ಸಚಿವ ಸಂಪುಟದಲ್ಲಿ ಮತಾಂತರ ನಿಷೇಧ ಕಾಯ್ದೆ ಸುಗ್ರಿವಾಜ್ಞೆ ಅಂಗೀಕಾರ
ಬೆಂಗಳೂರು, ಮೇ12: ಮತಾಂತರ ನಿಷೇಧ ಕಾಯ್ದೆಯನ್ನ ಸರ್ಕಾರ ಕೊನೆಗೂ ಜಾರಿಗೊಳಿಸಿದೆ. ಮೇಲ್ಮನೆಯಲ್ಲಿ ಚರ್ಚೆಗೂ ಬಾರದ ವಿಧೇಯಕವನ್ನು ಸಿಎಂ ಬೊಮ್ಮಾಯಿ ನೇತೃತ್ವದ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮೂಲಕ ಸಮ್ಮತಿಸಲು ಅನುಮೋದನೆ ನೀಡಿದೆ. ಚುನಾವಣೆಗಳ ಹೊತ್ತಿನಲ್ಲೇ ಧಾರ್ಮಿಕ ಸಂಘರ್ಷಕ್ಕೆ ನಾಂದಿ ಮಾಡಿಕೊಟ್ಟಿದೆ. ಹಿಂದುಮತಗಳ ಕ್ರೋಡೀಕರಣಕ್ಕಾಗಿ ಮತಾಂತರ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದೆ.
ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿ
ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಅಲ್ಪಸಂಖ್ಯಾತರ ಆಕ್ರೋಶಕ್ಕೆ ಗುರಿಯಾಗಿದ್ದ ಮತಾಂತರ ನಿಷೇಧ ಕಾಯ್ದೆಯನ್ನ ಜಾರಿಗೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ವಿಧಾನಸಭೆಯಲ್ಲಿ ಅಂಗೀಕಾರವಾಗಿ ಮೇಲ್ಮನೆಯಲ್ಲಿ ಚರ್ಚೆಗೂ ಬಾರದ ಬಿಲ್ ಅನ್ನ ಸುಗ್ರೀವಾಜ್ಞೆ ಮೂಲಕ ಒಪ್ಪಿಕೊಳ್ಳಲಾಗಿದೆ..
ಬೊಮ್ಮಾಯಿ ನೇತೃತ್ವದ ಸಂಪುಟ ಸಭೆಯಲ್ಲಿ ಇಂದು ಸಮ್ಮತಿ..!
ಇಂದು ನಡೆದ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಸಲಾಯಿತು. ನಂತರ ಸರ್ವಾನುಮತದಿಂದ ಸುಗ್ರೀವಾಜ್ಞೆ ಹೊರಡಿಸಲು ಅನುಮೋದನೆ ನೀಡಲಾಯಿತು. ಹೀಗಾಗಿ ಕಾಯ್ದೆಗೆ ಶೀಘ್ರದಲ್ಲೇ ಕಾನೂನಾಗಿ ಜಾರಿಯಾಗಲಿದ್ದು ಮತಾಂತರ ಮಾಡುವವರಿಗೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ.

ಮೇಲ್ಮನೆಯಲ್ಲಿ ಬಹುಮತವಿಲ್ಲದ ಕಾರಣ ಸುಗ್ರೀವಾಜ್ಙೆ ಮೂಲಕ ಜಾರಿ..?
ಕಳೆದ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆ ಹೆಸರಿನಲ್ಲಿ ವಿಧೇಯಕವನ್ನ ಮಂಡಿಸಲಾಗಿತ್ತು. ಪ್ರತಿಪಕ್ಷ ಕಾಂಗ್ರೆಸ್ ತೀರ್ವ ವಿರೋಧದ ನಡುವೆಯೂ ಕೆಳಮನೆಯಲ್ಲಿ ಪಾಸಾಗಿತ್ತು. ಮೇಲ್ಮನೆಯಲ್ಲೂ ಮಂಡನೆಗೆ ಪ್ರಯತ್ನ ನಡೆಸಲಾಯ್ತು, ಆದರೆ ಬಹುಮತದ ಕೊರೆತೆಯಿಂದಾಗಿ ಸರ್ಕಾರ ಮಂಡನೆಯನ್ನೇ ಮಾಡಲಿಲ್ಲ. ಆನಂತರ ಬೆಂಗಳೂರಿನಲ್ಲಿ ನಡೆದ ಜಂಟಿ ಅಧಿವೇಶನದಲ್ಲಿ ಮಂಡನೆ ಮಾಡಿದರು ಚರ್ಚೆಗೆ ಕೈಗೆತ್ತಿಕೊಳ್ಳಲಿಲ್ಲ. ಲಖನ್ ಜಾರಕಿಹೊಳಿ ಸೇರಿ ನಾಲ್ವರು ಸದಸ್ಯರು ಗೈರಾಗಿದ್ದರಿಂದ ಮತ್ತೆ ನೆನೆಗುದಿಗೆ ಬಿದ್ದಿತ್ತು. ಕಾಯ್ದೆ ಜಾರಿಗೆ ಆರ್‌ಎಸ್‌ಎಸ್‌ನಿಂದ ನಿರಂತರ ಒತ್ತಡ ಬಂದಿದ್ದರಿಂದ ಇಂದು ನಡೆದ ಸಂಪುಟ ಸಭೆಯಲ್ಲಿ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಮತಾಂತರ ನಿಷೇದ ಕಾಯ್ದೆ ಜಾರಿಗೊಳಿಸಿದೆ.
ಮತಾಂತರ ನಿಷೇಧ ಕಾಯ್ದೆಯಲ್ಲಿರುವ ಅಂಶಗಳೇನು..?
*ಬಲವಂತ, ವಂಚನೆ, ಒತ್ತಾಯ, ಆಮಿಷದ ಮದುವೆಗೆ ನಿಷೇಧ
*ಬಲವಂತದ ಮತಾಂತರಕ್ಕೆ 3 ರಿಂದ 5 ವರ್ಷ ಜೈಲು,25 ಸಾವಿರ ದಂಡ
*ಅಪ್ರಾಪ್ತರು,ದಲಿತರ ಮತಾಂತರಕ್ಕೆ 3 ರಿಂದ 10 ವರ್ಷ ಶಿಕ್ಷೆ,50 ಸಾವಿರ ದಂಡ
*ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ 5 ಲಕ್ಷ ಪರಿಹಾರ
*ಅಪರಾಧ ಪುನರಾವರ್ತನೆ ಆದಲ್ಲಿ ಐದು ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷ ದಂಡ

*ಮತಾಂತರದ ಉದ್ದೇಶದಿಂದ ಆದ ವಿವಾಹ ಅನೂರ್ಜಿತ
*ಮತಾಂತರ ಅಪರಾಧ ಜಾಮೀನು ರಹಿತವಾಗಿರಲಿದೆ
* ಮತಾಂತರಕ್ಕೂ ಅವಕಾಶವಿದೆ,30 ದಿನ ಮೊದಲೇ ಡಿಸಿಗೆ ತಿಳಿಸಬೇಕು
* ಮತಾಂತರಗೊಂಡ ವ್ಯಕ್ತಿ 20 ದಿನದೊಳಗೆ ಡಿಸಿ ಮುಂದೆ ಹಾಜರಾಗಬೇಕು
ಅಲ್ಪಸಂಖ್ಯಾತರರೇ ಸರ್ಕಾರದ ಟಾರ್ಗೇಟ್..! ಮತಾಂತರಕ್ಕೆ ಆಗಬೇಕಿದ್ದರೆ ಕಠಿಣ ನಿಯಮ..
*ಮತಾಂತರವಾಗಲು ಮುಂದಾಗಿರುವ ವ್ಯಕ್ತಿ ಕನಿಷ್ಠ ಆರವತ್ತು ದಿನಗಳ ಮೊದಲು ಜಿಲ್ಲಾ ದಂಡಾಧಿಕಾರಿಗೆ ಈ ಬಗ್ಗೆೆ ತಿಳಿಸಬೇಕು.
*ಮತಾಂತರ ಮಾಡುವ ವ್ಯಕ್ತಿಯೂ ಈ ಬಗ್ಗೆೆ ಜಿಲ್ಲಾ ದಂಡಾಧಿಕಾರಿಗೆ ಮೂವತ್ತು ದಿನಗಳ ಮೊದಲೇ ಈ ಬಗ್ಗೆೆ ಮಾಹಿತಿ ಕೊಡಬೇಕು.
* ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು. ಇದಕ್ಕೆೆ30 ದಿನಗಳ ಒಳಗಾಗಿ ಆಕ್ಷೇಪಣೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಿಚಾರಣೆ ನಡೆಸಲು ಅವಕಾಶ ಇದೆ.

*ವಿಚಾರಣೆಯ ಸಂದರ್ಭದಲ್ಲಿ ತಪ್ಪು ಕಂಡುಬಂದಲ್ಲಿ ಕ್ರಿಮಿನಲ್ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲು ಅವಕಾಶವಿದೆ.
*ಮತಾಂತರಗೊಂಡ ವ್ಯಕ್ತಿಯೂ ಮತಾಂತರಗೊಂಡ ದಿನಾಂಕದಿಂದ ಹಿಡಿದು ಮೂಲ ಧರ್ಮ, ಮತಾಂತರಗೊಂಡ ಧರ್ಮ ಹಾಗೂ ಇನ್ನಿತರ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಬೇಕು.
*ಅಪರಾಧಕ್ಕೆೆ ನೆರವು ಹಾಗೂ ಪ್ರೇರಣೆ ನೀಡಿದ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶವೂ ಇದೆ.
*ಮತಾಂತರ ಮಾಡುವ ವ್ಯಕ್ತಿಯೂ ಈ ಬಗ್ಗೆೆ ಜಿಲ್ಲಾ ದಂಡಾಧಿಕಾರಿಗೆ ಮೂವತ್ತು ದಿನಗಳ ಮೊದಲೇ ಮಾಹಿತಿ ಕೊಡಬೇಕು.
*ವಿಚಾರಣೆಯ ಸಂದರ್ಭದಲ್ಲಿ ತಪ್ಪು ಕಂಡುಬಂದಲ್ಲಿ ಜಿಲ್ಲಾ ದಂಡಾಧಿಕಾರಿ ಕ್ರಿಮಿನಲ್ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲು ಅವಕಾಶವಿದೆ.
ಸರ್ಕಾರ ವಿಧಾನ ಪರಿಷತ್ತಿನಲ್ಲಿ ಅಂಗೀಕಾರವಾಗಬೇಕಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ತರತುರಿಯಲ್ಲಿ ಸುಗ್ರಿವಾಜ್ಞೆಯ ಮೂಲಕ ಅಂಗೀಕರಿಸಿದೆ. ಚುನಾವಣೆಯ ಹೊತ್ತಿನಲ್ಲಿ ಹಿಂದೂ ಮತಗಳ ಕ್ರೋಢಿಕರಣ ಮಾಡುವ ಸಲುವಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಇದರಿಂದ ರಾಜಕೀಯ ಸಮರಕ್ಕೆ ಕಾರಣವಾಗಬಹುದು.












Click it and Unblock the Notifications