ಸಿನಿಮಾ ಶೂಟಿಂಗ್‌ ಸದ್ಯಕ್ಕೆ ಅವಕಾಶವಿಲ್ಲ, ಡಬ್ಬಿಂಗ್ ಮಾಡಬಹುದು

ಬೆಂಗಳೂರು, ಮೇ 8: ಚಲನಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ನೀಡುವ ಬಗ್ಗೆ ಕಂದಾಯ ಸಚಿವ ಆರ್‌ ಅಶೋಕ್ ಮಾತನಾಡಿದ್ದಾರೆ. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಚಲನಚಿತ್ರಗಳ ಶೂಟಿಂಗ್‌ಗೆ ಸದ್ಯಕ್ಕೆ ಅವಕಾಶವಿಲ್ಲ ಆದರೆ, ಡಬ್ಬಿಂಗ್ ಮಾಡಬಹುದು ಎಂದು ಹೇಳಿದ್ದಾರೆ.

ನಿನ್ನೆ ಚಲನಚಿತ್ರಗಳ ನಿರ್ಮಾಪಕರು ಸರ್ಕಾರಕ್ಕೆ ಚಿತ್ರೀಕರಣಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಆದರೆ, ಸರ್ಕಾರ ಸದ್ಯಕ್ಕೆ ಶೂಟಿಂಗ್ ಅವಕಾಶವನ್ನು ನೀಡಲು ಒಪ್ಪಿಲ್ಲ. ಬರೀ ಡಬ್ಬಿಂಗ್ ಮತ್ತು ಎಡಿಟಿಂಗ್ ಮಾತ್ರ ಮಾಡಬಹುದು ಎಂದು ತಿಳಿಸಿದೆ.

ಸರ್ಕಾರ ಡಬ್ಬಿಂಗ್ ಮತ್ತು ಎಡಿಟಿಂಗ್‌ಗೆ ಅವಕಾಶ ನೀಡಿದರೂ, 5 ಮಂದಿಯನ್ನ ಮಾತ್ರ ಇಟ್ಟುಕೊಂಡು ಕೆಲಸ ಮಾಡಬೇಕು ಹಾಗೂ ಕೊರೊನಾ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.

Government Didnt Give Permission For Movie Shooting

ಸಿನಿಮಾ ಚಿತ್ರೀಕರಣದಲ್ಲಿ ಸಾಕಷ್ಟು ಜನರು ಭಾಗಿಯಾಗಿರುತ್ತಾರೆ. ಅಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಬಹಳ ಕಷ್ಟ. ಹೀಗಾಗಿ, ಸದ್ಯಕ್ಕೆ ಯಾವ ರಾಜ್ಯದ ಸರ್ಕಾರವೂ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಿಲ್ಲ. ಸಿನಿಮಾ ಪ್ರದರ್ಶನ ಕೂಡ ಶುರುವಾಗಿಲ್ಲ.

ರಾಜ್ಯದಲ್ಲಿ ಧಾರಾವಾಹಿಗಳ ಶೂಟಿಂಗ್‌ಗೆ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಆದರೆ, ಒಳಾಂಗಣ ಚಿತ್ರೀಕರಣ ಮಾತ್ರ ಮಾಡಲು ಆದೇಶ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+