ನಕಲಿ ವೋಟರ್ ಐಡಿ ಪ್ರಕರಣ: ಸಮಗ್ರ ವರದಿ ಕೇಳಿದ ECI

ಬೆಂಗಳೂರು, ಮೇ 10: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಜಾಲಹಳ್ಳಿಯ ಫ್ಲ್ಯಾಟ್ ವೊಂದರಲ್ಲಿ ಸಿಕ್ಕ 9 ಸಾವಿರಕ್ಕೂ ಹೆಚ್ಚು ನಕಲಿ ವೋಟರ್ ಐಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ನೀಡಲು ಭಾರತ ಚುನಾವಣಾ ಆಯೋಗ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಆದೇಶಿಸಿದೆ.

ಚುನಾವಣಾ ಆಯೋಗ ಈಗಾಗಲೇ ನೇಮಿಸಿದ್ದ ವೀಕ್ಷಕರು ಈ ಕುರಿತು ನೀಡಿದ ವರದಿ ಸಮಾಧಾನ ತಂದಿಲ್ಲದ ಕಾರಣ ಮತ್ತೊಂದು ಸಮಗ್ರ ವರದಿ ನೀಡುವಂತೆ ಇಸಿಐ ಆದೇಶಿಸಿದೆ. ಈ ಸಂಬಂಧ ಭಾರತೀಯ ಚುನಾವಣಾ ಆಯೋಗ ವೀಕ್ಷಕರನ್ನು ಕಳಿಸಲಿದ್ದು, ಪ್ರಕರಣವನ್ನು ಪರಿಶೀಲಿಸಿ, ಅವರು ಸಮಗ್ರ ವರದಿ ನೀಡಲಿದ್ದಾರೆ.

Karnataka Elections: ECI asks comprehensive report in RR Nagar fake voter id case

ಮೇ 08 ರಂದು ಸಂಜೆ ರಾಜರಾಜೇಶ್ವರಿ ನಗರದ ಜಾಲಹಳ್ಳಿ ವ್ಯಾಪ್ತಿಯ ಎಸ್ಎಲ್ ವಿ ಪಾರ್ಕ್ ವ್ಯೂ ಅಪಾರ್ಟ್ಮೆಂಟ್ ನಲ್ಲಿ 9746 ನಕಲಿ ವೋಟರ್ ಐಡಿ ಪತ್ತೆಯಾಗಿತ್ತು. ಈ ವೋಟರ್ ಐಡಿಗಳು ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ಅವರಿಗೆ ಸಂಬಂಧಿಸಿದ್ದು, ಅವರು ಅಕ್ರಮ ಎಸಗುತ್ತಿದ್ದಾರೆಂದು ಬಿಜೆಪಿ ದೂರಿತ್ತು.

ಆದರೆ ಈ ಫ್ಲ್ಯಾಟ್ ಬಿಜೆಪಿಯ ಮಾಜಿ ಕಾರ್ಪೋರೇಟರ್ ಮಂಜುಳಾ ಎಂಬುವವರಿಗೆ ಸೇರಿದ್ದು, ಬಿಜೆಪಿಯವರೇ ಅಕ್ರಮ ಎಸಗುತ್ತಿದ್ದಾರೆಂದು ಕಾಂಗ್ರೆಸ್ ದೂರಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+