ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್
Recommended Video

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ | Oneindia Kannada
ಬೆಂಗಳೂರು, ಮೇ 14: ಬೆಂಗಳೂರಿನ ಹಲವು ರಸ್ತೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಭಾರೀ ಟ್ರಾಫಿಕ್ ಜಾಮ್ ಕಂಡುಬರುತ್ತಿದೆ.
ಮೇ 12 ರಂದು ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನನ ಮಾಡಲೆಂದು ಊರಿಗೆ ತೆರಳಿದ್ದವರೆಲ್ಲ ವಾಪಸ್ ಉದ್ಯಾನನಗರಿಯತ್ತ ಮುಖ ಮಾಡಿರುವುದರಿಂದ ಬೆಂಗಳೂರಿನ ರಸ್ತೆಗಳು ಸಿಕ್ಕಾಬಟ್ಟೆ ಟ್ರಾಫಿಕ್ ಜಾಮ್ ನಿಂದ ಕಂಗೆಟ್ಟಿವೆ.
ಮೆಜೆಸ್ಟಿಕ್, ಮೈಸೂರು ರಸ್ತೆ, ತುಮಕೂರು ರಸ್ತೆಗಳಲ್ಲಿ ವಾಹನಗಳು ಹನುಮಂತದ ಬಾಲದಂತೇ ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ತಾಪತ್ರಯ ಅನುಭವಿಸುವಂತಾಗಿದೆ. ಮತದಾನದ ನಿಮಿತ್ತ ಹೆಚ್ಚುವರಿ ಬಸ್ ಗಳನ್ನೂ ಬಿಟ್ಟಿದ್ದರಿಂದ ಮತ್ತಷ್ಟು ಜಾಮ್ ಆಗಿದೆ. ವಾರಾಂತ್ಯವಾಗಿದ್ದರಿಂದ ಸಾಕಷ್ಟು ಜನ ಊರಿಗೆ ತೆರಳಿ ಮತದಾನ ಮಾಡಿದ್ದಾರೆ. ಬೆಂಗಳೂರಿಗೆ ಹೋಲಿಸಿದರೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಹೆಚ್ಚಿನ ಮತದಾನವಾಗಿದೆ. ರಾಜ್ಯದಾದ್ಯಂತ ಒಟ್ಟು 71 ಪ್ರತಿಶತ ಮತದಾನವಾಗಿದೆ.

ಮೇ 15, ಮಂಗಳವಾರದಂದು ಚುನಾವಣೆಯ ಫಲಿತಾಂಶ ಹೊರಬೀಳಲಿದೆ.












Click it and Unblock the Notifications