• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Karnataka Ratna Award : ಪುನೀತ್‌ಗೆ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ

|
Google Oneindia Kannada News

ಬೆಂಗಳೂರು, ನವೆಂಬರ್ 01: ನಟನೆಯಿಂದ ಮಾತ್ರವಲ್ಲದೇ ಸರಳ ಬದುಕು, ಸಾಮಾಜಿಕ ಕಾರ್ಯ ಮತ್ತು ಸಾಧನೆಯಿಂದ ಚಿರಸ್ಥಾಯಿಯಾಗಿರುವ ದಿವಂಗತ ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರಾಜ್ಯ ಸರ್ಕಾರ 67ನೇ ಕನ್ನಡ ರಾಜ್ಯೋತ್ಸವದಂದು 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಮಾಡಿದೆ.

ಬೆಂಗಳೂರಿನ ವಿಧಾನಸೌಧದ ಮುಂದೆ ಮಂಗಳವಾರ ಆಯೋಜಿಸಿದ್ದ ಬೃಹತ್ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿವಂಗತ ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿದರು.

ಅಪ್ಪು ಜೀವನ ಕಥೆಯನ್ನು ಪಠ್ಯಕ್ಕೆ ಸೇರಿಸುವಂತೆ ಸಿಎಂಗೆ ಪತ್ರ ಬರೆದ ಪುನೀತ್ ಅಭಿಮಾನಿಅಪ್ಪು ಜೀವನ ಕಥೆಯನ್ನು ಪಠ್ಯಕ್ಕೆ ಸೇರಿಸುವಂತೆ ಸಿಎಂಗೆ ಪತ್ರ ಬರೆದ ಪುನೀತ್ ಅಭಿಮಾನಿ

ಸಮಾರಂಭದಲ್ಲಿ ಪುನೀತ್ ಸಹೋದರರಾದ ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಸೇರಿದಂತೆ ಡಾ.ರಾಜ್ ಕುಟುಂಬದ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು. ವಿಶೇಷ ಅತಿಥಿಗಳಾಗಿ ನಟ ರಜನಿಕಾಂತ್ ಮತ್ತು ತೆಲುಗು ನಟ ಜ್ಯೂನಿಯರ್ ಎನ್‌ಟಿಆರ್‌ ಆಗಮಿಸಿದ್ದರು. ವಿಧಾನಸೌಧದ ಮುಂದೆ ಸಾವಿರಾರು ಜನರು, ಅಪ್ಪು ಅಭಿಮಾನಿಗಳು ಜಮಾಯಿಸಿದ್ದರು.

ತಮ್ಮ ನೆಚ್ಚಿನ ನಟ ಅಪ್ಪು ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿದ್ದಕ್ಕಾಗಿ ಸಹಸ್ರಾರು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು. ನಟ ಪುನೀತ್ ರಾಜ್‌ ಕುಮಾರ್ ಅವರು ಕಡಿಮೆ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ. ಅಂಗಾಂಗ ದಾನದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಸರಳತೆ, ಸಾಮಾಜಿಕ ಕಾರ್ಯಗಳಿಂದ ಲಕ್ಷಾಂತರ ಜನರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರ ಹೆಸರನ್ನು ಸದಾ ಅಜರಾಮರವಾಗಿಸಲು ಅಪ್ಪು ಅವರಿಗೆ ರಾಜ್ಯದ ಅತ್ಯುನ್ನದ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಲಾಗುತ್ತಿದೆ. ಡಾ.ರಾಜ್‌ಕುಮಾರ್ ಅವರ ನಂತರ ಪುನೀತ್‌ ರಾಜ್‌ ಕುಮಾರ್ ಅವರಿಗೆ ಈ ಪ್ರಶಸ್ತಿ ದೊರೆತಿದೆ ಎಂದು ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ತಿಳಿಸಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಗಾಯಕರಾದ ವಿಜಯಪ್ರಕಾಶ್, ಚೈತ್ರ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕನ್ನಡ ಗೀತೆಗಳು, ಮುಖ್ಯವಾಗಿ ಡಾ.ಪುನೀತ್ ರಾಜ್‌ ಕುಮಾರ್‌ ನಟಿಸಿದ ಚಿತ್ರಗಳ ಗೀತೆಗಳನ್ನು ಹಾಡಿ ಸ್ಮರಿಸಲಾಯಿತು. ಅಭಿಮಾನಿಗಳ ಜನಸಾಗರದಲ್ಲಿ ಕನ್ನಡ ಬಾವುಟಗಳು, ಅಪ್ಪು ಭಾವಚಿತ್ರವುಳ್ಳ ಕನ್ನಡ ಬಾವುಟಗಳು ರಾರಾಜಿಸಿದವು.

ಮಳೆ ಸಿಂಚನ ಮಧ್ಯೆಯು ಅಪ್ಪುಗೆ ಪ್ರಶಸ್ತಿ ಪ್ರದಾನ
ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಶುರುವಾದ ಮಳೆಯ ನಡುವೆಯು 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಸಮಾರಂಭ ಸರಳವಾಗಿ ನಡೆಯಿತು. ಮಳೆಯಿಂದಾಗಿ 6.30ಕ್ಕೆ ಪೂರ್ಣಗೊಳ್ಳಬೇಕಿದ್ದ ಸಮಾರಂಭ 5.30ಕ್ಕೆ ಮುಕ್ತಾಯವಾಯಿತು. ಅಪ್ಪು ಅಭಿಮಾನಿಗಳು ಮಳೆಯಲ್ಲೇ ಸಂಭ್ರಮದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

English summary
'Karnataka Ratna' award presented to Kannada actor late Dr. Puneeth Rajkumar by Karnataka Government on November 1st, 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X