ಯುವಪೀಳಿಗೆಗೆ ಕೆ.ಸಿ.ರೆಡ್ಡಿಯವರ ಜೀವನ ಮಾರ್ಗದರ್ಶಕ: ಸಿಎಂ
ಬೆಂಗಳೂರು ಫೆಬ್ರವರಿ 27: ಇಂದಿನ ಯುವ ಪೀಳಿಗೆಗೆ ಕೆ.ಸಿ.ರೆಡ್ಡಿಯವರ ಬದುಕು ಮಾರ್ಗದರ್ಶಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಇಂದು ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆರಡ್ಡಿ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಚೆಂಗಲರಾಯ ರೆಡ್ಡಿ, ಅವರು ಮೈಸೂರು ರಾಜ್ಯದ ಮೊಟ್ಟಮೊದಲ ಮುಖ್ಯಮಂತ್ರಿ ಆಗಿದ್ದವರು. ಕೆ.ಸಿ.ರೆಡ್ಡಿಯವರು ದೂರದೃಷ್ಟಿಯಿರುವ ಹಿರಿಯ ನಾಯಕರು. ಕೆ.ಸಿ.ರೆಡ್ಡಿಯವರು ಹಾಕಿರುವ ಆಡಳಿತದ ಅಡಿಪಾಯದಿಂದ ಮೈಸೂರು ಸಂಸ್ಥಾನ ಹಾಗೂ ಕರ್ನಾಟಕ ರಾಜ್ಯವನ್ನು ಕಟ್ಟಲು ಸಾಧ್ಯವಾಯಿತು.ರೆಡ್ಡಿಯವರು ಮೊದಲಿನಿಂದಲೂ ಸ್ವಾತಂತ್ರ್ಯ ಹೋರಾಟದಲ್ಲಿ, ಅವರ ಮಾವ, ಶ್ರೀ.ಎಚ್.ಆರ್. ಗುರುವರೆಡ್ಡಿ ಯವರ ತರಹ, ಸಕ್ರಿಯ ಪಾತ್ರತೆಗೆದುಕೊಂಡಿದ್ದರು. ಉತ್ತಮ ಆಡಳಿತಗಾರರಾದ ಕೆ.ಸಿ.ರೆಡ್ಡಿಯವರ ಆದರ್ಶಗಳು, ತತ್ವಗಳು, ಸಾರ್ವಜನಿಕ ಬದುಕಿನ ರೀತಿ, ಜನರ ಸಮಸ್ಯೆಗಳನ್ನು ಒಟ್ಟಾಗಿ ಬಗೆಹರಿಸುವ ಬಗೆ ಎಲ್ಲರಿಗೂ ಸ್ಪೂರ್ತಿಯಾಗಿದೆ. ಅವರ ಆಡಳಿತಾವಧಿಯಲ್ಲಿ ಪ್ರಾದೇಶಿಕ, ಸಾಮಾಜಿಕ ಅಸಮತೋಲನ ನಿವಾರಣೆಗೆ ಆದ್ಯತೆ ನೀಡಲಾಗುತ್ತಿತ್ತು ಎಂದು ತಿಳಿಸಿದರು.
