ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಮೊದಲ ಹೈ ಸ್ಪೀಡ್‌ ರೈಲು, ಎಲ್ಲಿ ಸಂಚರಿಸಲಿದೆ ಈ ರೈಲು?

|
Google Oneindia Kannada News

ಬೆಂಗಳೂರು, ಏಪ್ರಿಲ್‌ 25: ಕರ್ನಾಟಕದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿ ಹಾಗೂ ಬೆಂಗಳೂರಿನ ನಡುವೆ ಹೈ ಸ್ಪೀಡ್ ರೈಲು ಯೋಜನೆ ಜಾರಿಗೆ ಚಿಂತನೆ ನಡೆದಿದೆ. ರೈಲ್ವೆ ಇಲಾಖೆಯ ಈ ಚಿಂತನೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಪ್ರಸ್ತಾಪಿದ್ದು, ಹೈ ಸ್ಪೀಡ್ ರೈಲು ಓಡಿಸಲು (ಎಚ್ಎಸ್ಆರ್) ರೂಟ್ ಕಾರಿಡಾರ್ ನೀಡುವ ಮೂಲಕ ಪ್ರಸ್ತಾಪಿಸಿದೆ.

ಸದ್ಯ ಭಾರತೀಯ ವಿಜ್ಞಾನ ಸಂಸ್ಥೆಯು ರೈಲ್ವೆ ಇಲಾಖೆಗೆ ಪ್ರಸ್ತಾವಿತ ಹೈ ಸ್ಪೀಡ್ ರೈಲು (ಎಚ್ಎಸ್ಆರ್ ) ರೂಟ್ ಕಾರಿಡಾರ್ ಒದಗಿಸಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಪ್ರಕಾರ ಪ್ರಸ್ತಾವಿತ ರೂಟ್ ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಯಶವಂತಪುರ ಈ ನಾಲ್ಕು ನಿಲ್ದಾಣಗಳೊಂದಿಗೆ ಪ್ರಸ್ತುತ ಹಾಗೂ ಪ್ರಸ್ತಾವಿತ ರೈಲು ಜಾಲದೊಂದಿಗೆ 400 ಕಿಲೋಮೀಟರ್ ದೂರ ಕ್ರಮಿಸಲು ಹೈ ಸ್ಪೀಡ್ ರೈಲು ಓಡಿಸಲು ಈ ಮಾರ್ಗವನ್ನು ತೆಗೆದುಕೊಳ್ಳಬಹುದು ಎಂದು ಹೇಳಿದೆ.

ಮೈಸೂರು- ಬೆಂಗಳೂರು- ಚೆನ್ನೈ ಹೈಸ್ಪೀಡ್ ರೈಲು ಸರ್ವೆ; ಡಿಪಿಆರ್‌ಗೆ ಕೇಂದ್ರ ಸಮ್ಮತಿಮೈಸೂರು- ಬೆಂಗಳೂರು- ಚೆನ್ನೈ ಹೈಸ್ಪೀಡ್ ರೈಲು ಸರ್ವೆ; ಡಿಪಿಆರ್‌ಗೆ ಕೇಂದ್ರ ಸಮ್ಮತಿ

