ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ನಾರಾಯಣಮೂರ್ತಿ-ಸುಧಾಮೂರ್ತಿ ದಂಪತಿ
ಇಂದು (ಬುಧವಾರ, ಮೇ 10) ಕರ್ನಾಟಕದ ಎಲ್ಲ 224 ಕ್ಷೇತ್ರಗಳಲ್ಲಿ 2023ರ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ರಾಜ್ಯದ ಮತದಾರರು ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇನ್ಫೋಸಿಸ್‌ನ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ಇಂದು ಬೆಂಗಳೂರಿನಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಬೆಂಗಳೂರಿನ ಜಯನಗರದ ಬೂತ್‌ನಲ್ಲಿ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ದಂಪತಿ ಮತದಾನ ಮಾಡಿದರು. ಈ ವೇಳೆ ಸುಧಾಮೂರ್ತಿ ಅವರು ಮತದಾನಕ್ಕೆ ಬಂದಿದ್ದ ಜನರ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಸುಧಾಮೂರ್ತಿ ಅವರ ಜೊತೆಗೆ ಜನರು ಸೆಲ್ಫಿಗೆ ಮುಗಿಬಿದ್ದ ದೃಶ್ಯವೂ ಕಂಡುಬಂತು.
ಮತ ಚಲಾಯಿಸಿದ ಬಳಿಕ ಮಾತನಾಡಿದ ಲೇಖಕಿ ಮತ್ತು ಶಿಕ್ಷಣತಜ್ಞೆ ಸುಧಾಮೂರ್ತಿ, "ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತರಬೇಕಾದರೆ, ಮನಸ್ಸಿನಲ್ಲಿ ಏನಾದರೂ ಯೋಜನೆಗಳಿದ್ದರೆ, ಅದಕ್ಕೆ ತಕ್ಕಂತ ನಾಯಕರನ್ನು ಆರಿಸಿ. ನೀವು ಯಾರಿಗೆ ಮತ ಚಲಾಯಿಸುತ್ತಿರೋ ಅದು ಯಾರಿಗೂ ಬೇಡದ ವಿಷಯ. ಆದರೆ ಮತ ಚಲಾಯಿಸುವುದು ನಿಮ್ಮ ಹಕ್ಕು. ಅದನ್ನು ಚಲಾಯಿಸಿ. ಯುವ ಜನತೆ ಸೇರಿದಂತೆ, ಎಲ್ಲರೂ ಮತದಾನ ಮಾಡಲೇಬೇಕು. ಯಾರಿಗೆ ದೇಶ ಭಕ್ತಿ ಇಲ್ಲವೂ ಅಂತವರು ಮತದಾನ ಮಾಡಲ್ಲ," ಎಂದರು.
ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಇಂದು ಬೆಳಿಗ್ಗೆಯಿಂದಲೇ ಬಿರುಸಿನಿಂದ ನಡೆಯುತ್ತಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ಆರಂಭವಾಗಿದ್ದು, ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. 224 ಕ್ಷೇತ್ರ, 2,615 ಅಭ್ಯರ್ಥಿಗಳ ಹಣೆ ಬರಹವನ್ನು ರಾಜ್ಯದ 5,31,33,054 ಮತದಾರರು ನಿರ್ಧರಿಸಲಿದ್ದಾರೆ.
ಸುಧಾಮೂರ್ತಿ ಅವರ ಸ್ಪೂರ್ತಿದಾಯಕ ಮಾತು
— oneindiakannada (@OneindiaKannada) May 10, 2023
ಹೆಚ್ಚಿನ ಮಾಹಿತಿಗಾಗಿ...👇https://t.co/lGxeuzu4Nv #KarnatakaAssemblyElection2023 #KarnatakaElections #KarnatakaElection2023 #Election2023 #KarnatakaElectionsWithOi pic.twitter.com/DLLR3749IQ












Click it and Unblock the Notifications