ಇವರು ಕೋಲಾರ ಜಿಲ್ಲೆಯ ಬಂಗಾರ ಪೇಟೆ ತಾಲೂಕಿನ ಕ್ಯಾಸಂಬಳ್ಳಿ ಊರಿನವರು. ಕೋಲಾರ ಜಿಲ್ಲೆಯ ಕೆ.ಸಿ.ರೆಡ್ಡಿಯವರು ವೈಜ್ಞಾನಿಕ ಚಿಂತನೆಯ ವ್ಯಕ್ತಿ. ಕರ್ನಾಟಕ ರಾಜ್ಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ವಾಮ್ಯದ ಬಿಹೆಚ್ಇಎಲ್, ಬಿಎಂಎಲ್, ಹೆಚ್ ಎ ಎಲ್ ಸೇರಿದಂತೆ ಹಲವಾರು ಕೈಗಾರಿಕೆಗಳನ್ನು ಸ್ಥಾಪಿಸಲು ಕಾರಣರಾದರು. ಹೊಸ ತಂತ್ರಜ್ಞಾನದಿಂದ ಹೊಸ ಚಿಂತನೆಗೆ ನಾಂದಿ ಹಾಡಿದ್ದರು. ಇದರಿಂದಾಗಿ ನಮ್ಮ ರಾಜ್ಯ ಐಟಿಬಿಟಿ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಾಣಲು ಸಹಕಾರಿಯಾಯಿತು. ಅಂದಿನ ಉದ್ಯಮಗಳಲ್ಲಿದ್ದ ಆರ್ ಎಂಡ್ ಡಿ, ರಾಜ್ಯದಲ್ಲಿ ಇಂದಿನ ತಂತ್ರಜ್ಞಾನದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದೆ. ಸದಾ ಸ್ಮರಣೀಯರಾದ ಕೆ.ಸಿ.ರೆಡ್ಡಿಯವರ ಜೀವನಾದರ್ಶಗಳು ಸದಾಕಾಲ ಪ್ರೇರಣಾದಾಯಕ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಪ್ರತಿಮೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಯಿಸಿ, ಕೆ.ಸಿ.ರೆಡ್ಡಿಯವರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರೆಡ್ಡಿಯವರು ಮೊದಲಿನಿಂದಲೂ ಸ್ವಾತಂತ್ರ್ಯ ಹೋರಾಟದಲ್ಲಿ, ಅವರ ಮಾವ, ಎಚ್.ಆರ್. ಗುರುವರೆಡ್ಡಿ ಯವರ ತರಹ, ಸಕ್ರಿಯ ಪಾತ್ರ ತೆಗೆದುಕೊಂಡಿದ್ದರು. ವಿದುರಾಶ್ವತ್ಥದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಸಕ್ರಿಯಪಾತ್ರ ವಹಿಸಿದ್ದರು. ಅವರ ಮಂತ್ರಿಮಂಡಲದಲ್ಲಿ ಶ್ರೀ.ಭಾಷ್ಯಂ, ಎಂಬ ನಿಷ್ಠಾವಂತ, ಹಾಗೂ ದೇಶಪ್ರೇಮಿ, ಮಂತ್ರಿಯಿದ್ದರು. ಭಾಷ್ಯಂ, ತಮಗೆ ಕೊಡಲಾಗಿದ್ದ 'ಸರ್ಕಾರಿ ವಸತಿಗೃಹವನ್ನು, ತಿರಸ್ಕರಿಸಿದರು. ಚೆಂಗಲರಾಯ ರೆಡ್ಡಿಯವರ ಮಂತ್ರಿಮಂಡಲದಲ್ಲಿ ಒಮ್ಮೆ ಭಿನ್ನಾಭಿಪ್ರಾಯ ತಲೆದೋರಿ ರೆಡ್ಡಿಯವರಿಗೆ ಮಾನಸಿಕ ಆಘಾತವಾಯಿತು. ಮುಂದೆ ಅವರು ಪಂಡಿತ್ ನೆಹರೂರವರ, ಮಂತ್ರಿಮಂಡಲದ ಸದಸ್ಯರಾಗಿದ್ದರು. 'ಮಧ್ಯಪ್ರದೇಶದ ಗವರ್ನರ್' ಆಗಿ, ಸೇವೆ ಸಲ್ಲಿಸಿದರು. 1951 ರಲ್ಲಿ ಬೆಂಗಳೂರಿನಲ್ಲಿ ವಿಧಾನಸೌಧದ ನಿರ್ಮಾಣದ ಸಮಯದಲ್ಲಿ ಆವರಿದ್ದರು. ಸೌಧದ ಕೊನೆಯ ಹಂತವನ್ನು ಕೆಂಗಲ್ ಹನುಮಂತಯ್ಯ ನವರು ಪೂರ್ಣಗೊಳಿಸಿದರು.












Click it and Unblock the Notifications