ಈ ಯೋಜನೆ ಜಾರಿಗೆ ಬಂದರೆ ಕರ್ನಾಟಕದಲ್ಲಿ ಮೊದಲ ಹೈ ಸ್ಪೀಡ್‌ ರೈಲು ಹುಬ್ಬಳ್ಳಿ ಹಾಗೂ ಬೆಂಗಳೂರಿನ ನಡುವೆ ಸಂಚರಿಸಲಿದೆ ಸದ್ಯ ರೂಟ್‌ ಕಾರಿಡಾರ್‌ಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿರುವ ಭಾರತೀಯ ವಿಜ್ಞಾನ ಸಂಸ್ಥೆಈಗಿರುವ ಕಾರಿಡಾರ್‌ಗಳಲ್ಲಿ ದಾವಣಗೆರೆ, ಚಿತ್ರದುರ್ಗ ತುಮಕೂರು ಹಾಗೂ ಯಶವಂತಪುರ ನಿಲ್ದಾಣಗಳು ಈ ಹೈ ಸ್ಪೀಡ್‌ ರೈಲಿನ ನಾಲ್ಕು ಪ್ರಮುಖ ನಿಲ್ದಾಣಗಳು ಆಗಲಿದ್ದು ಇನ್ನು ಕರ್ನಾಟಕದ ಎರಡನೇ ಬೃಹತ್‌ ನಗರವಾಗಿರುವ ಹುಬ್ಬಳ್ಳಿಯ ಜನತೆಗೆ ಹೈ ಸ್ಪೀಡ್‌ ರೈಲು ಸೇವೆ ಒದಗಿಸಲಿದ್ದು ಕೇವಲ 5 ಗಂಟೆಯಲ್ಲಿ ಬೆಂಗಳೂರು ತಲುಪುವ ಹಾಗೂ ಬೆಂಗಳೂರಿನಿಂದ ಹುಬ್ಬಳ್ಳಿಗೂ 5 ಗಂಟೆಯಲ್ಲಿ ರೈಲು ಪ್ರಯಾಣಿಕರನ್ನು ತಲುಪಿಸುವ ವೇಗದ ರೈಲು ಯೋಜನೆ ಇದಾಗಿದೆ.

Karnataka high-speed rail : IISC proposed a high-speed rail corridor from Bengaluru to Hubballi

ಕಳೆದ ಎರಡು ವರ್ಷಗಳ ಹಿಂದೆ ಪುಣೆ-ಬೆಳಗಾವಿ ರೈಲನ್ನು ಹುಬ್ಬಳ್ಳಿ ತನಕ ವಿಸ್ತರಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದರು. ಬಳಿಕ ಆಗಿನ ರೈಲ್ವೆ ಖಾತೆ ರಾಜ್ಯ ಸಚಿವ ದಿ.ಸುರೇಶ್ ಅಂಗಡಿ ಅವರು ಮನವಿಗೆ ತಲೆದೂಗಿದರು ಮತ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಹುಬ್ಬಳ್ಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಹುಬ್ಬಳ್ಳಿ-ಪುಣೆ ರೈಲು ಪರಿಚಯಿಸಿದ ನಂತರ ಈಗ ಹೈ ಸ್ಪೀಡ್‌ ರೈಲು ಹುಬ್ಬಳ್ಳಿಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

Karnataka high-speed rail : IISC proposed a high-speed rail corridor from Bengaluru to Hubballi

ಕೇಂದ್ರ ಸರ್ಕಾರವು ದೇಶಾದ್ಯಂತ ಅನೇಕ ರೈಲು ನಿಲ್ದಾಣಗಳನ್ನು ನವೀಕರಿಸುತ್ತಿದೆ, ಸುಮಾರು 6,000 ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉಚಿತ ವೈಫೈ ಒದಗಿಸುತ್ತಿವೆ. ಸೇವೆಗಳು, ರೈಲು ಸಮಯ ಮತ್ತು ಹೆಚ್ಚಿನದನ್ನು ಸುಧಾರಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದು ರೈಲುಗಳು ಮತ್ತು ನಿಲ್ದಾಣಗಳನ್ನು ಸ್ವಚ್ಛವಾಗಿಡಲು ಜನರು ರೈಲ್ವೆಯೊಂದಿಗೆ ಸಹಕರಿಸಬೇಕು ಕೇಂದ್ರ ಸರ್ಕಾರವು ಸಾರ್ಜಜನಿಕರಿಗೆ ವಿನಂತಿಸಿದೆ.

Recommended Video

ಮೋದಿಗೆ ಪತ್ರ ಬರೆದ ಬೋಸ್ ಮೊಮ್ಮಗ! | Oneindia Kannada

English summary
Karnataka high-speed rail : The Indian Institute of Science (IISc) proposed a high-speed rail corridor from Bengaluru to Hubballi. Know more. The High Speed Train Carries 130 Kilometers per hour in just 5 hours,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X