ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಸ್ ಯಡಿಯೂರಪ್ಪ, ಅಶ್ವಥ ನಾರಾಯಣ ವಿರುದ್ಧ ಕಿಡ್ನಾಪ್ ಕೇಸ್

|
Google Oneindia Kannada News

Recommended Video

ಬಿಎಸ್ ಯಡಿಯೂರಪ್ಪ, ಅಶ್ವಥ ನಾರಾಯಣ ವಿರುದ್ಧ ಕಿಡ್ನಾಪ್ ಕೇಸ್

ಬೆಂಗಳೂರು, ಫೆಬ್ರವರಿ 08: ಬಜೆಟ್ ಅಧಿವೇಶನದಲ್ಲಿ ಶಾಸಕರು ಗೈರಾಗಿದ್ದರೆ ಅದಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಶಾಸಕ ಅಶ್ವತ್ಥ ನಾರಾಯಣ ಅವರೇ ಕಾರಣ, ಹಲವು ಶಾಸಕರನ್ನು ಕಿಡ್ನಾಪ್ ಮಾಡಿ, ಇರಿಸಿಕೊಳ್ಳಲಾಗಿದೆ, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಿ ಎಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ವಕೀಲರೊಬ್ಬರು ದೂರು ದಾಖಲಿದ್ದಾರೆ.

ಶಾಸಕರನ್ನು ಕಿಡ್ನಾಪ್ ಮಾಡಿದ್ದಾರೆ, ಹೀಗಾಗಿ, ವಿಧಾನಮಂಡಲ ಅಧಿವೇಶನದಲಿ ಶಾಸಕರ ಸಂಖ್ಯೆ ಕಡಿಮೆಯಾಗಿದೆ. ಕಿಡ್ನಾಪ್ ಮಾಡಿ ಬಲವಂತವಾಗಿ ಇರಿಸಿಕೊಳ್ಳಲಾಗಿದ್ದು, ಇದರಿಂದ ಬಜೆಟ್ ಅಧಿವೇಶನಕ್ಕೆ ಶಾಸಕರು ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಬಿಎಸ್​ಯಡಿಯೂರಪ್ಪ, ಮಲ್ಲೇಶ್ವರಂನ ಶಾಸಕ ಅಶ್ವಥ್ ನಾರಾಯಣ್, ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ವಕೀಲ ಆರ್​.ಎಲ್​.ಎನ್.ಮೂರ್ತಿ ಎಂಬುವರು ದೂರು ನೀಡಿದ್ದಾರೆ.

ಬಜೆಟ್ಟಿಗೂ ಮುನ್ನ ಮೋದಿ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿಬಜೆಟ್ಟಿಗೂ ಮುನ್ನ ಮೋದಿ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ

ಜನರ ಕಷ್ಟಗಳ ಬಗ್ಗೆ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಮಾತನಾಡುವುದನ್ನು ತಪ್ಪಿಸಿದ್ದಾರೆ. ಶಾಸಕರ ಅಪಹರಣ ಇಡೀ ಕರ್ನಾಟಕದ ಜನತೆಗೆ ಮಾಡಿರುವ ಅವಮಾನ, ಪ್ರಜಾಪ್ರಭುತ್ವ ವ್ಯವಸ್ಥೆ ಮಾಡಿರುವ ದ್ರೋಹ. ಹೀಗಾಗಿ ಬಿಎಸ್​ವೈ ಮತ್ತು ಅಶ್ವಥ್ ನಾರಾಯಣ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮೂರ್ತಿ‌ ಮನವಿ ‌ಮಾಡಿದ್ದಾರೆ.

Kidnap case filed against BS Yeddyurappa and MLA Ashwath Narayan

ಇದು ಬಿಜೆಪಿ ನಾಯಕರಿಗೆ ಮಾತ್ರವಲ್ಲ, ಇದೇ ಕ್ರಮ ಅನುಸರಿಸುವ ಇತರೆ ಪಕ್ಷಗಳಿಗೂ ಅನ್ವಯವಾಗಲಿದೆ. ನಾನು ಯಾವುದೇ ಒಂದು ಪಕ್ಷದ ಪರವಾಗಿ ಈ ದೂರು ದಾಖಲಿಸುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವುದಕ್ಕೆ ದೂರು ನೀಡಿದ್ದೇನೆ ಎಂದು ವಕೀಲ ಮೂರ್ತಿ ಅವರು ಖಾಸಗಿ ಸುದ್ದಿ ವಾಹಿನಿ ಜತೆ ಮಾತನಾಡುತ್ತಾ ಹೇಳಿದರು.

ವಿಧಾನಸಭೆ ಅಧಿವೇಶನ LIVE: BSY ಧ್ವನಿಯ ಸ್ಫೋಟಕ ಆಡಿಯೋ ರಿಲೀಸ್ ವಿಧಾನಸಭೆ ಅಧಿವೇಶನ LIVE: BSY ಧ್ವನಿಯ ಸ್ಫೋಟಕ ಆಡಿಯೋ ರಿಲೀಸ್

ಆದರೆ, ದೂರು ಸ್ವೀಕರಿಸಿರುವ ಪೊಲೀಸರು ಇನ್ನು ಎಫ್ಐಆರ್ ದಾಖಲಿಸಿಲ್ಲ. ಈ ಕುರಿತಂತೆ ಕಾನೂನು ತಜ್ಞರ ಮೊರೆ ಹೋಗಿ ಚರ್ಚೆ ನಡೆಸಿ ನಂತರ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

English summary
Advocate RLN Murthy files complaint against BS Yeddyurappa, Malleshwaram BJP MLA, Ashwath Narayan &others alleging that 'BJP has committed an offence of kidnapping &wrongful confinement of some members of legislative assembly, not allowing them to participate in budget session 2019'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X