ಕಾವೇರಿ ಹೋರಾಟ, ಕರ್ನಾಟಕಕ್ಕೆ ಮೊದಲ ಜಯ: ಪ್ರವೀಣ್ ಶೆಟ್ಟಿ
ಬೆಂಗಳೂರು, ಫೆಬ್ರವರಿ16 : ಸುಪ್ರೀಂಕೋರ್ಟ್ ಕಾವೇರಿ ವಿಚಾರವಾಗಿ ನೀಡಿದ ತೀರ್ಪು ಕನ್ನಡಿಗರಿಗೆ ದೊರೆತ ಮೊದಲ ಜಯವಾಗಿದೆ. ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ಕುರಿತು ಆಶಾವಾದ ಭಾವನೆ ಮೂಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಹೇಳಿದರು.
ಶುಕ್ರವಾರ ಸುಪ್ರೀಂಕೋರ್ಟ್ ಕಾವೇರಿ ವಿವಾದ ವಿಚಾರವಾಗಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಒನ್ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯಿಸಿದ ಅವರು ಇದುವರೆಗೂ ಸುಪ್ರೀಂಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿರಲಿಲ್ಲ. ಮೊದಲ ಬಾರಿಗೆ ಜಯ ದೊರೆತಿದೆ.

ಹೆಚ್ಚುವರಿ ಕೃಷಿ ಮಾಡಲು ಅವಕಾಶ ನೀಡಿದ್ದಾರೆ. ಕರ್ನಾಟಕಕ್ಕೆ ಹೆಚ್ಚುವರಿ 14.5 ಟಿಎಂಸಿ ನೀರು ಬರಲಿದೆ. ಬೆಂಗಳೂರಿಗೆ 4.75 ನೀರು ಬರಲಿದೆ ಇದು ಎಲ್ಲರಿಗೂ ಸಂತಸ ತಂದಿದೆ. ಬಹುಪಾಲು ಕರ್ನಾಟಕದ ಪರವಾಗಿ ತೀರ್ಪು ಹೊರಬಿದ್ದಿದೆ ಡುಪ್ರೀಂಕೋರ್ಟ್ ತೀರ್ಪನ್ನು ಸಿಹಿ ಹಂಚುವ ಮೂಲಕ ಸ್ವಾಗತಿಸುತ್ತೇವೆ ಎಂದರು.












Click it and Unblock the Notifications