ಎಚ್ಚರಿಕೆ ಬಳಿಕವು ಓಲಾ, ಊಬರ್, ರಾಪಿಡೋ ಆಟೋ ಸೇವೆ

ಬೆಂಗಳೂರು, ಅಕ್ಟೋಬರ್ 12: ಪ್ರಯಾಣಿಕರಿಂದ ಹೆಚ್ಚುವರಿ ಹಣ ಪಡೆಯುವ ಕಾರಣದಿಂದ ಕರ್ನಾಟಕ ಸಾರಿಗೆ ಪ್ರಾಧಿಕಾರದ ಎಚ್ಚರಿಕೆಯ ಬಳಿಕವು ಸಹ ಆಪ್ ಆಧಾರಿತ ಅಗ್ರಿಗೇಟರ್ ಮೂಲಕ ಚಲಿಸಬಹುದಾದ ಓಲಾ, ಉಬರ್ ಮತ್ತು ರಾಪಿಡೊಗಳಲ್ಲಿ ಆಟೋ ರಿಕ್ಷಾಗಳು ಸೇವೆಗೆ ಲಭ್ಯ ಇವೆ.

ಓಲಾ, ಉಬರ್ ಮತ್ತು ರಾಪಿಡೊ ಮೂರು ಕಂಪನಿಗಳು ಬುಧವಾರದಿಂದ ತಮ್ಮ ಆ್ಯಪ್‌ಗಳಲ್ಲಿ ಆಟೋ ರಿಕ್ಷಾಗಳನ್ನು ಹೈರ್ ಮಾಡುವ ವಿಧಾನವನ್ನು ಆಟೋ ಚಾಲಕರಿಗೆ ನೀಡುವುದನ್ನು ಸ್ಥಗಿತಗೊಳಿಸಲು ಒಪ್ಪಿಕೊಂಡಿವೆ. ಹೀಗೆಂದು ಎಂದು ರಾಜ್ಯ ಸಾರಿಗೆ ಆಯುಕ್ತ ಟಿ.ಎಚ್.ಎಂ ಕುಮಾರ್ ಅವರು ಹೇಳಿದ್ದರು.

ಆದರೆ ಓಲಾ, ಊಬರ್ ಮತ್ತು ರಾಪಿಡೊ ಮೂರು ಕಂಪನಿಗಳು ಆ್ಯಪ್ ಆಧಾರಿತವಾಗಿ ಸೇವೆ ಸ್ಥಗಿತಗೊಂಡಿಲ್ಲ. ಬುಧವಾರ ಸಹ ಈ ಮೂರು ಕಂಪನಿಗಳು ಸೇವೆ ನೀಡುತ್ತಿರುವುದು ಕಂಡು ಬಂದಿದೆ. ಆದರೆ ಪ್ರಯಾಣಿಕರಿಗಾಗಿ ಕೆಲವು ಸ್ಥಳಗಳಲ್ಲಿ ಕಾಯುವ ಸಮಯ ಸುಮಾರು ಏಳು ನಿಮಿಷಗಳಿಂದ 15 ನಿಮಿಷಕ್ಕೆ ಹೆಚ್ಚಾಗಿದ್ದರಿಂದ ಅಪ್ಲಿಕೇಶನ್‌ಗಳಿಗೆ ಲಾಗ್ಇನ್ ಆಗುವ ಆಟೋರಿಕ್ಷಾಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎನ್ನಲಾಗಿದೆ.

Karnataka Govt warned after available Ola, Uber, Rapido auto service

ಸರ್ಕಾರದ ನಿಯಮ ಉಲ್ಲಂಘಿಸಿ ಕಡಿಮೆ ದೂರಕ್ಕೆ ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ವಿಧಿಸುವ ಬಗ್ಗೆ ಅನೇಕ ಮಂದಿ ಸಾಮಾಜಿಕ ಮಾಧ್ಯಮದಲ್ಲಿ ದೂರು ನೀಡಿದರು. ಓಲಾ ಕ್ಯಾಬ್‌ಗಳು ಕೇವಲ 8 ರಿಂದ 9ಕಿಲೋ ಮೀಟರ್‌ಗೆಲ್ಲ 183 ದರ ತೋರಿಸುತ್ತವೆ. ಇಷ್ಟು ದೂರಕ್ಕೆ ಸರಿಸುಮಾರು 130ರೂ. ವಿಧಿಸಬಹುದು. ಆದರೆ ಈ ಆ್ಯಪ್ ಆಧಾರಿತ ಕಂಪನಿಗಳು ಆಟೋ ಸೇವೆಗಳು ದುಬಾರಿಯಾಗಿವೆ. ಈ ಕುರಿತು ಸಾರಿಗೆ ಪ್ರಾಧಿಕಾರವು ಕ್ರಮ ಕೈಗೊಳ್ಳಬೇಕು ಎಂದು ಕುಮಾರ್ ಎಂಬುವವರು ಟ್ವೀಟ್ ಮಾಡಿದ್ದರು.

