ಪದವಿ ಕಾಲೇಜು ಅಧ್ಯಾಪಕ- ಅಧ್ಯಾಪಕೇತರ ಸಮಾವೇಶ

ಕೆಂಪೇಗೌಡ ರಸ್ತೆಯಲ್ಲಿರುವ ಶಿಕ್ಷಕರ ಸದನದಲ್ಲಿ ಬೆಳಗ್ಗೆ 10 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದ್ದು ಖ್ಯಾತ ಸಾಹಿತಿ,ಶಿಕ್ಷಣ ತಜ್ಞ ಡಾ.ಬರಗೂರು ರಾಮಚಂದ್ರಪ್ಪ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟ(ರಿ) ಅಧ್ಯಕ್ಷ ಪ್ರೊ. ಸಿ.ಎಚ್.ಮುರಿಗೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಬಸವರಾಜ ಹೊರಟ್ಟಿ, ಕ್ಯಾ.ಗಣೇಶ್ ಕಾರ್ಣಿಕ್, ಮರಿತಿಬ್ಬೇಗೌಡ, ಗೋ. ಮಧುಸೂಧನ, ಮಹಾಂತೇಶ ಕೌಜಲಗಿ, ಅರುಣ ಶಹಾಪುರ, ವೈ.ಎ.ನಾರಾಯಣ ಸ್ವಾಮಿ, ಅಮರನಾಥ ಪಾಟೀಲ, ಮೃತ್ಯುಂಜಯ ಜಿನಗ, ಶರಣಪ್ಪ ಮಟ್ಟೂರು, ಎಸ್.ವಿ.ಸಂಕಾನೂರ, ಐವಾನ್ ಡಿಸೋಜಾ, ಚೌಡಾರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.












Click it and Unblock the Notifications