ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಲಾಸ್ಕ್, ಮಹಿಳೆಯರ ಪರ್ಸ್ ಎಲ್ಲವೂ ಚಿನ್ನ, ಕಳ್ಳಸಾಗಣೆ ಹೀಗೂ ಮಾಡ್ತಾರ್ರೀ...

ಕಳ್ಳಸಾಗಾಣಿಕೆ ಮಾಡುವವರ ಅದಕ್ಕಾಗಿ ಏನೆಲ್ಲಾ ಮಾಡ್ತಾರೆ ಎಂಬುದಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬನ ಉದಾಹರಣೆ ಇಲ್ಲಿದೆ.

|
Google Oneindia Kannada News

ಬೆಂಗಳೂರು, ಮಾರ್ಚ್ 1: ಕಳ್ಳಸಾಗಾಣಿಕೆ ಮಾಡೋದಿಕ್ಕೆ ಏನೆಲ್ಲ ಮತ್ತು ಹೇಗೆಲ್ಲ ತಲೆ ಉಪಯೋಗಿಸ್ತಾರೆ ನೀವೇ ನೋಡಿ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.47 ಕೆಜಿ ಚಿನ್ನದೊಂದಿಗೆ ಸಿಕ್ಕಿಬಿದ್ದ ಇಪ್ಪತ್ತೆರಡು ವರ್ಷದ ಇರ್ಷಾದ್ ಪೂವತಿನ್ ಬಳಿ ಇದ್ದ ವಸ್ತುಗಳು ಎಂಥವು ಗೊತ್ತಾ?

ಸೋಲಾರ್ ಪ್ಯಾನೆಲ್ ಚಾರ್ಜರ್, ಹೆಣ್ಮಕ್ಕಳ ಪರ್ಸ್, ಕೈಗಡಿಯಾರ ಇವುಗಳೆಲ್ಲ ಹತ್ತಾರು ಇದ್ದವು. ಮತ್ತು ಇವುಗಳ ಬಿಡಿಭಾಗಗಳನ್ನು ಚಿನ್ನದಲ್ಲಿ ಮಾಡಲಾಗಿತ್ತು. ಅವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಕೇರಳದ ಕೋಳಿಕ್ಕೋಡ್ ನ ಸೇಲ್ಸ್ ಮನ್ ಇರ್ಷಾದ್ ಪೂವತಿನ್ ದುಬೈನಿಂದ ಭಾರತಕ್ಕೆ ಹಿಂತಿರುಗಿದ್ದ. ತಿಂಗಳ ಕಾಲ ದುಬೈನಲ್ಲಿದ್ದ ಅತನ ಬ್ಯಾಗ್ ಪರಿಶೀಲಿಸುವಾಗ ಅನುಮಾನ ಬಂದಿದೆ.[ಮಕ್ಕಳ ಡಯಾಪರ್ ನಲ್ಲಿ16 ಕೆಜಿ ಚಿನ್ನ ಸ್ಮಗಲಿಂಗ್]

Kerala youth replaces solar panels, flasks with gold worth Rs 40 lakh, caught at KIA

ಆತನ ಬ್ಯಾಗ್ ನಲ್ಲಿ ಫ್ಲಾಸ್ಕ್ ಗಳು, ಕೀ ಬೋರ್ಡ್ ವಸ್ತುಗಳು ಹಾಗೂ ಸೋಲಾರ್ ಪ್ಯಾನಲ್ ಚಾರ್ಜರ್ ಗಳು ಸಿಕ್ಕಿವೆ. ಆತ ಏಕೆ ಇಷ್ಟೆಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗ್ತಿದ್ದ ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡಿಲ್ಲ. ಫ್ಲಾಸ್ಕ್ ನ ಸ್ಕ್ಯಾನಿಂಗ್ ಗೆ ಕಳಿಸಿದಾಗ ಅದರ ಒಳಭಾಗ ಮಾಮೂಲಿಗಿಂತ ಹೆಚ್ಚು ಪ್ರಖರವಾಗಿ ಕಂಡಿದೆ. ಆನಂತರ ಅದು ಚಿನ್ನದಿಂದ ಮಾಡಿದ್ದು ಎಂದು ಗೊತ್ತಾಗಿದೆ.

ಆ ನಂತರ ಉಳಿದ ಫ್ಲಾಸ್ಕ್ ಗಳನ್ನು ಪರಿಶೀಲಿಸಿದಾಗ ಎಲ್ಲವೂ ಚಿನ್ನದಿಂದ ಮಾಡಿರುವುದು ಎಂದು ಗೊತ್ತಾಗಿದೆ. ಚಿನ್ನವನ್ನು ಗುರ್ತಿಸಬಾರದು ಎಂಬ ಕಾರಣಕ್ಕೆ ಪಾದರಸದ ಕೋಟಿಂಗ್ ಕೂಡ ಮಾಡಲಾಗಿತ್ತು. ಇದರ ಜೊತೆಗೆ ಚಿನ್ನದ ಸರಕ್ಕೆ ಬೆಳ್ಳಿ ಪಾಲಿಷ್ ಮಾಡಿಸಿರುವುದು ಕೂಡ ಗೊತ್ತಾಗಿದೆ.[2.30 ಕೋಟಿ ಮೌಲ್ಯದ 8.3 ಕೆ.ಜಿ. ಚಿನ್ನ ವಶಕ್ಕೆ]

ಪೂವತಿನ್ ನನ್ನು ದುಬೈನಲ್ಲಿದ್ದ ಸ್ನೇಹಿತ ಕರೆಸಿಕೊಂಡಿದ್ದನಂತೆ. ಈ ರೀತಿ ವಸ್ತುಗಳಲ್ಲಿ ಚಿನ್ನ ಇರುವ ಸಂಗತಿಯೇ ಆತನಿಗೆ ತಿಳಿದಿರಲಿಲ್ಲವಂತೆ. ಇವೆಲ್ಲವನ್ನೂ ಕೋಳಿಕ್ಕೋಡ್ ವಿಮಾನ ನಿಲ್ದಾಣದ ಹೊರಗೆ ಇಂಥ ವ್ಯಕ್ತಿಗೆ ತಲುಪಿಸುವಂತೆ ತಿಳಿಸಲಾಗಿತ್ತಂತೆ. ಇಷ್ಟು ಅಂತೆ-ಕಂತೆ ಕೇಳಿಸಿಕೊಂಡ ನಂತರ ಅತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗಲ್ಫ್ ದೇಶಗಳಲ್ಲಿನ ಕೆಲವು ಆಭರಣ ತಯಾರಕರು ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡುವುದೇ ಹೀಗೆ. ಇಸ್ತ್ರಿ ಪೆಟ್ಟಿಗೆ, ಓವನ್ಸ್, ಹೀಟರ್, ಫ್ಲಾಸ್ಕ್ ಹಾಗೂ ಟಾರ್ಚ್ ಲೈಟ್ ನ ಬಿಡಿಭಾಗಗಳಾಗಿ ಚಿನ್ನವನ್ನೇ ಬಳಸಿ ತಯಾರು ಮಾಡುತ್ತಾರೆ. ಅವುಗಳನ್ನು ಇಲ್ಲಿಗೆ ಕಳಿಸುತ್ತಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
A 22-year-old man flew in with flasks, computer motherboards, solar panel chargers, a woman's purse and a wrist watch with components made of gold. Customs officers at Bengaluru Kempegowda International Airport melted the parts and said he'd attempted to smuggle 1.47kg of gold
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X