ಬೆಂಗಳೂರಲ್ಲಿ ವಿಮಾನವೇರಲು ಆಧಾರ್ ಕಡ್ಡಾಯ !
ಬೆಂಗಳೂರು, ಅಕ್ಟೋಬರ್ 09: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂದಿನ ವರ್ಷದಿಂದ ಸ್ಮಾರ್ಟ್ ಬೋರ್ಡಿಂಗ್ ವ್ಯವಸ್ಥೆ ಜಾರಿಗೆ ತರಲು ಬಿಐಎಎಲ್ ಯೋಜನೆ ಹಾಕಿಕೊಂಡಿದೆ.
ಪ್ರಾಯೋಗಿಕ ಹಂತವಾಗಿ ಎರಡು ತಿಂಗಳು ಈ ಯೋಜನೆ ಜಾರಿಗೆ ಬರಲಿದೆ. ಇದಾದ ಬಳಿಕ ಆಧಾರ್ ಆಧಾರಿತ ವ್ಯವಸ್ಥೆಯುಳ್ಳ ಮೊದಲ ವಿಮಾನ ನಿಲ್ದಾಣ ಎಂಬ ಹಿರಿಮೆಗೆ ನಮ್ಮ ಬೆಂಗಳೂರು ವಿಮಾನ ನಿಲ್ದಾಣ ಪಾತ್ರವಾಗಲಿದೆ.

ಭಾರತದಲ್ಲಿ ಇದೇ ಮೊದಲ ಬಾರಿಗೆ ಆಧಾರ್ ಆಧಾರಿತ ಪ್ರವೇಶ ವ್ಯವಸ್ಥೆ ಮತ್ತು ಬಯೋಮೆಟ್ರಿಕ್ ಬೋರ್ಡಿಂಗ್ ವ್ಯವಸ್ಥೆಯುಳ್ಳ ವಿಮಾನ ನಿಲ್ದಾಣವಾಗುವತ್ತ ಕೆಐಎಎಲ್ ಸಾಗಿದೆ.
ಯೋಜನೆಯ ರೂಪುರೇಷೆಗಳ ಪ್ರಕಾರ 2018 ಡಿಸೆಂಬರ್ ವೇಳೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಿದೆ. ಡಿಜಿಟಲ್ ಇಂಡಿಯಾ ಯೋಜನೆಗೆ ಅನುಗುಣವಾಗಿ ಸ್ಮಾರ್ಟ್ ಏರ್ಪೋರ್ಟ್ ಮೇಲ್ದರ್ಜೆಗೇರಿಸಲಾಗುತ್ತಿದೆ.
ಅಕ್ಟೋಬರ್ 4, 2018ರಿಂದ ಈ ಹೊಸ ವ್ಯವಸ್ಥೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಜಾರಿಗೆ ಬರಲಿದ್ದು, ಡಿಸೆಂಬರ್ 31,2018ರ ವೇಳೆಗೆ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಳ್ಳಲಿದೆ.












Click it and Unblock the Notifications