ಕರ್ನಾಟಕದಲ್ಲಿ ಇಂದು 5172 ಕೇಸ್, ಬೆಂಗಳೂರಿನಲ್ಲಿ ಎಷ್ಟು?
ಬೆಂಗಳೂರು, ಆಗಸ್ಟ್ 1: ಕರ್ನಾಟಕದಲ್ಲಿ ಇಂದು 5172 ಜನರಿಗೆ ಕೊರೊನಾ ವೈರಸ್ ತಗುಲಿದೆ. ಇಂದಿನ ವರದಿ ಬಳಿಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,29,287ಕ್ಕೆ ಏರಿಕೆಯಾಗಿದೆ.
Recommended Video
ಬೆಂಗಳೂರಿನಲ್ಲಿಂದು 1852 ಮಂದಿಗೆ ಕೊವಿಡ್ ದೃಢವಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ಒಟ್ಟು ರೋಗಿಗಳ ಸಂಖ್ಯೆ 57396ಕ್ಕೆ ಜಿಗಿದಿದೆ. ಇಂದು ನಗರದಲ್ಲಿ 27 ಜನರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1056 ಆಗಿದೆ.
ಇಂದು ರಾಜ್ಯದಲ್ಲಿ 3860 ಜನರು ಗುಣಮುಖರಾಗಿದ್ದು, ಇದುವರೆಗೂ 53648 ಜನರು ಚೇತರಿಕೆ ಕಂಡಿದ್ದಾರೆ. ಪ್ರಸ್ತುತ 73219 ಕೇಸ್‌ಗಳು ಸಕ್ರಿಯವಾಗಿದೆ. ಇನ್ನು 602 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆವಾರು ಅಂಕಿ ಅಂಶ ನೋಡುವುದಾರೆ, ಮೈಸೂರು 365 ಕೇಸ್, ಬಳ್ಳಾರಿ 269 ಕೇಸ್, ಕಲಬುರಗಿಹಾಗೂ ಬೆಳಗಾವಿಯಲ್ಲಿ ತಲಾ 219 ಕೇಸ್, ಧಾರವಾಡ 184 ಕೇಸ್, ಹಾಸನ 146 ಪ್ರಕರಣ, ದಕ್ಷಿಣ ಕನ್ನಡ 139 ಕೇಸ್, ಉಡುಪಿ 136 ಕೇಸ್, ಬಾಗಲಕೋಟೆ 134 ಕೇಸ್, ವಿಜಯಪುರ 129 ಸೋಂಕು, ಶಿವಮೊಗ್ಗ119 ಕೇಸ್, ರಾಯಚೂರು 109 ಕೇಸ್, ದಾವಣಗೆರೆ 108 ಕೇಸ್ ಹಾಗೂ ಕೊಪ್ಪಳದಲ್ಲಿ 107 ಕೇಸ್ ದಾಖಲಾಗಿದೆ.












Click it and Unblock the Notifications