ರಾಜ್ಯ ಚುನಾವಣೆ V/s ಟಿವಿ ಚುನಾವಣೆ: ಮನೆಯವರ ಮತ ಕಳೆದುಕೊಂಡ ತೀರ್ಥಂಕರ್ ಎಂಎಲ್‌ಎ ಆಗುತ್ತಾರಾ?
ಬೆಂಗಳೂರು, ಏಪ್ರಿಲ್. 03: ಮತದಾನ ನಡೆಯುವ ಕೇಂದ್ರದ ಬಳಿ ಕುಳಿತು ತನ್ನವರಿಗಾಗಿ ಕಾಯುತ್ತಾ ಕುಳಿತಿದ್ದ ಅಭ್ಯರ್ಥಿ. ಆದರೆ, ಮನೆಯವರು ನಾಪತ್ತೆ. ಅತ್ತ, ಹಾಸಿಗೆ ಹಿಡಿದ ಗಂಡನ ಗೆಲುವಿಗಾಗಿ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದ ಹೆಂಡತಿ ಕೂಡ ನಾಪತ್ತೆಯಾಗಿದ್ದಾರೆ....ಇಂತಹ ಕಷ್ಟದಲ್ಲೂ ಶಾಸಕನಾಗಿರುವ ಹಂಬಲದಲ್ಲಿದ್ದ ಅಭ್ಯರ್ಥಿಗೆ ದೊರೆಯುವುದು ಹೆಂಡತಿ ಮತ್ತು ತಮ್ಮನ ಮತಗಳು ಮಾತ್ರ.... ಮನೆಯ ಸದಸ್ಯರೇ ಆತ ಸೋಲು ಕಾಣಲಿ ಎಂದು ಷಡ್ಯಂತ್ರ ಹೂಡುತ್ತಿರುವಾಗ ಶಾಸಕನಾಗುತ್ತಾನಾ ಈ ರಾಜಕೀಯ ನಾಯಕ...?
ಅರೇ..ಇದ್ಯಾವುದೋ ವಿಧಾನಸಭಾ ಕ್ಷೇತ್ರದ ಕಥೆ ತರಹವೇ ಅನ್ನಿಸುತ್ತಿದೆಯಾ...? ಖಂಡಿತ ಇದು ರಿಯಲ್ ಸ್ಟೋರಿಯಲ್ಲ.. ಇದು ರೀಲ್ ಸ್ಟೋರಿ. ಹೌದು, ರಾಜ್ಯದಲ್ಲಿ ಸದ್ಯ ಜನರ ಕಣ್ಣು, ಕಿವಿಗಳಿಗೆ ಕಾಣಿಸೋದು, ಕೇಳಿಸೋದು ಎಲೆಕ್ಷನ್ ಅನ್ನೋದು ಮಾತ್ರವೇ. ಹಾಗಂತ ಇದಕ್ಕೆ ಟಿವಿ ಕೂಡ ಹೊರತಾಗಿಲ್ಲ. ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಾಗುತ್ತಿರುವಂತೆಯೇ ಧಾರವಾಹಿಗಳು ಕೂಡ ಜನರನ್ನು ತಮ್ಮತ್ತ ಜನರನ್ನು ಸೆಳೆದುಕೊಳ್ಳಲು ಹಲವು ಕಸರತ್ತುಗಳನ್ನು ನಡೆಸುತ್ತಿವೆ.

