ಕಿರಣ್ ಮಜುಂದಾರ್ ಶಾ ನಿಮ್ಮ ಶೋ ಆಫ್ ಸೋಷಿಯಲ್ ಮೀಡಿಯಾದಲ್ಲಿ ಬೇಡ: ನಿ. ಪೊಲೀಸ್ ಅಧಿಕಾರಿ!
Kiran Mazumdar Shaw: ಕಳೆದ ಕೆಲವು ದಿನಗಳಿಂದ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇದೇ ಕಾರಣಕ್ಕೆ ಅವರು ಕೆಲವೊಂದು ವಿಚಾರಗಳಲ್ಲಿ ಟೀಕೆ ಹಾಗೂ ಟ್ರೋಲ್‌ಗೆ ಕಾರಣವಾಗಿರುವುದು ಸಹ ಇದೆ. ದಯವಿಟ್ಟು ನಿಮ್ಮ ಶೋ ಆಫ್ /ಆಡಂಬರ ಮತ್ತು ಸಂಪತ್ತಿನ ಪ್ರದರ್ಶನವನ್ನು ನಿಮ್ಮ ಖಾಸಗಿಯಾಗಿ ಇರಿಸಿಕೊಳ್ಳಿ ಎಂದು ನಿ. ಪೊಲೀಸ್ ಅಧಿಕಾರಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಈಚೆಗೆ ತಮ್ಮ ಕುಟುಂಬದ ಮದುವೆ ಕಾರ್ಯಕ್ರಮದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜನ ಈ ಫೋಟೋಗೆ ವಿಶ್ ಮಾಡಿದ್ದಾರೆ. ಬೆಂಗಳೂರಿನ ಮೂಲಸೌಕರ್ಯ ಹಾಗೂ ವಿವಿಧ ಸಮಸ್ಯೆಗಳ ಬಗ್ಗೆ ಕಿರಣ್ ಮಜುಂದಾರ್ ಶಾ ಪ್ರಶ್ನೆ ಮಾಡಿದ್ದರು. ಅಲ್ಲದೇ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳನ್ನು ಸಹ ತರಾಟೆಗೆ ತೆಗೆದುಕೊಂಡಿದ್ದರು. ಇದಾದ ನಂತರ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮದುವೆಗೆ ಆಹ್ವಾನವನ್ನೂ ನೀಡಿದ್ದರು.

ಈ ವಿವಾಹ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಅಲ್ಲದೇ ಈ ಫೋಟೋಗಳನ್ನು ಡಿ.ಕೆ ಶಿವಕುಮಾರ್ ಅವರು ಸೇರಿದಂತೆ ಹಲವು ಗಣ್ಯರು ಸಹ ಹಂಚಿಕೊಂಡಿದ್ದಾರೆ. ಕಿರಣ್ ಅವರು ಹಂಚಿಕೊಂಡಿರುವ ಪೋಸ್ಟ್‌ಗೆ ಮಾಜಿ ಐಪಿಎಸ್ ಮತ್ತು ಪೊಲೀಸ್ ಆಯುಕ್ತರು & ಬಿಜೆಪಿ ಮುಖಂಡ ಭಾಸ್ಕರ್ ರಾವ್ ಅವರು ತೀಕ್ಷ್ಣವಾಗಿ ರಿಯಾಕ್ಟ್ ಮಾಡಿದ್ದಾರೆ.
ಈ ರೀತಿಯ ಫೋಟೋಗಳನ್ನು ದಯವಿಟ್ಟು ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ ಎಂದಿರುವ ಅವರು, ಈ ರೀತಿಯ ಶೋ ಆಫ್ ಅನ್ನು ನಿಮ್ಮ ಹಿತೈಷಿಗಳ ನಡುವೆ ಮಾತ್ರ ಹಂಚಿಕೊಳ್ಳಿ. ಬಹುಶಃ ನಿಮ್ಮ ಸೋಷಿಯಲ್ ಮೀಡಿಯಾ ಇದಕ್ಕೆ ಸೂಕ್ತವಾದ ವೇದಿಕೆ ಅಲ್ಲ ಎಂದು ಸಲಹೆ ನೀಡಿದ್ದಾರೆ.
ಕಿರಣ್ ಮಜುಂದಾರ್ ಶಾ ಪೋಸ್ಟ್: ಇನ್ನು ಕಿರಣ್ ಮಜುಂದಾರ್ ಶಾ ಅವರು ನನ್ನ ಸೋದರಳಿಯ ಮತ್ತು ವಧುವಿಗೆ ಅತ್ಯಂತ ಸ್ಮರಣೀಯ, ಸೊಗಸಾದ ಮತ್ತು ಅದ್ಭುತವಾದ ವಿವಾಹ ಆರತಕ್ಷತೆಯನ್ನು ಆಯೋಜಿಸಿದ್ದಕ್ಕಾಗಿ ಮತ್ತು ನೃತ್ಯ ಸಂಯೋಜನೆ ಮಾಡಿದ್ದಕ್ಕಾಗಿ ಆಯೇಷಾ ಕತ್ರಕ್‌ಗೆ ಧನ್ಯವಾದಗಳು. ಅದ್ಭುತವಾದ ಉತ್ತಮ ಸೇವೆ ನೀಡಿದ್ದಕ್ಕಾಗಿ TajWestEndಗೆ ಧನ್ಯವಾದಗಳು. 🙏🙏🙏 ಎಂದು ಪೋಸ್ಟ್ ಮಾಡಿದ್ದರು.
ಬೆಂಗಳೂರಿನಲ್ಲಿ ಆಶ್ಲೇ ಪೂರ್ಣಂದಾರಿ ಮತ್ತು ಎರಿಕ್ ಮಜುಂದಾರ್ ಅವರ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದ್ದೆ. ನವವಿವಾಹಿತರು ಜೀವನದಲ್ಲಿ ಸಂತೋಷ, ಪ್ರೀತಿ ಮತ್ತು ಒಗ್ಗಟ್ಟಿನಿಂದ ತುಂಬಿರಲಿ ಎಂದು ಹಾರೈಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಹ ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡಿದ್ದರು.












Click it and Unblock the Notifications