Get Updates
Get notified of breaking news, exclusive insights, and must-see stories!

ರಾಜ್ಯಾದ್ಯಂತ ದಿಕ್ಕೆಟ್ಟ ಮದ್ಯದಂಗಡಿಗಳು; ಗಿರಾಕಿ ಬಂದರೂ 'ಎಣ್ಣೆ' ಖಾಲಿ- ಕಾರಣ ಇದು

ಬೆಂಗಳೂರು, ಏ. 7: ಸದಾಕಾಲ ಗಿರಾಕಿ ಮತ್ತು ಬಾಟಲಿಗಳಿಂದ ಸಮೃದ್ಧವಾಗಿರುವ ರಾಜ್ಯದ ಮದ್ಯದಂಗಡಿಗಳು ಕಳೆದ ಎರಡು ದಿನಗಳಿಂದ ಬಿಕೋ ಎನ್ನುತ್ತಿವೆ. ಗಿರಾಕಿಗಳು ಮುಗಿಬಿದ್ದರೂ ಮದ್ಯದ ಸ್ಟಾಕ್ ಇಲ್ಲದ ಸ್ಥಿತಿ ಬಂದಿದೆ. ಇದಕ್ಕೆ ಕಾರಣ ರಾಜ್ಯದಲ್ಲಿ ಮದ್ಯ ಖರೀದಿಗೆ ರಚಿಸಲಾಗಿರುವ ಹೊಸ ವ್ಯವಸ್ಥೆ ಮತ್ತದರ ತಾಂತ್ರಿಕ ದೋಷ.

ಕರ್ನಾಟಕ ರಾಜ್ಯ ಪಾನೀಯ ನಿಗಮ ನಿ (KSBCL) ಇದೇ ಸೋಮವಾರದಂದು ವೆಬ್-ಇಂಡೆಂಟಿಂಗ್ ಮೂಲಕ ಆನ್‌ಲೈನ್‌ನಲ್ಲಿ ಅಂಗಡಿಗಳು ಮದ್ಯ ಖರೀದಿಸಲು ಹೊಸ ತಂತ್ರಾಂಶ ಬಿಡುಗಡೆ ಮಾಡಿತು. ಎಲ್ಲಾ ಮದ್ಯದಂಗಡಿಗಳು ಈ ಸಾಫ್ಟ್‌ವೇರ್ ಮೂಲಕವೇ ಮದ್ಯ ಖರೀದಿಸುವಂತೆ ಕಡ್ಡಾಯಪಡಿಸಲಾಯತು. ಆದರೆ ಈ ಹೊಸ ವ್ಯವಸ್ಥೆಯು ಮದ್ಯದಂಗಡಿ ಮಾಲೀಕರನ್ನ ಪೀಕಲಾಟಕ್ಕೆ ಸಿಲುಕಿಸಿದೆ. ಶೇ. 80ರಷ್ಟು ಮದ್ಯದಂಗಡಿ ಮಾಲೀಕರಿಗೆ ಆನ್‌ಲೈನ್ ಮೂಲಕ ಆರ್ಡರ್ ಪ್ಲೇಸ್ ಮಾಡುವ ಪ್ರಕ್ರಿಯೆ ಇನ್ನೂ ಕರಗತವಾಗಿಲ್ಲ ಎಂಬುದು ಒಂದು ವಿಷಯವಾದರೆ, ಸಾಫ್ಟ್‌ವೇರ್‌ನಲ್ಲಿ ತಾಂತ್ರಿಕ ದೋಷ ಎದುರಾಗಿರುವುದು ಇನ್ನೊಂದು ವಿಚಾರ.

ಸರಕಾರ ಯಾವುದೇ ಮುಂಜಾಗ್ರತೆ ಇಲ್ಲದೆಯೇ ಹೊಸ ಆನ್‌ಲೈನ್ ವ್ಯವಸ್ಥೆ ರೂಪಿಸಿದೆ ಎಂದು ಹಲವು ಮದ್ಯದಂಗಡಿ ಮಾಲೀಕರು ಅಲವತ್ತುಕೊಳ್ಳುತ್ತಿದ್ಧಾರೆ. ತಾಂತ್ರಿಕ ದೋಷಗಳನ್ನ ಸರಿಪಡಿಸಿದ ಬಳಿಕ ಪರಿಚಯಿಸಬೇಕಿತ್ತು. ಏಕಾಏಕಿ ಹೊಸ ವ್ಯವಸ್ಥೆ ಜಾರಿಗೊಳಿಸಿದರೆ ಅದರಿಂದ ಬಹಳಷ್ಟು ಸಮಸ್ಯೆ ಎದುರಾಗುತ್ತದೆ. ಇದು ಸರಕಾರದ ಅರಿವಿಗಿರಬೇಕಿತ್ತು. ಶೇ. 20ರಷ್ಟು ಮಂದಿಗೆ ಮಾತ್ರ ಹೊಸ ವ್ಯವಸ್ಥೆಯಡಿ ಖರೀದಿಸುವ ಪ್ರಕ್ರಿಯೆ ತಿಳಿದಿದೆ. ಇನ್ನುಳಿದವರು ತೀವ್ರ ಸಮಸ್ಯೆ ಮತ್ತು ನಷ್ಟ ಎದುರಿಸುವಂತಾಗಿದೆ ಎಂದು ರಾಜ್ಯ ಮದ್ಯ ವರ್ತಕರ ಸಂಘದ ಮುಖ್ಯ ಕಾರ್ಯದರ್ಶಿ ಬಿ ಗೋವಿಂದರಾಜ್ ಹೆಗ್ಡೆ ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿದೆ.

