ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಗಸ್ಟ್ 22ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ

By Mahesh
|
Google Oneindia Kannada News

ಬೆಂಗಳೂರು ಜುಲೈ 16: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಗುರುವಾರ ಸಂಜೆ ಪರಿಷ್ಕೃತ ವೇಳಾಪಟ್ಟಿ ಹೊರಡಿಸಿದೆ. ಆಗಸ್ಟ್ 22 ರಂದು ಮತದಾನ ನಡೆಯಲಿದ್ದು, ಆಗಸ್ಟ್ 25ರಂದು ಫಲಿತಾಂಶ ಹೊರಬೀಳಲಿದೆ.

ರಾಜ್ಯ ಚುನಾವಣಾ ಆಯೋಗ ಜುಲೈ 28ರಂದು ಬಿಬಿಎಂಪಿ ಚುನಾವಣೆ ನಡೆಸಲಾಗುತ್ತದೆ ಎಂದು ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಆದರೆ, ಸುಪ್ರೀಂಕೋರ್ಟ್ ಚುನಾವಣೆಯನ್ನು 8 ವಾರಗಳ ಕಾಲ ಮುಂದೂಡಿ, ಹೊಸ ವೇಳಾಪಟ್ಟಿ ಪ್ರಕಟಿಸುವಂತೆ ಆಯೋಗಕ್ಕೆ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಚುನಾವಣೆ ಪ್ರಮುಖ ದಿನಾಂಕಗಳು ಇಲ್ಲಿವೆ. [ಬಿಬಿಎಂಪಿಯನ್ನು 5 ಭಾಗ ಮಾಡಿ: ಬಿಎಸ್ ಪಾಟೀಲ್ ಸಮಿತಿ]

Karnataka State Election Commission announces BBMP Election dates

* ಜುಲೈ 17ರಿಂದ ಚುನಾವಣಾ ನೀತಿ ಸಂಹಿತೆ ಜಾರಿ.
* ಆಗಸ್ಟ್ 3 ರಂದು ಚುನಾವಣೆ ಅಧಿಸೂಚನೆ ಪ್ರಕಟ
* ಆಗಸ್ಟ್ 22 ರಂದು ಮತದಾನ ನಡೆಯಲಿದೆ.
* ಆಗಸ್ಟ್ 25 ರಂದು ಫಲಿತಾಂಶ
* ಆಗಸ್ಟ್ 10 ರಂದು ನಾಮಪತ್ರ ಸಲ್ಲಿಕೆ ಕೊನೆ ದಿನಾಂಕ
* ಆಗಸ್ಟ್ 11 ರಂದು ನಾಮಪತ್ರಗಳ ಪರಿಶೀಲನೆ
* ಆಗಸ್ಟ್ 13 ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ
* ಆಗಸ್ಟ್ 24 ರಂದು ಅಗತ್ಯವಿದ್ದರೆ ಮರು ಮತದಾನ.

ಮತದಾನದ ಅವಧಿ: ಆಗಸ್ಟ್ 22 (ಶನಿವಾರ) ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆ ತನಕ.
ಮತ ಎಣಿಕೆ ದಿನ: ಆಗಸ್ಟ್ 25 (ಮಂಗಳವಾರ) ಬಿಬಿಎಂಪಿ ವ್ಯಾಪ್ತಿಯಲ್ಲಿಯ ಒಂದು ಕೇಂದ್ರದಲ್ಲಿ ಬೆಳಗ್ಗೆ 8 ಗಂಟೆಯಿಂದ ಆರಂಭ.
ಒಟ್ಟು ವಾರ್ಡ್ ಗಳು: 198 ವಾರ್ಡ್ ಗಳು
ನೀತಿ ಸಂಹಿತೆ: ಜುಲೈ 17, 2015ರಿಂದ ಆಗಸ್ಟ್ 26, 2015ರ ತನಕ.

ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976 ರ ಪ್ರಕರಣ 55 ಮತ್ತು ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ (ಚುನಾವಣೆ) ನಿಯಮಗಳು 1979 ರ ನಿಯಮ 3 ರ ಅನ್ವಯ ಹಾಗೂ 13/04/2015ರ ವಾರ್ಡುವಾರು ಮೀಸಲಾತಿ ಪಟ್ಟಿಯನ್ವಯ ಮೇಲ್ಕಂಡ ಚುನಾವಣಾ ವೇಳಾಪಟ್ಟಿಯನ್ನು ನಡೆಸಲು ಆದೇಶಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಕವಿತಾರಾಣಿ ಅವರು ಹೇಳಿದ್ದಾರೆ.
(ಒನ್ ಇಂಡಿಯಾ ಸುದ್ದಿ)

English summary
Karnataka State Election Commission (SEC) on Thursday (July 16) announced revised schedule for Bruhat Bengaluru Mahanagara Palike (BBMP) election. Voting will be held on August 22nd and results will be declared on August 25, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X