾಡಿ ಲಾಭಗಳಿಸುವ ಇವರಿಗೆ ಎಷ್ಟು ಸೊಕ್ಕು? ಎಂದು ಈ ಘಟನೆ ಬಗ್ಗೆ ಜೆಡಿಎಸ್‌ ಕೂಡ ಕಿಡಿಕಾರಿದೆ. ಕನ್ನಡ, ಕನ್ನಡಿಗರನ್ನು ಅವಹೇಳನ ಮಾಡುವ ಕನ್ನಡದ್ರೋಹಿ ಉದ್ದಿಮೆದಾರರನ್ನು ಕರ್ನಾಟಕದಲ್ಲಿ ವ್ಯವಹಾರ ಮಾಡಲು ಬಿಡಬಾರದು ಎಂದು ಆಗ್ರಹಿಸಿದೆ. ಅನ್ಯ ರಾಜ್ಯದಿಂದ ವಲಸೆ ಬಂದು ಕನ್ನಡದ ಅನ್ನ ತಿನ್ನುತ್ತಾ, ಕನ್ನಡದ ನೀರು ಕುಡಿಯುತ್ತಾ, ಕನ್ನಡಿಗರನ್ನೇ ಅವಮಾನಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್‌ ಸರ್ಕಾರ ಇಂತಹ ಕನ್ನಡ ವಿರೋಧಿಗಳನ್ನು ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಗಡಿಪಾರು ಮಾಡಿ ಎಂದು ಆಗ್ರಹಿಸಿದೆ.

ರಾಜಧಾನಿ ಬೆಂಗಳೂರಿಗೆ ದಿನೇ ದಿನೇ ಪರಭಾಷಿಕರು ಬಂದು ತುಂಬಿಕೊಳ್ಳುತ್ತಿದ್ದು, ಕೂಡಲೇ ಈ ವಲಸೆ ನಿಯಂತ್ರಿಸಲು ಕಠಿಣ ಕಾನೂನು ತನ್ನಿ ಎಂದು ರಾಜ್ಯ ಸರ್ಕಾರಕ್ಕೆ ಬೇಡಿಕೆ ಇಡಲಾಗುತ್ತಿದೆ. ಆದರೂ ಕನ್ನಡ ಹಾಗೂ ಕನ್ನಡಿಗರ ಮೇಲೆ ದರ್ಪ ತೋರುವವರ ಮೇಲೆ ಯಾವುದೇ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದಕ್ಕೆ ಇತ್ತೀಚೆಗೆ ಕನ್ನಡಿಗನ ಮೇಲೆ ಹಲ್ಲೆ ಯತ್ನ ನಡೆಸಿದ ವಿಂಗ್‌ ಕಮಾಂಡರ್‌ ಪ್ರಕರಣವೇ ಸಾಕ್ಷಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+