Liquor shops in Karnataka running out of stock, Know Why

ರಾಜ್ಯದ ವಿವಿಧೆಡೆಯಲ್ಲಿರುವ ಕೆಎಸ್‌ಬಿಸಿಎಲ್ ಡಿಪೋಗಳ ಎದುರು ಮದ್ಯ ವರ್ತಕರು ಪ್ರತಿಭಟನೆ ನಡೆಸಿ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ ಘಟನೆ ನಿನ್ನೆ ಬುಧವಾರ ನಡೆದಿರುವುದು ತಿಳಿದುಬಂದಿದೆ.

"ಹೊಸ ಆನ್‌ಲೈನ್ ವ್ಯವಸ್ಥೆಯಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳಿವೆ. ಹೀಗಾಗಿ, ಸರಿಯಾದ ಸಮಯಕ್ಕೆ ಆರ್ಡರ್ ಕೊಡಲು ಆಗುತ್ತಿಲ್ಲ. ಇದರಿಂದಾಗಿ ಹಲವಾರು ಮದ್ಯದಂಗಡಿಗಳು, ಪಬ್, ಬಾರ್‌ಗಳಲ್ಲಿ ಮದ್ಯದ ಸ್ಟಾಕ್ ಇಲ್ಲದೇ ಖಾಲಿ ಆಗಿದೆ. ಇದು ಗ್ರಾಹಕರು ಮತ್ತು ವರ್ತಕರು ಇಬ್ಬರಿಗೂ ಹೊಡೆತ ಕೊಟ್ಟಿದೆ"ಎಂದು ಕರ್ನಾಟಕ ವೈನ್ ವರ್ತಕರ ಒಕ್ಕೂಟದ ಅಧ್ಯಕ್ಷ ಎಸ್ ಗುರುಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Liquor shops in Karnataka running out of stock, Know Why

ಹಳೆ ವ್ಯವಸ್ಥೆ ಮತ್ತು ಹೊಸ ವ್ಯವಸ್ಥೆ ಹೇಗೆ?
ಹಳೆಯ ವ್ಯವಸ್ಥೆ ಅಡಿ ಮದ್ಯದಂಗಡಿ ಮಾಲೀಕರು ಮೊದಲು ಹಣ ವರ್ಗಾವಣೆ ಮಾಡಿ ಆರ್ಡರ್ ಕೊಡುತ್ತಿದ್ದರು. ಕೆಲವರು ಫೋನ್ ಮೂಲಕ ಆರ್ಡರ್ ಕೊಟ್ಟು ಬಳಿಕ ಹಣ ವರ್ಗಾವಣೆ ಮಾಡುತ್ತಿದ್ದರು. ಹೊಸ ವ್ಯವಸ್ಥೆಯಡಿ ಮದ್ಯದಂಗಡಿ ಮಾಲೀಕರು ಹೊಸ ಸಾಫ್ಟ್‌ವೇರ್ ಮೂಲಕ ರಾತ್ರಿ 9 ರಿಂದ ಬೆಳಗ್ಗೆ 9 ರ ಅವಧಿಯಲ್ಲಿ ಮಾತ್ರವೇ ಇಂಡೆಂಟ್ ಕಳುಹಿಸಬೇಕು.

ಅನೇಕ ಮದ್ಯ ವರ್ತಕರಿಗೆ ಹೊಸ ತಂತ್ರಜ್ಞಾನದ ಪರಿಚಯ ಇರುವುದು ಕಡಿಮೆ. ಜೊತೆಗೆ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆಯೂ ಎದುರಾಗಿದೆ. ಇದು ಮದ್ಯದಂಗಡಿಗಳಿಗೆ ತಲೆನೋವಾಗಿ ಪರಿಣಿಸಿಮಿಸಿದೆ. ಹೀಗಾಗಿ, ಮದ್ಯದಂಗಡಿ ಮಾಲೀಕರು ಹೊಸ ವ್ಯವಸ್ಥೆ ಅಳವಡಿಕೆಗೆ ಸರಕಾರ ಹೆಚ್ಚು ಸಮಯಾವಕಾಶ ಕೊಡಬೇಕು. ಅಲ್ಲಿಯವರೆಗೆ ಆಫ್‌ಲೈನ್‌ನಲ್ಲೇ ಆರ್ಡರ್ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎರಡ್ಮೂರು ದಿನದಲ್ಲಿ ತಾಂತ್ರಿಕ ಸಮಸ್ಯೆ ನಿವಾರಣೆ: ಸಚಿವರ ಭರವಸೆ
ಮದ್ಯದಂಗಡಿಗಳು ಲಿಕ್ಕರ್ ಖರೀದಿಗೆ ರೂಪಿಸಲಾಗಿರುವ ಹೊಸ ತಂತ್ರಾಂಶದಲ್ಲಿ ತಾಂತ್ರಿಕ ದೋಷ ಎದುರಾಗಿರುವುದನ್ನು ಅಬಕಾರಿ ಸಚಿವ ಕೆ ಗೋಪಾಲಯ್ಯ ಒಪ್ಪಿಕೊಂಡಿದ್ದಾರೆ. ಎರಡು ಮೂರು ದಿನಗಳಲ್ಲಿ ಈ ಸಮಸ್ಯೆ ನಿವಾರಣೆ ಆಗಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+