ಕರ್ನಾಟಕ ಚುನಾವಣೆ: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಲಿಂಗಾಯತರಿಗೆ ಹೆಚ್ಚು ಟಿಕೆಟ್, ಬಿಜೆಪಿಗೆ ಆತಂಕ

ಬೆಂಗಳೂರು, ಮಾರ್ಚ್. 28: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಇದರಲ್ಲಿ ಸಮುದಾಯಗಳ ಪಟ್ಟಿ ನೋಡುವುದಾದರೇ ಲಿಂಗಾಯಿತ ಸಮುದಾಯಕ್ಕೆ ಹೆಚ್ಚಿನ ಟಿಕೆಟ್ ನೀಡಲಾಗಿದೆ. ಇದು ಭಾರತೀಯ ಜನತಾ ಪಕ್ಷದಲ್ಲಿ ಸಣ್ಣ ಆತಂಕಕ್ಕೂ ಕಾರಣವಾಗಿದೆ.

ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು 124 ಮಂದಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಇದರ ಜೊತೆಗೆ ಈ ವಾರದಲ್ಲಿಯೇ ಎರಡನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇನ್ನು, ಆಮ್ ಆದ್ಮಿ ಪಕ್ಷವು (ಎಎಪಿ) ಚುನಾವಣೆಗೆ 80 ಮಂದಿಯನ್ನು ಕಣಕ್ಕಿಳಿಸಿದ್ದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಕಾಂಗ್ರೆಸ್‌ನ ಪಟ್ಟಿಯು ಲಿಂಗಾಯತ ಸಮುದಾಯದಿಂದ ಕನಿಷ್ಠ 28 ಅಭ್ಯರ್ಥಿಗಳನ್ನು ಒಳಗೊಂಡಿದೆ, ಕರ್ನಾಟಕ ರಾಜಕೀಯದಲ್ಲಿ ಗಣನೀಯ ಪ್ರಮಾಣದ ಹಿಡಿತವನ್ನು ಹೊಂದಿರುವ ಸಂಖ್ಯಾತ್ಮಕವಾಗಿ ಪ್ರಬಲವಾದ ಸಮುದಾಯ ಇದಾಗಿದೆ. ಇದರ ನಂತರ ಎರಡನೇ ಸ್ಥಾನದಲ್ಲಿ ಪರಿಷಿಷ್ಠ ಜಾತಿ ಮತ್ತು ಮೂರನೇ ಸ್ಥಾನದಲ್ಲಿ ಒಕ್ಕಲಿಗ ಸಮುದಾಯವಿದೆ.

bommai and bsy

ಪಕ್ಷದ ಪಟ್ಟಿಯಲ್ಲಿ ಏಳು ಪಂಚಮಶಾಲಿ ಲಿಂಗಾಯತ ಅಭ್ಯರ್ಥಿಗಳು, ಐವರು ರೆಡ್ಡಿ ಲಿಂಗಾಯತ ಸದಸ್ಯರು, ಮೂರು ಸದರ ಲಿಂಗಾಯತರು, ಮೂರು ವೀರಶೈವ ಲಿಂಗಾಯತರು, ನಾಲ್ಕು ಲಿಂಗಾಯತರು (ಇತರರು), ಮೂರು ಬಂಜಿಗ ಲಿಂಗಾಯತರು, ಎರಡು ಗಾಣಿಗ ಲಿಂಗಾಯತರು ಮತ್ತು 22 ಒಕ್ಕಲಿಗ ಅಭ್ಯರ್ಥಿಗಳಲ್ಲದೆ ನೊಣಬ ಲಿಂಗಾಯತರು ಇದ್ದಾರೆ.

ವಿಜಯನಗರದಿಂದ ಎಂ ಕೃಷ್ಣಪ್ಪ ಮತ್ತು ಗೋವಿಂದರಾಜನಗರದಿಂದ ಪ್ರಿಯಾಕೃಷ್ಣ, ಬಿಟಿಎಂ ಲೇಔಟ್‌ನಿಂದ ರಾಮಲಿಂಗಾ ರೆಡ್ಡಿ ಮತ್ತು ಜಯನಗರದ ಸೌಮ್ಯಾ ರೆಡ್ಡಿ, ದಾವಣಗೆರೆ (ದಕ್ಷಿಣ) ಮತ್ತು ಮಲ್ಲಿಕಾರ್ಜುನ್ (ದಾವಣಗೆರೆ-ಉತ್ತರ), ದೇವನಹಳ್ಳಿಯಿಂದ ಕೆ.ಎಚ್.ಮುನಿಯಪ್ಪ ಮತ್ತು ಕೆಜಿಎಫ್‌ನ ರೂಪ ಸೇರಿದಂತೆ ಹಲವರು ಕಣದಲ್ಲಿದ್ದಾರೆ.

