ಬೆಂಗಳೂರಿಗರ ಪ್ರಯಾಣ ಸುಲಭಗೊಳಿಸಲಿರುವ ಈ ನಾಲ್ಕು ಮೆಟ್ರೋ ಮಾರ್ಗಗಳ ಬಗ್ಗೆ ತಿಳಿಯಿರಿ
ಬೆಂಗಳೂರು, ಡಿ.06: ರಾಜಧಾನಿಯ ಟ್ರಾಫಿಕ್‌ನಿಂದ ಕಿರಿಕಿರಿ ಅನುಭವಿಸುತ್ತಿರುವವರಿಗೆ, ದೂರದ ಸ್ಥಳಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗದೆ ಪರದಾಡುತ್ತಿರುವವರಿಗೆ ಮುಂದಿನ ವರ್ಷ ನಮ್ಮ ಮೆಟ್ರೋ ಹೊಸ ಉಡುಗೊರೆ ನೀಡಲಿದೆ.
ಹೌದು, ಮುಂದಿನ ವರ್ಷದಲ್ಲಿ ಪ್ರಯಾಣಿಕರ ಸೇವೆಗೆ ತೆರೆಯಲಿರುವ ಈ ಮಾರ್ಗಗಳಿಂದ ಬೆಂಗಳೂರಿನ ಪ್ರಮುಖ ಸಂಚಾರ ದಟ್ಟಣೆಯ ಪ್ರದೇಶಗಳು ನಿಟ್ಟುಸಿರುವ ಬಿಡಬಹುದು.
ಡಿಸೆಂಬರ್ 9ಕ್ಕೆ ಏರ್ಪೋರ್ಟ್ ಎಕ್ಸ್ಪ್ರೆಸ್ ಮೆಟ್ರೋಗೆ ಶಂಕುಸ್ಥಾಪನೆ
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನಮ್ಮ ಮೆಟ್ರೋದ ನಾಲ್ಕು ಹೊಸ ವಿಸ್ತರಣೆಗಳು 2023 ರಲ್ಲಿ ಸಾರ್ವಜನಿಕರಿಗೆ ಮುಕ್ತವಾಗಲಿವೆ. ಈ ಮಾರ್ಗಗಳು ನಗರದ ಹಲವಾರು ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಜೊತೆಗೆ ಜನರ ಪ್ರಯಾಣವನ್ನು ಸುಲಭಗೊಳಿಸುತ್ತದೆ.

ವೈಟ್‌ಫೀಲ್ಡ್‌ನಿಂದ ಬೈಯಪ್ಪನಹಳ್ಳಿವರೆಗಿನ ಪರ್ಪಲ್ ಲೈನ್
ವೈಟ್‌ಫೀಲ್ಡ್‌ನಿಂದ ಬೈಯಪ್ಪನಹಳ್ಳಿವರೆಗಿನ ಮೆಟ್ರೋದ ನೇರಳೆ ಮಾರ್ಗವು ಫೆಬ್ರವರಿ-ಮಾರ್ಚ್ 2023 ರ ವೇಳೆಗೆ ಕಾರ್ಯನಿರ್ವಹಿಸಲಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಅಕ್ಟೋಬರ್‌ನಲ್ಲಿ ಇದರ ಪ್ರಾಯೋಗಿಕ ಓಡಾಟವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಮಾರ್ಗವು ಮಹದೇವಪುರ, ಗರುಡಾಚಾರ್ಪಾಳ್ಯ, ಹೂಡಿ ಜಂಕ್ಷನ್, ಸೀತಾರಾಮ ಪಾಳ್ಯ, ಕುಂದಲಹಳ್ಳಿ, ನಲ್ಲೂರಹಳ್ಳಿ, ಶ್ರೀ ಸತ್ಯಸಾಯಿ ಆಸ್ಪತ್ರೆ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ, ಚನ್ನಸಂದ್ರ ಮತ್ತು ವೈಟ್‌ಫೀಲ್ಡ್‌ನಲ್ಲಿ ನಿಲುಗಡೆ ಹೊಂದಿರುತ್ತದೆ.

ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್‌ವರೆಗೆ ಹಸಿರು ಮಾರ್ಗ
ಇನ್ನು, ರೇಷ್ಮೇ ಸಂಸ್ಥೆ ನಿಲ್ದಾಣದಿಂದ ನಾಗಸಂದ್ರದವರೆಗೆ ಅಸ್ತಿತ್ವದಲ್ಲಿರುವ ಹಸಿರು ಮಾರ್ಗವನ್ನು ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (BIEC) ವರೆಗೆ ವಿಸ್ತರಿಸಲಾಗುತ್ತಿದೆ. ಇದು ಮುಂಬರುವ ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಈ ವಿಸ್ತರಣೆಯಾಗುವ ಹಸಿರು ಮಾರ್ಗವು ಮಂಜುನಾಥ್ ನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರದಲ್ಲಿ ಹೆಚ್ಚುವರಿ ನಿಲುಗಡೆಗಳನ್ನು ಹೊಂದಿರುತ್ತದೆ. ಇದರಿಂದ ತುಮಕೂರು ಮಾರ್ಗವಾಗಿ ಓಡಾಡುವವರಿಗೆ ಹೆಚ್ಚು ಅನುಕೂಲವಾಗಲಿದೆ.