ಚುನಾವಣಾ ಸಮಯದಲ್ಲಿ ಜನರು ಸುದ್ದಿ ಮಾಧ್ಯಮಗಳ ಮೊರೆ ಹೋಗುವುದು ಸಾಮಾನ್ಯ ಬೇರೆ ಕಾರ್ಯಕ್ರಮ ನೋಡುವುದು ಕಡಿಮೆಯಾಗುತ್ತದ. ಅದಕ್ಕೆ ಧಾರವಾಹಿ ಕೂಡ ಹೊರತಾಗಿಲ್ಲ. ಹೀಗಾಗಿಯೇ, ಈ ಸಮಯದಲ್ಲಿಯೂ ಜನರನ್ನು ತಮ್ಮ ಧಾರವಾಹಿಗಳತ್ತ ಆಕರ್ಷಿಸಲು ಟಿವಿಯಲ್ಲಿಯೂ ರಾಜಕೀಯವನ್ನು ತರಲಾಗಿದೆ. ಅದೇ, ರಾಜಕೀಯವನ್ನೇ ಪ್ರಮುಖವಾಗಿರಿಸಿಕೊಂಡ ಕೆಂಡಸಂಪಿಗೆ ಧಾರಾವಾಹಿ.
ಶಾಸಕನಾಗುವ ಹಂಬಲದಲ್ಲಿರುವ ನಾಯಕ ಮತಗಳಿಗಾಗಿ ಏನೇನು ಮಾಡಬಲ್ಲ ಎಂಬುದು, ಆತನನ್ನು ಸೋಲಿಸಲು ವಿರೋಧ ಪಕ್ಷಗಳು ಮಾಡುವ ಕಸರತ್ತು ಎಲ್ಲವನ್ನೂ ಅಚ್ಚುಕಟ್ಟಾಗಿ ಈ ಧಾರಾವಾಹಿಯಲ್ಲಿ ತೋರಿಸಲಾಗುತ್ತಿದೆ. ರಾಜಕೀಯದಲ್ಲಿ ಸಾಧನೆ ಮಾಡಬೇಕು ಎಂದು ಕೊಂಡಿರುವ ಶ್ರೀಮಂತ ಮನೆತನದ ನಾಯಕ ತೀರ್ಥಂಕರ್, ಮತಗಳಿಗಾಗಿ, ಜನರ ಮನಸನ್ನು ಗೆಲ್ಲಲ್ಲು ಹೂ ಮಾರುವ ಹುಡುಗಿಯನ್ನು ಮದುವೆಯಾಗುತ್ತಾನೆ. ಈ ಮೂಲಕ ಆ ಪ್ರದೇಶದ ಮತಗಳನ್ನು ಸೆಳೆಯುವ ತಂತ್ರ ಆತನದ್ದು.

ಇನ್ನು, ಹೂ ಮಾರುವ ಹುಡುಗಿ ಸುಮನಾಗೆ ತೀರ್ಥಂಕರ್ ಮೇಲೆ ಅಪಾರ ಅಭಿಮಾನ. ಆತನ ನಿಜರೂಪ ಗೊತ್ತಿಲ್ಲದೆ ಆತನನ್ನು ನಂಬುವ ಯುವತಿ. ಇನ್ನು ತೀರ್ಥಂಕರ್ ಮನೆಯವರಿಗೆ ಆಕೆಯ ಬಗ್ಗೆ ಅಸಮಾಧಾನ. ಆಕೆಯನ್ನು ಮನೆಯಿಂದ ಹೊರ ಹಾಕಲು ಮಗನ ಕನಸು ಹಾಳಾದರು ಪರವಾಗಿಲ್ಲ ಎನ್ನುವಂತಹವರು. ಹೀಗಾಗಿಯೇ ಮಗನನ್ನು ಸೋಲಿಸಲು ಆತನ ಪ್ರತಿಸ್ವರ್ಧಿಗೆ ಬೆಂಬಲ ನೀಡುತ್ತಾರೆ.
ಇತ್ತ, ತೀರ್ಥಂಕರ್ ಚುನಾವಣೆಯಲ್ಲಿ ಗೆಲ್ಲಬಾರದು ಎಂದು ಆತನ ವಿರೋಧಿಗಳು ಸುಮನಾ ವಿಷಯವನ್ನು ಮುಂದಿಟ್ಟುಕೊಂಡು ತೀರ್ಥಂಕರ್ ವೈಯಕ್ತಿಕ ಜೀವನದ ಜೊತೆಗೆ ಆಟವಾಡುತ್ತಾರೆ. ಇದು ಪ್ರಸ್ತುತ ನಡೆಯುವ ಎಲ್ಲಾ ಚುನಾವಣೆಗಳಲ್ಲು ನಡೆಯುತ್ತದೆ. ರಾಜಕೀಯ ನಾಯಕರ ಕೆಲಸಗಳ ಬಗ್ಗೆ ಮಾತನಾಡುವುದು ಬಿಟ್ಟು, ಅವರ ವೈಯಕ್ತಿಕ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಿ ಅವರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತದೆ.
