ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪವರ್ ಕಟ್ ಬಗ್ಗೆ ಮಾಹಿತಿ ನೀಡಲು ಬರುತ್ತೆ ಬೆಸ್ಕಾಂ APP

|
Google Oneindia Kannada News

ಬೆಂಗಳೂರು, ಜ. 16 : ಯಾವಾಗ ಕರೆಂಟ್ ಹೋಗುತ್ತೆ?, ಅನಿಯಮಿತ ವಿದ್ಯುತ್ ಕಡಿತ ಯಾವಾಗ? ಮುಂತಾದ ಮಾಹಿತಿಗಳನ್ನು ಬೆಂಗಳೂರು ವಿದ್ಯುತ್ ಸರಬರಾಜು ಮಂಡಳಿ (ಬೆಸ್ಕಾಂ)ಗ್ರಾಹಕರ ಕೈಗೆ ನೀಡಲು ಮುಂದಾಗಿದೆ. ಇದಕ್ಕಾಗಿ ಮೊಬೈಲ್ ಅಪ್ಲಿಕೇಶನ್‌ ಅನ್ನು ಸಿದ್ಧಪಡಿಸುತ್ತಿದೆ.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಈ ಕುರಿತು ಮಾಹಿತಿ ನೀಡಿದ್ದಾರೆ. ನಿಯಮಿತ ಮತ್ತು ಅನಿಯಮಿತ ಪವರ್ ಕಟ್ ಬಗ್ಗೆ ಜನರಿಗೆ ಮಾಹಿತಿ ನೀಡಲು ಮೊಬೈಲ್ ಅಪ್ಲಿಕೇಶನ್ ಆರಂಭಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

bescom

ಸದ್ಯ ಈ ಅಪ್ಲಿಕೇಶನ್‌ನ ತಯಾರಿ ನಡೆಯುತ್ತಿದೆ. ಮೊದಲ ಹಂತದಲ್ಲಿದೆ ಸ್ಮಾಟ್ ಹೊಂದಿರುವವರು ಈ ಅಪ್ಲಿಕೇಶನ್ ಡೌನ್ ಮಾಡಿಕೊಂಡು ಮಾಹಿತಿ ಪಡೆಯಬಹುದು. ನಂತರ ಬೆಸ್ಕಾಂ ಮೊಬೈಲ್ ಸಂಖ್ಯೆ ನೀಡಿದ ಗ್ರಾಹಕರಿಗೆ ಈ ಕುರಿತು ಎಸ್‌ಎಂಎಸ್ ಕಳಿಸುವ ವ್ಯವಸ್ಥೆ ರೂಪಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. [ಮೇ ತಿಂಗಳಿನಿಂದ ಬೆಸ್ಕಾಂ ಹೊಸ ಪದ್ಧತಿ]

ಆನ್‌ಲೈನ್‌ನಲ್ಲಿ ಹೆಸರು ಬದಲಾಯಿಸಿ : ಬೆಸ್ಕಾಂನಲ್ಲಿ ಗ್ರಾಹಕರು ತಮ್ಮ ಹೆಸರು ಮತ್ತು ಇತರ ಮಾಹಿತಿಗಳನ್ನು ಬದಲಾವಣೆ ಮಾಡಲು ಹತ್ತಿರದ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕಾಗಿದೆ. ಇದನ್ನು ಆನ್‌ಲೈನ್‌ನಲ್ಲಿ ಮೂಲಕ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ ಎಂದರು. [ಜೈಲಿಗೆ ಕಳಿಸ್ತೀವಿ ಹುಷಾರ್... ಅಧಿಕಾರಿಗಳಿಗೆ ಹೈ ಎಚ್ಚರಿಕೆ]

ಸಾಮಾಜಿಕ ತಾಣಗಳಲ್ಲೂ ಮಾಹಿತಿ : ಅಂದಹಾಗೆ ಸದ್ಯ ಪವರ್ ಕಟ್ ಬಗ್ಗೆ ಬೆಸ್ಕಾಂ ಸಾಮಾಜಿಕ ಜಾಲ ತಾಣಗಳಲ್ಲಿ ಮಾಹಿತಿ ನೀಡುತ್ತಿದೆ. ಬೆಸ್ಕಾಂ ಫೇಸ್‌ಬುಕ್‌ ಪುಟಕ್ಕೆ ನೀವು ಭೇಟಿ ನೀಡಿದರೆ, ಅಲ್ಲಿ ಯಾವ ಬಡಾವಣೆಗಳಲ್ಲಿ ಯಾವಾಗ ವಿದ್ಯುತ್ ಕಡಿತವಾಗಲಿದೆ ಎಂಬ ಮಾಹಿತಿ ಲಭ್ಯವಿರುತ್ತದೆ. [ಬೆಸ್ಕಾಂ ಫೇಸ್ ಬುಕ್ ಪುಟ]

English summary
Bangalore Electricity Supply Company (BESCOM) will launch a mobile application which will enable consumers to get alerts about scheduled and unscheduled power cuts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X