*ಚುನಾವಣೆಗೆ ಲಿಂಗಾಯತರು ಏಕೆ ಪ್ರಮುಖರು..?*

ಲಿಂಗಾಯತರು ಮತ್ತು ವೀರಶೈವರು ಒಟ್ಟಾಗಿ ಕರ್ನಾಟಕದ ಜನಸಂಖ್ಯೆಯ ಶೇಕಡಾ 17 ರಷ್ಟಿದ್ದಾರೆ. ಸಾಂಪ್ರದಾಯಿಕವಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ಹಾಕುತ್ತಾರೆ ಎಂದು ಪರಿಗಣಿಸಲಾಗಿದೆ. ಹೆಚ್ಚಿನ ಲಿಂಗಾಯತ ಅಭ್ಯರ್ಥಿಗಳನ್ನು ಸೇರಿಸುವ ಮೂಲಕ, 224 ಸದಸ್ಯ ಬಲದ ವಿಧಾನಸಭೆಯಲ್ಲಿ ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಸಾಧಿಸಲು ಕಾಂಗ್ರೆಸ್ ಬಯಸಿದೆ.

dks and siddu

ಲಿಂಗಾಯತರು/ವೀರಶೈವರು 224 ಅಸೆಂಬ್ಲಿ ಸ್ಥಾನಗಳಲ್ಲಿ ಸುಮಾರು 100 ರಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಹೆಚ್ಚಾಗಿ ಉತ್ತರ ಕರ್ನಾಟಕದವರು. ಕರ್ನಾಟಕವು ಈವರೆಗೆ ಒಂಬತ್ತು ಲಿಂಗಾಯತರು ಸಮುದಾಯದ ಮುಖ್ಯಮಂತ್ರಿಗಳನ್ನು ಪಡೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ 2018ರಲ್ಲಿ ಘೋಷಿಸಿದ್ದರು.

ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ಬಾದಾಮಿಯನ್ನು ಪ್ರತಿನಿಧಿಸುತ್ತಿರುವ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವುದಾಗಿ ಈ ಹಿಂದೆ ಘೋಷಿಸಿದ್ದರು, ಆದರೆ ಅಲ್ಲಿಂದ ಆಂತರಿಕೆ ಸಮೀಕ್ಷೆ ಬೇರೆ ರೀತಿಯ ಅಪಾಯಗಳ ಬಗ್ಗೆ ಪಕ್ಷದ ನಾಯಕತ್ವ ಎಚ್ಚರಿಕೆ ನೀಡಿದ ನಂತರ ಹಿಂದೆ ಸರಿದಿದ್ದಾರೆ. 2018ರಲ್ಲಿ ತಮ್ಮ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರಕ್ಕೆ ಮರಳಿದ್ದಾರೆ.

*ಬಿಜೆಪಿಯ ಆರಂಭಿಕ ಹೊಡೆತ*

ಭಾರತೀಯ ಜನತಾ ಪಕ್ಷ (ಬಿಜೆಪಿ) ಈಗಾಗಲೇ ಮುಸ್ಲಿಮರಿಗೆ 4 ಪ್ರತಿಶತ ಒಬಿಸಿ ಮೀಸಲಾತಿಯನ್ನು ರದ್ದುಗೊಳಿಸಲು ನಿರ್ಧರಿಸುವ ಮೂಲಕ ಲಿಂಗಾಯತ ಮತದಾರರನ್ನು ಓಲೈಸಲು ಪ್ರಾರಂಭಿಸಿದೆ. ಮುಸ್ಲಿಮರಿಗೆ ರದ್ದು ಮಾಡಿರುವ ಮೀಸಲಾತಿಯಲ್ಲಿ ಎರಡು ಪರ್ಸೆಂಟ್ ಮೀಸಲಾತಿಯನ್ನು ಲಿಂಗಾಯತರಿಗೆ ಮತ್ತೆರಡು ಪರ್ಸೆಂಟ್ ಅನ್ನು ಒಕ್ಕಲಿಗರಿಗೆ ನೀಡುವುದಾಗಿ ತಿಳಿಸಿದೆ.

ಆದರೆ, ಒಕ್ಕಲಿಗರಿಂದ ಗಮನಾರ್ಹವಾದ ಚುನಾವಣಾ ಲಾಭವನ್ನು ನಿರೀಕ್ಷಿಸದಿದ್ದರೂ, ಪಂಚಮಸಾಲಿಗಳಿಗೆ ಮೀಸಲಾತಿ ನೀಡಿರುವುದು ಉತ್ತರ ಕರ್ನಾಟಕದಲ್ಲಿ ಲಿಂಗಾಯತರಿಗೆ ಸಂಬಂಧಿಸಿದಂತೆ ತನ್ನ ಸ್ಥಾನವನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ ಎಂದು ಬಿಜೆಪಿ ವಿಶ್ವಾಸ ಹೊಂದಿದೆ. ಪಂಚಮಸಾಲಿಗಳಿಗೆ ಮೀಸಲಾತಿ ಹೆಚ್ಚು ಗೊಳಿಸಿರುವುದು ಕೂಡ ಅಲ್ಲಿ ಇದ್ದ ಆಡಳಿತ ವಿರೋಧಿ ಆತಂಕದಿಂದಲೇ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+