ಸರ್ಕಾರದ ಎಚ್ಚರಿಕೆ ಬಳಿಕವೂ ಸೇವೆ

ಸಾರಿಗೆ ಸೇವೆ ನೀಡುವ ಆ್ಯಪ್‌ಗಳ ಅಧಿಕಾರಿಗಳು ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘಿಸುತ್ತಿವೆ ಎಂದು ಇನ್ನಿತರರು ಸಾಮಾಜಿಕ ಜಾಲತಾಣ ಮೂಲಕ ದೂರು ನೀಡಿದ್ದರು. ರವೀಂದ್ರ ಎನ್ನುವವರು ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿದವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದರು. ಬಳಿಕ ಎಚ್ಚೆತ್ತು ಸರ್ಕಾರ ಕಂಪನಿಗಳಿಗೆ ನೋಟಿಸ್ ನೀಡಿತ್ತು. ಅದಲ್ಲದೇ ಉಬರ್, (ಓಲಾ) ಸೇವೆಯನ್ನು ಇಂದಿನಿಂದ ನೀಡಿದರೆ ದಂಡ ವಿಧಿಸಲಾಗುವುದು ಎಂದು ಹೇಳಿತ್ತು.

Karnataka Govt warned after available Ola, Uber, Rapido auto service

ಈ ಬೆಳವಣಿಗೆಗಳ ನಂತರ ಆಯುಕ್ತ ಕಂಪನಿಗಳ ಅಧಿಕಾರಿಗಳ ಜತೆ ಮಾತನಾಡಿದ್ದರು. ಆ್ಯಪ್‌ಗಳಲ್ಲಿ ಆಟೋ ರಿಕ್ಷಾಗಳನ್ನು ಹೈಲ್ ಮಾಡುವ ವಿಧಾನವನ್ನು ಆಟೋ ಚಾಲಕರಿಗೆ ನೀಡುವುದನ್ನು ಸ್ಥಗಿತಗೊಳಿಸುವುದಾಗಿ ಕಂಪನಿಗಳು ತಿಳಿಸಿದ್ದವು. ಇಷ್ಟಾದರೂ ಅಲ್ಲಲ್ಲಿ ಆ್ಯಪ್ ಆಧಾರಿತ ಆಟೋಗಳು ಸೇವೆ ಸಿಗುತ್ತಿವೆ. ಇತ್ತ ಆಯುಕ್ತರಿಂದ ಅಗತ್ಯ ಸೂಚನೆಗಳನ್ನು ಪಡೆದ ನಂತರ ಆದೇಶ ಜಾರಿ ಚಟುವಟಿಕೆ ಆರಂಭಿಸಲಾಗುವುದು ಎಂದು ಪ್ರಾಧಿಕಾರದ ಮತ್ತೊಬ್ಬ ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ರೀಗೇಟರ್‌ಗಳಾದ ಓಲಾ, ಉಬರ್ ಕಂಪನಿಗಳು ಕ್ಯಾಬ್ ಸೇವೆಗೆ ಮಾತ್ರ ಅನುಮತಿ ಪಡೆದು ಆಟೋ ಸೇವೆಯನ್ನು ನೀಡುತ್ತಿವೆ. ಸೇವೆ ವೇಳೆ ಜನರಿಂದ ಅಧಿಕ ಹಣ ಸುಲಿಗೆ ಮಾಡುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ. ಹೀಗಾಗಿ ಸರ್ಕಾರ ಈ ಕಂಪನಿಗಳನ್ನು ನಿಷೇಧಿಸಬೇಕು ಎಂದು ಆಟೋ ರಿಕ್ಷಾ ಚಾಲಕರ ಒಕ್ಕೂಟವು ರಾಜ್ಯ ಸರ್ಕಾರ ಗಡುವು ನೀಡಿದೆ. ಸರ್ಕಾರದ ಮುಂದಿನ ನಡೆ, ಕೈಗೊಳ್ಳುವ ಕ್ರಮ ಕುರಿತು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+