'ಸಂವಿಧಾನದ ದೇಗುಲ ವಿಧಾನಸೌಧವನ್ನು ಬಿಜೆಪಿ ಹಾಳು ಮಾಡುತ್ತಿದೆ '

ಬೆಂಗಳೂರು, ಜುಲೈ 09: ಭಾರತೀಯ ಜನತಾ ಪಕ್ಷವು ಪವಿತ್ರ ದೇಗುಲಗಳನ್ನು ಹಾಳು ಮಾಡಿದೆ. ಇದೀಗ ವಿಧಾನಸೌಧ ಎನ್ನುವ ಸಂವಿಧಾನದ ದೇವಾಲಯವನ್ನು ಹಾಳು ಮಾಡಲು ಹೊರಟಿದೆ ಎಂದು ಮಾಜಿ ಸಚಿವ ಎಚ್ ಕೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿಂದು ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

Karnataka Crisis : BJP has defamed temple of Constitution says HK Patil

ದೇಶದ ಹಲವು ಪವಿತ್ರ ದೇವಾಲಯಗಳನ್ನು ಹಾಳು ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲಬೇಕು. ಇದೀಗ ಶಾಸಕರನ್ನು ರಾಜೀನಾಮೆ ಕೊಡಿಸುವ ಮೂಲಕ ವಿಧಾನಸೌಧ ಎಂಬ ಸಂವಿಧಾನದ ದೇಗುಲವನ್ನು ಕೂಡಾ ಬಿಜೆಪಿ ಹಾಳು ಮಾಡಲು ಹೊರಟಿದೆ.

ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು, ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮುಂದುವರೆಯಲಿದೆ ಎಂದರು.

ನಮ್ಮ ಮೈತ್ರಿ ಸರಕಾರಕ್ಕೆ ಸಂಖ್ಯಾಬಲ ಇದೆ. ಅಲ್ಪಮತಕ್ಕೆ ಕುಸಿದಿಲ್ಲ. ನಂಬರ್ ಆಧಾರದಲ್ಲೇ ಸರಕಾರ ಉಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯಾವುದೇ ರೀತಿಯ ಕಾನೂನು ಹೋರಾಟಕ್ಕೂ ಸಿದ್ದರಿದ್ದೇವೆ, ಬಿಜೆಪಿ ಅಧಿಕಾರ ಬರದಂತೆ ತಡೆಯುವುದು ನಮ್ಮ ಉದ್ದೇಶ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+