ಚುನಾವಣೆ ಮುನ್ನ ಗ್ರಾಹಕರಿಗೆ ವಿದ್ಯುತ್ ಬೆಲೆ ಏರಿಕೆ ಬಿಸಿ ತಟ್ಟಲಿದೆಯೇ?

ಬೆಂಗಳೂರು, ಮಾರ್ಚ್ 28: ಏಪ್ರಿಲ್‌ನಿಂದ ವಿದ್ಯುತ್ ಬೆಲೆ ಪ್ರತಿ ಯುನಿಟ್‌ಗೆ 30 ರಿಂದ 40 ಪೈಸೆ ಏರಿಕೆಯಾಗುವ ಸಾಧ್ಯತೆ ಇದೆ. ಚುನಾವಣೆಗೂ ಮುನ್ನವೇ ವಿದ್ಯುತ್ ಬೆಲೆ ಏರಿಕೆಯ ಬಿಸಿ ಗ್ರಾಹಕರನ್ನು ತಟ್ಟುವ ಸಾಧ್ಯತೆ ಇದೆ.

ಮೆಸ್ಕಾಂ, ಜಿಸ್ಕಾಂ, ಹೆಸ್ಕಾಂನಲ್ಲಿ ವಿದ್ಯುತ್ ಬೆಲೆ ಏರಿಕೆ ಸಂಬಂಧ ಕೆಇಆರ್ ಸಿ ಈಗಾಗಲೇ ಆದೇಶ ಹೊರಡಿಸಬೇಕಿತ್ತು. ಆದರೆ ಸರ್ಕಾರದ ಮೌಖಿಕ ಸೂಚನೆ ಮೇರೆಗೆ ಆದೇಶ ಹೊರಡಿಸಲು ವಿಳಂಬ ಮಾಡುತ್ತಿದೆ ಎಂದು ಅಂದಾಜಿಸಲಾಗುತ್ತಿದೆ.

ಅನುಮತಿ ಕಡ್ಡಾಯ: ಚುನಾವಣಾ ಆಯೋಗದ ಅನುಮತಿ ಪಡೆದೇ ಕೆಇಆರ್ ಸಿ ಬೆಲೆ ಏರಿಕೆ ಪ್ರಕ್ರಿಯೆಗೆ ಮುಂದಾಗಬೇಕು. ಇದು ಶಾಸನಬದ್ಧ ಪ್ರಕ್ರಿಯೆ. ಆಯೋಗ ಇದಕ್ಕೆ ಅನುಮತಿ ನೀಡಬಹುದು ಅಥವಾ ಚುನಾವಣೆ ನಡೆದ ಬಳಿಕ ಬೆಲೆ ಏರಿಕೆ ಆದೇಶವನ್ನು ಏಪ್ರಿಲ್ ನಿಂದಲೇ ಪೂರ್ವಾನ್ವಯ ಆಗುವಂತೆ ಹೊರಡಿಸಲು ಆಯೋಗ ಸೂಚನೆ ನೀಡಬಹುದು.

KERC may hike power tariff as 30 paisa per unit soon

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಪ್ರತಿ ವರ್ಷವು ಎಲ್ಲ ಎಸ್ಕಾಂಗಳು ಸೇರಿ ಒಟ್ಟಿಗೆ ವಿದ್ಯುತ್ ಬೆಲೆ ಏರಿಕೆಗೆ ಪ್ರಸ್ತಾವನೆ ಸಲ್ಲಿಸುತ್ತಿದ್ದವು. ಆದರೆ ಈಬಾರಿ 5 ಎಸ್ಕಾಂಗಳು ಪ್ರತ್ಯೇಕ ಬೆಲೆ ಕೋರಿವೆ. ಬೆಸ್ಕಾಂ ಪ್ರತಿ ಯುನಿಟ್ ಗೆ 80ಪೈಸೆ ಕೇಳಿದ್ದರೆ, ಮೆಸ್ಕಾಂ ಅತಿ ಹೆಚ್ಚು ಎಂದರೆ ಪ್ರತಿ ಯುನಿಟ್ ಗೆ 163 ಪೈಸೆ ಕೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+