ಮೈದಾನದಲ್ಲಿ ಅಸ್ವಸ್ಥಗೊಂಡ ಅಂಬರೀಷ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಬೆಂಗಳೂರು, ಸೆಪ್ಟೆಂಬರ್ 08: ಹಿರಿಯ ನಟ, ಮಾಜಿ ಸಚಿವ ಅಂಬರೀಷ್ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಇಂದಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾದ ಕರ್ನಾಟಕ ಚಲನಚಿತ್ರ ಕ್ರಿಕೆಟ್ ಟೂರ್ನಮೆಂಟ್ ನ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾಗ ಅಂಬರೀಷ್ ಅವರು ಅಸ್ವಸ್ಥಗೊಂಡಿದ್ದರು.
ಕೆಸಿಸಿ ಸೀಸನ್ 2 ಆರಂಭವಾಗಿದೆ. ಕನ್ನಡ ಸಿನಿಮಾರಂಗದ ಬಹುತೇಕ ಸ್ಟಾರ್ ಗಳು ಬೆಳಗ್ಗೆಯಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇರಿಕೊಂಡಿದ್ದಾರೆ. ನಟ ರೆಬೆಲ್ ಸ್ಟಾರ್ ಅಂಬರೀಶ್ ಕೂಡ
ಕೆಸಿಸಿ ಸೀಸನ್ 2ನಲ್ಲಿ ಇಡೀ ಚಿತ್ರರಂಗದ ಸ್ಟಾರ್ ನಟರು ಪಾಲ್ಗೊಂಡಿದ್ದಾರೆ. ಕಲಾವಿದರಿಗೆ ಸಾಥ್ ನೀಡಲು ಕ್ರೀಡಾಂಗಣಕ್ಕೆ ಅಂಬರೀಷ್ ಆಗಮಿಸಿದ್ದರು.

ಅಂಬರೀಶ್ ಅವರಿಗೆ ಮಂಡಿನೋವು ಕಾಣಿಸಿಕೊಂಡಿದ್ದು ಹೀಗಾಗಿ, ಆಯಾಸಗೊಂಡು ಕಾಲು ನೋವಿನಿಂದ ಕುಸಿದು ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಖಾಸಗಿ ಆಸ್ಪತ್ರೆಗೆ ಅಂಬರೀಷ್ ಗೆ ಚಿಕಿತ್ಸೆ ಮುಂದುವರೆಯಲಿದ್ದು, ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.












Click it and Unblock the Notifications