ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ವಿಭಜನೆ ಬಗ್ಗೆ ಶೀಘ್ರವೇ ನಿರ್ಧಾರ: ಕುಮಾರಸ್ವಾಮಿ

By Mahesh
|
Google Oneindia Kannada News

ಬೆಂಗಳೂರು, ಜೂನ್ 28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜನೆ ಹಾಗೂ ಆಡಳಿತ ವಿಕೇಂದ್ರಿಕರಣ ಕುರಿತಂತೆ ಬಿಬಿಎಂಪಿ ಪುನರ್ ವಿಂಗಡಣಾ ಸಮಿತಿಯು ತನ್ನ ಅಂತಿಮ‌ ವರದಿ ಸಲ್ಲಿಸಿದೆ.

ಈ ವರದಿ ಪರಿಶೀಲಿಸಿ, ಅಧ್ಯಯನ ನಡೆಸಿದ ಬಳಿಕ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಬಿಬಿಎಂಪಿಯನ್ನು ಐದು ಕಾರ್ಪೋರೇಷನ್​​ಗಳಾಗಿ ವಿಭಜಿಸಬೇಕೆಂಬ ಕುರಿತು ಬಿ.ಎಸ್​. ಪಾಟೀಲ್ ನೇತೃತ್ವದ ತಜ್ಞರ ಸಮಿತಿ ಶಿಫಾರಸು ಅಂತಿಮ ವರದಿ ಸಲ್ಲಿಸಿದೆ.

Karnataka Government to decide soon on BBMP split : Kumaraswamy

ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್ ಪಾಟೀಲ್ ಅಧ್ಯಕ್ಷರಾಗಿರುವ ಸಮಿತಿ ಜತೆ ಮುಖ್ಯಮಂತ್ರಿ ಅವರು ಸಭೆ ನಡೆಸಿದರು.

ಅಂತಿಮ ವರದಿ ಪ್ರಕಾರ:
* ಬಿಬಿಎಂಪಿಯನ್ನು ಐದು ಕಾರ್ಪೋರೇಷನ್​ಗಳಾಗಿ ವಿಭಜಿಸಬೇಕು. * ಬೆಂಗಳೂರಿನ ಸಮಗ್ರತೆ ಕಾಪಾಡಲು ಗ್ರೇಟರ್ ಬೆಂಗಳೂರು ಕಾರ್ಪೋರೇಷನ್ ಅಡಿಯಲ್ಲಿ ತರಬೇಕು,
* ಮೂರು ಜೋನ್ ಗಳಲ್ಲಿ ಕಾರ್ಪೋರೇಷನ್-ನಗರಪಾಲಿಕೆ-ಕಾರ್ಪೋರೇಟರ್ ನೇತೃತ್ವದ ಆಡಳಿತ ವ್ಯವಸ್ಥೆ.
* ಬೆಂಗಳೂರು ಆಡಳಿತಕ್ಕೆ ಪ್ರತ್ಯೇಕವಾದ ಕಾಯಿದೆ.
* ಬಿಬಿಎಂಪಿ 5000- 6000 ಕೋಟಿ ರೂ. ಕಂದಾಯ ಸಂಗ್ರಹದ ಸಾಮರ್ಥ್ಯ ಹೊಂದಿದೆ. ಹಳೆ ನಗರ ಪ್ರದೇಶದಲ್ಲಿ 30,000 ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್ ಪುನರ್ ವಿಂಗಡಣೆ ಮಾಡಿ 400 ವಾರ್ಡ್ ರಚನೆಗೂ ಸಮಿತಿ ಶಿಫಾರಸು
* ಬಿಬಿಎಂಪಿ ಅಧಿಕಾರಿಗಳ ನೇಮಕಾತಿ ವಿಷಯದಲ್ಲೂ ಸುಧಾರಣೆಯಾಗಬೇಕು. * ಪೌರ ಕಾರ್ಮಿಕ ಹೊರತುಪಡಿಸಿ ಉಳಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮಾಡುವುದು ಸೂಕ್ತ
* ಗ್ರೇಟರ್ ಬೆಂಗಳೂರು ಅಥಾರಿಟಿಗೆ ಮೇಯರ್ ಆಯ್ಕೆ ಜನರಿಂದಲೇ ಆಗಬೇಕು ಮತ್ತು ಮೇಯರ್ ಅಧಿಕಾರಾವಧಿ 5 ವರ್ಷಗಳಿಗೆ ನಿಗದಿಯಾಗಬೇಕು

English summary
Chief Minister H D Kumaraswamy said Government will soon take decision on BBMP. The officials recommended on dividing the Bruhat Bengaluru Mahanagara Palike (BBMP) into five sections and implementing 3-layers of administration mechanism, within a month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X