ಇದನ್ನೇ ಈ ಕೆಂಡಸಂಪಿಗೆ ಧಾರವಾಹಿ ಕೂಡ ಬಳಸಿಕೊಂಡಿದೆ. ತೀರ್ಥಂಕರ್ ವಿರುದ್ಧ ಹಲವು ಕಸರತ್ತು ನಡೆಸುತ್ತಿರುವ ವಿರೋಧ ಪಕ್ಷಗಳು ಆತನಿಗೆ ಎದ್ದು ನಿಲ್ಲಲು ಆಗದ ಸ್ಥಿತಿಗೆ ತರುತ್ತಾರೆ. ಆದರೂ, ಗಂಡನಿಗಾಗಿ ಸುಮನಾ ಚುನಾವಣಾ ಪ್ರಚಾರಕ್ಕೆ ಇಳಿಯುತ್ತಾರೆ. ಆತನಿಗೆ ಅಂಟಿದ ಕಳಂಕ ತೊಡೆದು ಹಾಕುತ್ತಾಳೆ. ಮತದಾನದ ದಿನ ಆಕೆಗೆ ಮತ ಚಲಾಯಿಸಲು ಆಗದ ಸ್ಥಿತಿಗೆ ಮನೆಯವರೇ ತಮದರೂ ಕೂಡ, ಹೇಗೋ ಕಷ್ಟಪಟ್ಟು ಮತ ಚಲಾಯಿಸಿದ್ದಾರೆ. ಹಾಗಾದರೇ ಈ ರೀಲ್ ಚುನಾವಣೆಯಲ್ಲಿ ತೀರ್ಥಂಕರ್ ಗೆದ್ದು, ಶಾಸಕ ಆಗುತ್ತಾರಾ...? ಗೊತ್ತಿಲ್ಲ.
ಆದರೆ, ಪ್ರಸ್ತುತ ಸ್ಥಿತಿಯಲ್ಲಿ ಧಾರಾವಾಹಿಗಳು ಕೂಡ ಚುನಾವಣೆಯನ್ನು ರಾಜಕೀಯ ವಿಷಯವನ್ನಾಗಿಟ್ಟುಕೊಂಡು ಜನರನ್ನು ಸೆಳೆಯುವ ಪ್ರಯತ್ನವನ್ನಂತು ನಾವು ಮೆಚ್ಚಲೇಬೇಕು. ಚುನಾವಣೆ ಎಂಬುದು ಕೇವಲ ಸುದ್ದಿ ಮಾಧ್ಯಮಗಳಿಗೆ ಮಾತ್ರವಲ್ಲ ಟಿವಿ ಧಾರಾವಾಹಿಗಳಿಗೂ ಬಂಡವಾಳವಾಗುತ್ತವೆ ಎಂಬುದು ನಮ್ಮ ಅಭಿಪ್ರಾಯ...ಹಾಗಾದರೇ ನಿಮ್ಮ ಅಭಿಪ್ರಾಯ..?
-
ಕನ್ನಡಿಗರಿಗಿಂತ ಕೇರಳದವರೇ ಅದೃಷ್ಟವಂತರು: ವಯನಾಡಿಗೆ ಸಿದ್ದರಾಮಯ್ಯರಿಂದ 10 ಕೊಟಿ ರೂ ಅನುದಾನ: ಆಕ್ರೋಶ -
"ಕಾಂಗ್ರೆಸ್ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿ ಪಾಲು'' -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications