ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ 'ನಮ್ಮ ಮೆಟ್ರೋ' ಜಾಲ ವಿಸ್ತರಿಸಿ: ಹೈಕೋರ್ಟ್
ಬೆಂಗಳೂರು, ಸೆಪ್ಟಂಬರ್ 12: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರ ನಿಯಂತ್ರಣದಲ್ಲಿ ನಮ್ಮ ಮೆಟ್ರೋ (Namma Metro) ಮಹತ್ವದ ಪಾತ್ರ ವಹಿಸುತ್ತಿದೆ. ಈ ಸಂಬಂಧ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಮೆಟ್ರೋ ವಿಸ್ತರಣೆ ಸೇರಿದಂತೆ ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮ ಕೈಗೊಂಡ, ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.
ಸಂಚಾರ ದಟ್ಟಣೆ ಸಂಬಂಧ ಶಾಲಾ, ಕಾಲೇಜು, ಕೈಗಾರಿಕೆಗಳು ಕೆಲಸ ಕಾರ್ಯಗಳು ಸಮಯ ಬದಲಾವಣೆಗೆ ನೀಡಿ ಹೈಕೋರ್ಟ್ ಟ್ರಾಫಿಕ್ ನಿಯಂತ್ರಣಕ್ಕೆ ಮೆಟ್ರೋ ವಿಸ್ತರಣೆ ಜೊತೆಗೆ ಇನ್ನಿತರ ಕ್ರಮಕೈಗೊಳ್ಳಬೇಕು. ಆ ಬಗ್ಗೆ ಮುಂದಿನ ಒಂದೂವರೆ ತಿಂಗಳ ನಂತರ (6 ವಾರಗಳ ಬಳಿಕ) ಪ್ರಗತಿಯ ವರದಿ ಸಲ್ಲಿಕೆ ಮಾಡುವಂತೆ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾ.ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಆದೇಶಿಸಿತು ಎಂದು ಟಿವಿ ನೈನ್ ವರದಿ ಮಾಡಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಮತ್ತು ರಾಜ್ಯ ಸರ್ಕಾರ ಸೇರಿಕೊಂಡು ದೇವನಹಳ್ಳಿ ವಿಮಾನ ನಿಲ್ದಾಣ, ನಾಗಸಂದ್ರ, ಚಲಘಟ್ಟವರೆ ಸೇರಿದಂತೆ ವಿವಿಧ ಕಡೆಗಳಲ್ಲಿ ಮೆಟ್ರೋ ಜಾಲ ವಿಸ್ತರಿಸುತ್ತಿದೆ. ಈ ಮಧ್ಯೆ ಹೈಕೋರ್ಟ್ ಮೆಟ್ರೋ ವಿಸ್ತರಣೆ ಬಗ್ಗೆ ಸೂಚನೆ ನೀಡಿರುವುದು ಜಾಲ ವಿಸ್ತರಣೆಗೆ ಮತ್ತಷ್ಟು ವೇಗ ಬರುವ ಸಾಧ್ಯತೆಗಳು ಇವೆ.
ಖಾಯಂ ಆದ ಇಬ್ಬರು ನ್ಯಾಯಾಧೀಶರ
ಕರ್ನಾಟಕ ರಾಜ್ಯ ಹೈಕೋರ್ಟ್ನ ಇಬ್ಬರು ನ್ಯಾಯಾಧೀಶರಾದ ಅನಂತ್ ರಾಮನಾಥ ಹೆಗಡೆ ಮತ್ತು ನ್ಯಾಯಮೂರ್ತಿ .ಎಸ್.ಹೇಮಲೇಖ ಅವರ ನೇಮಕವನ್ನು ಖಾಯಂ ಮಾಡಲಾಗಿದೆ. 1 ವರ್ಷದ ಅವಧಿಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಸಿದ್ದಯ್ಯ ರಾಚಯ್ಯ ಅವರ ಮುಂದುವರಿಯಲಿದ್ದಾರೆ.












Click it and Unblock the Notifications