ಕೆಐಎಎಲ್ ನ ಸ್ಮಾರ್ಟ್ ಬೋರ್ಡಿಂಗ್ ವ್ಯವಸ್ಥೆ ಉಪಯೋಗವೇನು?

ಬೆಂಗಳೂರು, ಅಕ್ಟೋಬರ್ 09: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂದಿನ ವರ್ಷದಿಂದ ಸ್ಮಾರ್ಟ್ ಬೋರ್ಡಿಂಗ್ ವ್ಯವಸ್ಥೆ ಜಾರಿಗೆ ತರಲು ಬಿಐಎಎಲ್ ಯೋಜನೆ ಹಾಕಿಕೊಂಡಿರುವ ಹಿಂದಿನ ಉದ್ದೇಶವೇನು? ಈ ವ್ಯವಸ್ಥೆಯ ಉಪಯೋಗವೇನು? ವಿವರ ಇಲ್ಲಿದೆ.

ಅಕ್ಟೋಬರ್​ 4, 2018ರಿಂದ ಈ ಹೊಸ ವ್ಯವಸ್ಥೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಜಾರಿಗೆ ಬರಲಿದ್ದು, ಡಿಸೆಂಬರ್​ 31,2018ರ ವೇಳೆಗೆ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಳ್ಳಲಿದೆ ಎಂದು KIAL ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಹರಿ ಮರಾರ್ ಹೇಳಿದ್ದಾರೆ.

ಇಷ್ಟಕ್ಕೂ ಸ್ಮಾರ್ಟ್ ವ್ಯವಸ್ಥೆ ಉದ್ದೇಶವೇನು?: ತಂತ್ರಜ್ಞಾನವನ್ನು ಬಳಸಿ ಉತ್ತಮ ಪ್ರಯಾಣ ಅನುಭವ ನೀಡುವುದು ಮತ್ತು ಭವಿಷ್ಯದ ಸ್ಮಾರ್ಟ್​ ವಿಮಾನ ನಿಲ್ದಾಣ ನಿರ್ಮಿಸುವುದು ಬಿಐಎಎಲ್ ಉದ್ದೇಶ.

Know Why is BIAL using Aadhaar-enabled entry system KIAL?

* ಆಧಾರ್ ಆಧಾರಿತ ಎಂಟ್ರಿ ಹಾಗೂ ಬಯೋಮೆಟ್ರಿಕ್ ಇ ಬೋರ್ಡಿಂಗ್ ವ್ಯವಸ್ಥೆ ಮೂಲಕ ಪ್ರತಿ ಪ್ರಯಾಣಿಕರ ಗುರುತು ಪತ್ತೆ ಸಾಧ್ಯ. ವಿಮಾನಯಾನ ಪ್ರಯಾಣಿಕರ ಐಡೆಂಟಿಟಿ ಹಾಗೂ ಮಾಹಿತಿ ಲಭ್ಯತೆ ಬಗ್ಗೆ ಹಾಲಿ ವ್ಯವಸ್ಥೆಯಲ್ಲಿರುವ ಎಲ್ಲಾ ಲೋಪಗಳನ್ನು ಹೊಸ ವ್ಯವಸ್ಥೆ ಸರಿ ಪಡಿಸಲಿದ್ದು, ದುಷ್ಕರ್ಮಿಗಳನ್ನು ಸುಲಭವಾಗಿ ತಡೆಹಿಡಿಯಬಹುದು.

ಕೆಂಪೇಗೌಡ ವಿ. ನಿಲ್ದಾಣದಲ್ಲಿ ಆಧಾರ್ ಆಧಾರಿತ ಸ್ಮಾರ್ಟ್ ಬೋರ್ಡಿಂಗ್
* ಚೆಕ್ ಪಾಯಿಂಟ್ ನಲ್ಲಿ ಕೆಲವೇ ಸೆಕೆಂಡುಗಳಲ್ಲಿ ಪರಿಶೀಲನೆ ಮುಗಿಸಿ ಬೋರ್ಡಿಂಗ್ ಗೇಟ್ ಹಾದಿ ಹಿಡಿಯಬಹುದು.
* ಸಂಪೂರ್ಣ ಸ್ಕೀನಿಂಗ್ ವ್ಯವಸ್ಥೆ 10 ನಿಮಿಷದಲ್ಲೇ ಮುಗಿಯಲಿದೆ. ಹಾಲಿ ವ್ಯವಸ್ಥೆಯಲ್ಲಿ 20-25 ನಿಮಿಷವಾದರೂ ಬೇಕಾಗುತ್ತದೆ.
* ಅತಿ ಹೆಚ್ಚು ಪ್ರಯಾಣ ದಟ್ಟಣೆ ಇರುವ ನಿಲ್ದಾಣಗಳಲ್ಲಿ ಈ ವ್ಯವಸ್ಥೆಯಿಂದ ಒಮ್ಮೆಗೆ ಹೆಚ್ಚು ಪ್ರಯಾಣಿಕರು ಎಂಟ್ರಿ ಪಡೆಯಲು ಅನುಕೂಲಕರ.

* ಮಾರ್ಚ್ 30,2018ರ ವೇಳೆಗೆ ಈ ಯೋಜನೆ ಒಂದು ಹಂತ ತಲುಪಲಿದ್ದು, ನಂತರ ಎರಡನೇ ಹಂತದಲ್ಲಿ ದೇಶಿ ವಿಮಾನಯಾನ ಪ್ರಯಾಣಿಕರು ಇದರ ಲಾಭ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+