• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಬಕಾರಿ ಸಚಿವ ಎಚ್.ನಾಗೇಶ್ ರಿಗೂ ಕೊರೊನಾವೈರಸ್ ಭೀತಿ!

|
Google Oneindia Kannada News

ಬೆಂಗಳೂರು, ಆಗಸ್ಟ್.05: ಕರ್ನಾಟಕ ರಾಜ್ಯ ಅಬಕಾರಿ ಸಚಿವ ಎಚ್.ನಾಗೇಶ್ ಅವರ ಆಪ್ತ ಸಹಾಯಕ ಮತ್ತು ಇಬ್ಬರು ಗನ್ ಮ್ಯಾನ್ ಸೇರಿ ಮೂವರಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.

   ಅಯೋಧ್ಯೆಯಲ್ಲಿ ಚೀನಾ ಹೆಸರು ಹೇಳಿದ ಮೋದಿ | Oneindia Kannada

   ರಾಜ್ಯದ ಅಬಕಾರಿ ಸಚಿವ ಎಚ್.ನಾಗೇಶ್ ಅವರ ಮೂವರು ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವಿಕಾಸಸೌಧದಲ್ಲಿ ಇರುವ ಅಬಕಾರಿ ಸಚಿವರ ಕೊಠಡಿಯನ್ನು ಸೀಲ್ ಡೌನ್ ಮಾಡಲಾಗಿದೆ.

   ಸಿಹಿಸುದ್ದಿ: 35 ರೂಪಾಯಿಗೆ ಕೊರೊನಾವೈರಸ್ ಸೋಂಕಿತರಿಗೆ ಔಷಧಿ!ಸಿಹಿಸುದ್ದಿ: 35 ರೂಪಾಯಿಗೆ ಕೊರೊನಾವೈರಸ್ ಸೋಂಕಿತರಿಗೆ ಔಷಧಿ!

   ಆಪ್ತ ಸಹಾಯಕ ಸೇರಿದಂತೆ ಇಬ್ಬರು ಗನ್ ಮ್ಯಾನ್ ಗಳ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಹಿನ್ನೆಲೆ ಸಚಿವರಿಗೂ ಸೋಂಕು ತಗಲಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಚಿವ ಎಚ್.ನಾಗೇಶ್ ಅವರು ಗೃಹ ದಿಗ್ಬಂಧನದಲ್ಲಿದ್ದಾರೆ.

   ಜನಪ್ರತಿನಿಧಿಗಳಿಗೆ ಕೊರೊನಾವೈರಸ್ ಆತಂಕ:

   ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊರೊನಾವೈರಸ್ ಸೋಂಕು ತಗಲಿರುವ ಹಿನ್ನೆಲೆ ಇಬ್ಬರು ನಾಯಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ನಾಯಕರ ಜೊತೆಗೆ ಸಂಪರ್ಕ ಹೊಂದಿರುವ ಸಚಿವರು ಮತ್ತು ಸಿಬ್ಬಂದಿ ಸಹ ಹೋಮ್ ಕ್ವಾರೆಂಟೈನ್ ನಲ್ಲಿದ್ದಾರೆ.

   English summary
   Karnataka Excise Minister H Nagesh Personal Assistant And Two-Gun Mans Tested Coronavirus Positive, Office Sealed Down In Vikas Soudha.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X