ವಿಧಾನಸೌಧ ದಲ್ಲಾಳಿಗಳ ಶಾಪಿಂಗ್ ಮಾಲ್: ಕಾಂಗ್ರೆಸ್
ಬೆಂಗಳೂರು, ಮಾರ್ಚ್ 16: ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸರ್ಕಾರದ ವಿರುದ್ಧ ಕಾಂಗ್ರೆಸ್ ಟ್ವೀಟ್ ಸಮರ ಸಾರಿದೆ. ವಿಧಾನಸೌಧವು ದಲ್ಲಾಳಿಗಳ ಶಾಪಿಂಗ್ ಮಾಲ್ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬೆಂಗಳೂರಿನಲ್ಲಿ ಇರುವ ಮುಖ್ಯಮಂತ್ರಿ ಗೃಹ ಕಚೇರಿಯು ವರ್ಗಾವಣೆ ದಂಧೆ, ಗುತ್ತಿಗೆ, ಡೀಲಿಂಗ್ ಮತ್ತು ಕಮಿಷನ್ ದಂಧೆಗಳ "ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್"ನ ಹೆಡ್ಡಾಫೀಸ್ ನಂತೆ ಆಗಿದೆ ಎಂದು ಕಾಂಗ್ರೆಸ್ ದೂಷಿಸಿದೆ.
ವಿಧಾನಸೌಧ ದಲ್ಲಾಳಿಗಳ ಶಾಪಿಂಗ್ ಮಾಲ್ ಹಾಗೂ ಸಿಎಂ ಗೃಹ ಕಚೇರಿ ವರ್ಗಾವಣೆ ದಂಧೆ, ಗುತ್ತಿಗೆ ಡೀಲಿಂಗ್, ಕಮಿಷನ್ ದಂಧೆಗಳ #VijayendraServiceTax ನ ಹೆಡ್ಡಾಫೀಸ್!
— Karnataka Congress (@INCKarnataka) March 16, 2021
ರಾಜ್ಯದಲ್ಲಿ
ನಾನೊಬ್ಬನೇ, ನನಗಿಬ್ಬರು ಎಂಬ @BSYBJP ಅವರ ಫ್ಯಾಮಿಲಿ ಸರ್ಕಾರವಿರುವುದನ್ನ ಬಿಜೆಪಿಗರೇ ಒಪ್ಪಿದ್ದಾರೆ.@BJP4Karnataka ಭ್ರಷ್ಟಾಚಾರವನ್ನೇ ಹಾಸಿ ಮಲಗಿದೆ. pic.twitter.com/7MASkTHGLl
"ಕರ್ನಾಟಕ ಬಿಜೆಪಿಯು ಭ್ರಷ್ಟಾಚಾರವನ್ನೇ ಹಾಸಿ ಮಲಗಿದೆ. ರಾಜ್ಯದಲ್ಲಿ ನಾನೊಬ್ಬನೇ, ನನಗಿಬ್ಬರು ಎಂಬ ಅವರ ಫ್ಯಾಮಿಲಿ ಸರ್ಕಾರವಿರುವುದನ್ನು ಬಿಜೆಪಿಗರೇ ಒಪ್ಪಿಕೊಂಡಿದ್ದಾರೆ" ಎಂದು ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ. ಈ ಟ್ವೀಟ್ ಜೊತೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಸಂಬಂಧಿಸಿದ ಸುದ್ದಿಯೊಂದನ್ನು ಟ್ಯಾಗ್ ಮಾಡಲಾಗಿದೆ.

ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ:
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬದ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ ನಿರಂತರವಾಗಿರುವತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು. ಮುಖ್ಯಮಂತ್ರಿ ಅಲ್ಲದೇ ಇಡೀ ಕುಟುಂಬ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಡಿ ಗ್ರೇಡ್ ವರ್ಗಾವಣೆಗಳನ್ನೂ ಕೂಡ ಸಿಎಂ ಕುಟುಂಬದವರೇ ಮಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಸಿಎಂ ಮತ್ತು ಅವರ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಯತ್ನಾಳ್ ದೂಷಿಸಿದ್ದರು.












Click it and Unblock the Notifications