ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಇಂಡಿಗೋ ವಿಮಾನದ ಶೌಚಾಲಯದಲ್ಲಿ ಬಾಂಬ್‌ ಬೆದರಿಕೆ ಪತ್ರ

|
Google Oneindia Kannada News

ನವದೆಹಲಿ,ಆಗಸ್ಟ್‌.8: ಶೌಚ ಕೊಠಡಿಯಲ್ಲಿ ಯಾರೋ ಬರೆದ ಬಾಂಬ್‌ ಬೆದರಿಕೆ ಪತ್ರದಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಇಂಡಿಗೋ ವಿಮಾನ ನಿಲ್ದಾಣದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು.

ಭಾನುವಾರ ರಾತ್ರಿ ಜೈಪುರದಿಂದ ಬೆಂಗಳೂರಿಗೆ 175 ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಮುನ್ನವೇ ಟಾಯ್ಲೆಟ್‌ನಲ್ಲಿ ಟಿಶ್ಯೂ ಪೇಪರ್‌ನಲ್ಲಿ ಯಾರೋ ವಿಮಾನದಲ್ಲಿ ಬಾಂಬ್‌ ಇದೆ ಎಂದು ಗೀಚಿದ ಅನಾಮಧೇಯ ಪತ್ರ ಸಿಕ್ಕಿತ್ತು. ಇದರಿಂದ ತೀವ್ರ ಉದ್ವಿಗ್ನತೆ ಉಂಟಾಗಿತ್ತು.

ಫ್ಲೈಟ್ ಕ್ಯಾಪ್ಟನ್ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭದ್ರತಾ ಏಜೆನ್ಸಿಗಳನ್ನು ಸಂಪರ್ಕಿಸಿ ಅನುಮತಿ ಪಡೆದ ನಂತರ ವಿಮಾನವನ್ನು ಇಳಿಸಿದರು. ಆದರೆ ಇದು ಬೆದರಿಕೆಯ ಹುಸಿ ಬಾಂಬ್‌ ಕರೆ ಎಂದು ತಿಳಿದುಬಂದಿತು. ಫ್ಲೈಟ್ ನಂ. 6E 556 ರ ಹಿಂಭಾಗದ ಶೌಚಾಲಯದಲ್ಲಿ ಟಿಶ್ಯೂ ಪೇಪರ್‌ನಲ್ಲಿ ಕ್ಯಾಬಿನ್ ಸಿಬ್ಬಂದಿಯೊಬ್ಬರು ಹಿಂದಿಯಲ್ಲಿ ಬರೆದ ಪತ್ರವನ್ನು ಪತ್ತೆ ಹಚ್ಚಿದರು ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಲ್ಯಾಂಡ್ ನಾ ಕರ್ನಾ, ಈಸ್ ಫ್ಲೈಟ್ ಮೆ ಬಾಂಬ್ ಹೈ" (ಲ್ಯಾಂಡಿಂಗ್ ಮಾಡಬೇಡಿ, ಈ ವಿಮಾನದಲ್ಲಿ ಬಾಂಬ್ ಇದೆ ) ಎಂದು ಬರೆಯಲಾಗಿತ್ತು.

ಬಾಂಬ್ ಬೆದರಿಕೆ ಪತ್ರವನ್ನು ಗಮನಿಸಿದ ಸಿಬ್ಬಂದಿ ಕಾಕ್‌ಪಿಟ್ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮತ್ತು ವಾಯು ಸಂಚಾರ ನಿಯಂತ್ರಣ ಘಟಕವನ್ನು ಸಂಪರ್ಕಿಸಿದ್ದಾರೆ. ಫ್ಲೈಟ್ ಕ್ಯಾಪ್ಟನ್‌ಗೆ ಇಳಿಯಲು ಅನುಮತಿ ನೀಡಿದ ನಂತರ, ರಾತ್ರಿ 9.30ರ ನಂತರ ವಿಮಾನ ಇಳಿಯಿತು. ಆದರೆ ಅದನ್ನು ಪ್ರತ್ಯೇಕ ಭಾಗಕ್ಕೆ ಕೊಂಡೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ.

 ಎರಡೆರಡು ಬಾರಿ ಪ್ರಯಾಣಿಕರ ತಪಾಸಣೆ

ಎರಡೆರಡು ಬಾರಿ ಪ್ರಯಾಣಿಕರ ತಪಾಸಣೆ

ಬಳಿಕ ತಕ್ಷಣವೇ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಹಾಗೂ ಸಿಐಎಸ್‌ಎಫ್‌ ತಂಡದಿಂದ ವ್ಯಾಪಕ ತಪಾಸಣೆ ನಡೆಸಲಾಯಿತು. ಎಲ್ಲಾ ಪ್ರಯಾಣಿಕರನ್ನು ಎರಡು ಬಾರಿ ತಪಾಸಣೆಗೆ ಒಳಪಡಿಸಲಾಯಿತು. ಪ್ರತಿಯೊಬ್ಬರಿಂದ ಕೈಬರಹದ ಮಾದರಿಗಳನ್ನು ಸಂಗ್ರಹಿಸಲಾಗಿತು. ಎಲ್ಲಾ ಪ್ರಯಾಣಿಕರ ಸಾಮಾನು ಸರಂಜಾಮುಗಳನ್ನು ಪ್ರತ್ಯೇಕಗೊಳಿಸಿ ವೈಯಕ್ತಿಕ ತಪಾಸಣೆ ನಡೆಸಲಾಯಿತು.

