ಲಾಕ್ ಡೌನ್ ಸಡಿಲಿಕೆ ಸಂಬಂಧ ಸಿಎಂಗೆ ಸಿದ್ದರಾಮಯ್ಯ ಸಲಹೆ

ಬೆಂಗಳೂರು, ಮೇ.01: ಕೊರೊನಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಿಸಲು ಲಾಕ್ ಡೌನ್ ಘೋಷಿಸಲಾಗಿದೆ. ಕರ್ನಾಟಕದಲ್ಲಿ ಮೇ.03ರ ನಂತರ ಲಾಕ್ ಡೌನ್ ಸಡಲಿಕೆ ಮಾಡುವ ಮೊದಲು ತೀವ್ರ ಕಟ್ಟೆಚ್ಚರ ವಹಿಸಬೇಕು ಎಂದು ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

Recommended Video

      ದಾವಣಗೆರೆಯಲ್ಲಿ ಒಂದೇ ದಿನಕ್ಕೆ‌ 6 ಮಂದಿಗೆ ಕೊರೊನಾ ಪಾಸಿಟೀವ್ | Davangere | Oneindia kannada

      ಕೆಆರ್ ಪುರ ಕ್ಷೇತ್ರದ ಹೆಚ್ ಎಎಲ್ ವಾರ್ಡ್ ನಲ್ಲಿ ಬಡವರಿಗೆ ಆಹಾರ ಪದಾರ್ಥ ಹಾಗೂ ತಾಜಾ ತರಕಾರಿ ವಿತರಣೆ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಕೆಂಪು ವಲಯವನ್ನು ಹೊರತುಪಡಿಸಿ ಉಳಿದ ವಲಯಗಳಲ್ಲಿ ರಾಕ್ ಡೌನ್ ಸಡಿಲಿಕೆ ಮಾಡುವಂತೆ ಸಲಹೆ ನೀಡಿದರು.

      ಕರ್ನಾಟಕದಲ್ಲಿ ಶುಕ್ರವಾರದ ಕೂಡ 11 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ. ಈ ಪೈಕಿ ಮಂಡ್ಯದಲ್ಲಿ ಎಂಟು ಮಂದಿಗೆ ಹಾಗೂ ಬೆಳಗಾವಿಯಲ್ಲಿ ಮೂವರಿಗೆ ಸೋಂಕು ಪತ್ತೆಯಾಗಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯು 576ಕ್ಕೆ ಏರಿಕೆಯಾಗಿದೆ.

      Karnataka Lockdown: Ex-CM Siddaramaiahs Advice To CM On Lockdown Relaxation

      ಆರ್ಥಿಕ ಸಂಕಷ್ಟ ನಿವಾರಣೆಗೆ ಕ್ರಮ ತೆಗೆದುಕೊಳ್ಳಿರಿ ಎಂದ ಸಿದ್ದರಾಮಯ್ಯ:

      ಕರ್ನಾಟಕದಲ್ಲಿ ಕೆಂಪು ವಲಯಗಳನ್ನು ಹೊರತುಪಡಿಸಿ ಲಾಕ್ ಡೌನ್ ಹಂತ ಹಂತವಾಗಿ ಸಡಿಲಿಕೆಗೊಳಿಸಬೇಕು. ಬಹಳ ವಿವೇಚನೆಯಿಂದ ಲಾಕ್ ಡೌನ್ ಸಡಿಲಿಕೆ ಮಾಡಬೇಕು ಜೊತೆಗೆ ಆರ್ಥಿಕ ಸಂಕಷ್ಟ ನಿವಾರಣೆಗೆ ಸರ್ಕಾರ ಯೋಜನೆ ರೂಪಿಸಬೇಕು. ಆಹಾರ ಪದಾರ್ಥಗಳ ವಿತರಣೆ ಮಾಡದಿದ್ದಲ್ಲಿ ಜನರು ರೊಚ್ಚಿಗೆದ್ದು ಬೀದಿಗಿಳಿಯುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

      ರಾಜ್ಯದ ಸಂಘಟಿತ, ಅಸಂಘಟಿತ ಹಾಗೂ ಕೃಷಿ ಕಾರ್ಮಿಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಶುಭ ಕೋರಿದರು. ಮಾಹಿತಿ ಪ್ರಕಾರ 12 ಲಕ್ಷಕ್ಕೆ ಮಾತ್ರ ಆಹಾರ ಪದಾರ್ಥಗಳು ಸಿಕ್ಕಿದ್ದು, ರಾಜ್ಯದಲ್ಲಿ ಒಟ್ಡು 24 ಲಕ್ಷ ಕಾರ್ಮಿಕರಿದ್ದಾರೆ. ಸರ್ಕಾದ ಅನಗತ್ಯ ಖರ್ಚಿಗೆ ಕಡಿವಾಣ ಹಾಕಬೇಕು, ನಿಗಮ ಮಂಡಳಿಗಳ ದುಂದು ವೆಚ್ಚ ಕಡಿಮೆ ಆಗಬೇಕು ಎಂದು ಹೇಳಿದರು.

      ಕರ್ನಾಟಕದಲ್ಲಿ ತುರ್ತು ಸೇವೆ ಹೊರತುಪಡಿಸಿ ಎಲ್ಲವನ್ನು ಸ್ಥಗಿತಗೊಳಿಸಬೇಕು. ಮುಖ್ಯಮಂತ್ರಿಗಳಿಗೆ ಕೊರೊನಾ ವೈರಸ್ ಸೋಂಕು ಹರಡುವಿಕೆ ಬಗ್ಗೆ ಚಿಂತೆಯೇ ಇಲ್ಲ. ಅಧಿಕಾರಿಗಳು ಬರೆದದ್ದನ್ನು ಮಾತ್ರ ಓದುತ್ತಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+