ದಿನೇಶ್ ಗುಂಡೂರಾವ್ ಹೊರಗಿಟ್ಟು ವೇಣುಗೋಪಾಲ್ ಸಭೆ, ಕಾರಣ ಏನು?

ಬೆಂಗಳೂರು, ಜನವರಿ 25: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಹೊರಗಿಟ್ಟು ಹಳೆ ಮೈಸೂರು ಭಾಗದ ಶಾಸಕರ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ನಿನ್ನೆ ರಾತ್ರಿ ಸಭೆ ನಡೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಮೇಲೆ ಶಾಸಕರು ಮತ್ತು ಕೆಲವು ದೂರು ನೀಡಿರುವ ಕಾರಣ ಹೀಗೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ದಿನೇಶ್ ಗುಂಡೂರಾವ್, ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಹಳೆ ಮೈಸೂರು ಭಾಗದ ಕಾಂಗ್ರೆಸ್ ಶಾಸಕರ ವೈಯಕ್ತಿಕ ಅಭಿಪ್ರಾಯ ಸಂಗ್ರಹಣೆಯನ್ನು ವೇಣುಗೋಪಾಲ್ ಮಾಡಿದರು, ಹಾಗಾಗಿ ನಾನೇ ಸ್ವಯಂ ಆಗಿ ಸಭೆಯಿಂದ ದೂರ ಉಳಿಯಲು ನಿರ್ಧರಿಸಿದೆ ಎಂದಿದ್ದಾರೆ.

KC Venugopal did Congress MLAs meeting keeping KPCC president out

ಆದರೆ ಈ ಘಟನೆಯು ಕೆಪಿಸಿಸಿ ಅಧ್ಯಕ್ಷರ ಮೇಲೆ ಪಕ್ಷದ ಶಾಸಕರಲ್ಲಿ ಹಾಗೂ ಮುಖಂಡರಲ್ಲಿ ಕೆಲವರಿಗೆ ಅಸಮಾಧಾನ ಇದೆ ಎಂಬುದು ಗೊತ್ತಾಗುತ್ತಿದೆ. ಈ ಹಿಂದೆಯೇ ಕೆಲವು ನಾಯಕರು ದಿನೇಶ್ ಅವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.

ಪತ್ರಕರ್ತರ ಕ್ಷಮೆ ಕೇಳಿದ ದಿನೇಶ್ ಗುಂಡೂರಾವ್
ಅನುಮತಿ ಇಲ್ಲದೆ ತಮ್ಮ ಕಚೇರಿಗೆ ನುಗ್ಗಿದ ಮಾಧ್ಯಮದ ಕ್ಯಾಮೆರಾಗಳನ್ನು ದಿನೇಶ್ ಗುಂಡೂರಾವ್ ಅವರು ಹೊರಹೋಗಲು ಹೇಳಿದರು. ಆದರೆ ಅವರು ಹೋಗದೇ ಇದ್ದಾಗ ಅವರನ್ನು ಉದ್ದೇಶಿಸಿ 'ನಾನ್‌ಸೆನ್ಸ್‌' ಎಂದು ಬೈದಿದ್ದರು. ಆ ನಂತರ ಸಂಜೆ ವೇಳೆಗೆ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+