 ಬೇರೆಯವರು ಬರೆದಿರುವ ಪತ್ರ

ಬೇರೆಯವರು ಬರೆದಿರುವ ಪತ್ರ

ಶಂಕಿತ ಪ್ರಯಾಣಿಕರ ಬರಹ ಮಾದರಿಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶೌಚಾಲಯದೊಳಗೆ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿರುವ ಪತ್ರ ಮತ್ತು ಅದನ್ನು ಬೇರೆಯವರು ಬರೆದಿರುವ ಸಾಧ್ಯತೆಯನ್ನು ಸಹ ಅನ್ವೇಷಿಸಲಾಗುತ್ತಿದೆ. ಉನ್ನತ ಭದ್ರತಾ ಮೂಲಗಳ ಪ್ರಕಾರ, ಈ ಘಟನೆಯು ಎಚ್ಚರಿಕೆಯ ಗಂಟೆಯಾಗಿದೆ. ಶೌಚಾಲಯಕ್ಕೆ ಪ್ರವೇಶಿಸುವವರ ಮೇಲೆ ನಿಗಾ ಇಡಲು ಶೌಚಾಲಯದ ಹೊರಗೆ ಕ್ಯಾಮೆರಾಗಳನ್ನು ಸರಿಪಡಿಸುವ ಅವಶ್ಯಕತೆಯಿದೆ. ಇದರಿಂದ ಅಂತಹ ಶಂಕಿತರನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ತಿಳಿಸಲಾಗಿದೆ.

 ಇಂಡಿಗೋ ವಿಮಾನ 6E 6182ರಲ್ಲಿ ಬಾಂಬ್‌ ಪತ್ರ

ಇಂಡಿಗೋ ವಿಮಾನ 6E 6182ರಲ್ಲಿ ಬಾಂಬ್‌ ಪತ್ರ

ಬೆಂಗಳೂರು ಮತ್ತು ಜೈಪುರ ನಗರಗಳ ನಡುವಿನ ಮುಂದಿನ ಇಂಡಿಗೋ ವಿಮಾನ, 6E 6182 ಬೆಂಗಳೂರಿನಿಂದ ಜೈಪುರಕ್ಕೆ ಸೋಮವಾರ ಬೆಳಿಗ್ಗೆ 1.04 ಕ್ಕೆ 3 ಗಂಟೆ 14 ನಿಮಿಷಗಳ ತಡವಾಗಿ ಹೊರಟಿತು. ಆದರೆ ಇದು ಬಾಂಬ್ ಬೆದರಿಕೆ ಘಟನೆಗೆ ಸಂಬಂಧಿಸಿದೆ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಇಂಡಿಗೋ ಹಾಗೂ ಕೆಐಎ ಆಪರೇಟರ್ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

 8.20ಕ್ಕೆ ಹೊರಡಬೇಕಿದ್ದ ವಿಮಾನದಲ್ಲಿ ಬಾಂಬ್‌

8.20ಕ್ಕೆ ಹೊರಡಬೇಕಿದ್ದ ವಿಮಾನದಲ್ಲಿ ಬಾಂಬ್‌

ಇದೇ ಜುಲೈ 22ರಂದು ಪಾಟ್ನಾದಿಂದ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ ವ್ಯಕ್ತಿಯೊಬ್ಬ ಹೇಳಿದ್ದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.ಅಂದು ರಾತ್ರಿ 8.20ಕ್ಕೆ ಹೊರಡಬೇಕಿದ್ದ ವಿಮಾನದಲ್ಲಿ ಬಾಂಬ್‌ ಇದೆ ಎಂದು ಹೇಳಿದ್ದರಿಂದ ಗೊಂದಲ ಉಂಟಾಗಿ ಎಲ್ಲರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿತ್ತು. ಆದರೆ ಇದೊಂದು ಹುಸಿ ಬಾಂಬ್‌ ಕರೆ ಎಂದು ಗೊತ್ತಾದ ಮೇಲೆ ವಿಮಾನದಲ್ಲಿ ಎಲ್ಲರೂ ನಿರಾಳರಾದರು. ಹುಸಿ ಬಾಂಬ್‌ ಕರೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿ ವಶಕ್ಕೆ ಪಡೆಯಾಗಿತ್ತು. ಬಳಿಕ ಶುಕ್ರವಾರ ಪಟ್ನಾದಿಂದ ವಿಮಾನ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದರು.

Recommended Video

ಈ ಥರಾ ಬೌಂಡರಿ ಹೊಡಿಯೋಕೆ ಯಾರಿಂದಾನು ಸಾಧ್ಯ ಇಲ್ಲಾ !! | OneIndia Kannada

English summary
A bomb threat letter written by someone in the toilet tissue paper, a tense atmosphere at Indigo Airport, which was supposed to land at Bangalore Kempegowda Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X