ಅಪಹೃತರಿಗೆ ಅಪಹರಣಕಾರರೇ ಹಣ ನೀಡಿದ ವಿಚಿತ್ರ ಘಟನೆ
ಬೆಂಗಳೂರು, ಫೆಬ್ರವರಿ 25: ಅಪಹರಣವಾಗಿದ್ದ ಶಿಕ್ಷಣ ಸಂಸ್ಥೆಯೊಂದರ ಮಾಲೀಕ ಅರಣ್ಯದಲ್ಲಿ ಪತ್ತೆಯಾಗಿದ್ದಾರೆ. ಗೋವಿಂದರಾಜನಗರದ ಗಂಗಾಧರ ಲೇಔಟ್‌ನ ಇವಾಸಿ ಭದ್ರಯ್ಯ(68) ಅಪಹೃತರು. ಹೆಗ್ಗನಹಳ್ಳಿ ಇರುವ ಕಿರಣ್ ಪಬ್ಲಿಕ್ ಸ್ಕೂಲ್‌ನ ಸಂಸ್ಥಾಪಕರಾಗಿದ್ದಾರೆ.
ಕೆಲ ತಿಂಗಳಿಂದ ವ್ಯಕ್ತಿಯಿಬ್ಬರು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅಲ್ಲದೆ ತಾನು ಹೇಳುವವರಿಗೆ ಶಾಲೆಯಲ್ಲಿ ಸೀಟು ನೀಡಿ ಬಂದ ಹಣವನ್ನು ತನಗೆ ಕೊಡುವಂತೆ ಒತ್ತಾಯಿಸುತ್ತಿದ್ದ, ಆದರೆ ಆತನ ಮಾತನ್ನು ಭದ್ರಯ್ಯ ನಿರಾಕರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದರಿಂದ ಆಕ್ರೋಶಗೊಂಡ ಆರೋಪಿ ಅಪಹರಣಕ್ಕೆ ಸಂಚು ರೂಪಿಸಿದ್ದ, ಅದರಂತೆ ಫೆ.19ರ ಬೆಳಗ್ಗೆ 5.30ರಲ್ಲಿ ಭದ್ರಯ್ಯ ವಾಯುವಿಹಾರಕ್ಕೆ ತೆರಳಿದ್ದಾಗ ಅಪಹರಣ ಮಾಡಿದ್ದಾರೆ.

ಬಳಿಕ ಮನೆಗೆ ಬಾರದಿದ್ದರಿಂದ ಪೊಲೀಸ್ ಠಾಣೆಗೆ ತೆರಳಿ ಕುಟುಂಬಸ್ಥರು ದೂರು ಸಲ್ಲಿಸಿದ್ದರು. ಭದ್ರಯ್ಯರನ್ನು ಐದು ದಿನಗಳ ಕಾಲ ಊರು ಊರು ಸುತ್ತಿಸಿದ ಅಪಹರಣಕಾರರು, ಹಣ ನೀಡುವಂತೆ ಬೆದರಿಸಿದ್ದರು. ಪೊಲೀಸರು ಹುಡುಕಾಟ ನಡೆಸುತ್ತಿರುವುದು ತಿಳಿಯುತ್ತಿದ್ದಂತೆ ಭದ್ರಯ್ಯ ಅವರನ್ನು ಚಾಮರಾಜನಗರದ ಸತ್ಯಮಂಗಲದ ಕಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದರು. ಮನೆಗೆ ತೆರಳಲು ಆರೋಪಿಗಳೇ ಹಣ ನೀಡಿದ್ದರು.












Click it and Unblock the Notifications