2023 ರಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ ಹಳದಿ ಮಾರ್ಗದಲ್ಲಿ ಮೆಟ್ರೋ
ಅತೀ ಹೆಚ್ಚು ಸಂಚಾರ ದಟ್ಟಣೆಯನ್ನು ಕಾಣುವ ಪ್ರಮುಖ ಪ್ರದೇಶ ಎಲೆಕ್ಟ್ರಾನಿಕ್ಸ್ ಸಿಟಿ. ಇಲ್ಲಿ ಮೆಟ್ರೋ ಅವಶ್ಯಕತೆ ಅಧಿಕವಾಗಿದೆ. ಇದಕ್ಕಾಗಿ ಹಲವು ಬಾರಿ ಒತ್ತಡ ಹಾಕಲಾಗಿದೆ. ಈ 19.1 ಕಿಲೋಮೀಟರ್ ಉದ್ದದ ಬೊಮ್ಮಸಂದ್ರ- ಸೆಂಟ್ರಲ್ ಸಿಲ್ಕ್ ಬೋರ್ಡ್ ಹಳದಿ ಮಾರ್ಗ ಜೂನ್ 2023 ರಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಶೇಕಡಾ 95 ಕ್ಕಿಂತ ಹೆಚ್ಚು ಕೆಲಸ ಪೂರ್ಣಗೊಂಡಿದೆ.
ಈ ಮಾರ್ಗದಲ್ಲಿ ಆರ್‌ವಿ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್‌ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲು ಗೇಟ್, ಸಿಂಗಸಂದ್ರ, ಹೊಸ ರಸ್ತೆ, ಬೆರತನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ಹುಸ್ಕೂರು ರಸ್ತೆ, ಹೆಬ್ಬಗೋಡಿ, ಬೊಮ್ಮಸಂದ್ರದಲ್ಲಿ ನಿಲ್ದಾಣಗಳಿವೆ.

ಸಬ್ ಅರ್ಬನ್ ರೈಲು ಯೋಜನೆಗೆ ಹೆಚ್ಚಿದ ಒತ್ತಡ
ಬೆಂಗಳೂರು ನಗರದಿಂದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ವರೆಗೆ ವಿಸ್ತರಿಸುವ ನಮ್ಮ ಮೆಟ್ರೋದ ಈ ನೀಲಿ ಮಾರ್ಗವು 37 ಕಿಲೋಮೀಟರ್ ಉದ್ದವಿರುತ್ತದೆ. ನೀಲಿ ಮಾರ್ಗದಲ್ಲಿ 19 ನಿಲ್ದಾಣಗಳು ಇರಲಿವೆ. ಇದು 2025 ರ ವೇಳೆಗೆ ಪ್ರಯಾಣಿಕರಿಗೆ ಮುಕ್ತವಾಗಲಿದೆ.
ಮೆಟ್ರೋ ಜೊತೆಗೆಯೇ ಹಲವಾರು ಟ್ವಿಟರ್ ಬಳಕೆದಾರರು ಸಬ್ ಅರ್ಬನ್ ರೈಲಿಗೆ ಬೇಡಿಕೆಯಿಟ್ಟಿದ್ದಾರೆ. ಬೆಂಗಳೂರಿಗೆ ಮೆಟ್ರೋ ವರದಾನವೇ? ಅಥವಾ ಬೆಂಗಳೂರು ಶಾಶ್ವತವಾಗಿ ಹೊರಬೇಕಾದ ಶಿಲುಬೆಯೇ? ಇದರಿಂದ ಉಪನಗರ ರೈಲು ಯೋಜನೆಗೆ ಅಡ್ಡಿಯಾಯಿತು. ಇದು ಬಿಆರ್‌ಟಿಎಸ್ ಕಾರ್ಯಗತಗೊಳಿಸದಂತೆ ತಡೆಯುತ್ತದೆ. ಸಬ್ ಅರ್ಬನ್ ಮತ್ತು ಬಿಆರ್‌ಟಿಎಸ್ ಕಾರ್ಯಗತಗೊಳಿಸುವುದು ತುಂಬಾ ಸುಲಭ ಮತ್ತು ಮೆಟ್ರೋಗಿಂತ ಕಡಿಮೆ ದರ ಹೊಂದಿವೆ" ಎಂದು ಬೆಂಗಳೂರು ಮೊಬಿಲಿಟಿ ಎಂಬ ಹೇಳಿದೆ.
ಮಾಹಿತಿ ಕೃಪೆ- ಟೈಮ್ಸ್ ನೌ, ಹಿಂದೂಸ್ತಾನ್ ಟೈಮ್ಸ್)