Breaking; ಮಸಾಲೆ ದೋಸೆ ಮುರಿದ ತೇಜಸ್ವಿ ಸೂರ್ಯ, ಕಾಂಗ್ರೆಸ್ ಗರಂ!

ಬೆಂಗಳೂರು, ಸೆಪ್ಟೆಂಬರ್ 06: ಉದ್ಯಾನ ನಗರಿ ಬೆಂಗಳೂರು ನೈಋತ್ಯ ಮುಂಗಾರು ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ನಗರದ ಹಲವು ಪ್ರದೇಶಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಟ ನಡೆಸುತ್ತಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪದ್ಮನಾಭನಗರದ ಹೋಟೆಲ್‌ನಲ್ಲಿ ಮಸಾಲೆ ದೋಸೆ ತಿನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸೋಮವಾರ ಇತ್ತ ಜನರು ಪರದಾಟ ನಡೆಸುತ್ತಿದ್ದಾರೆ. ಅತ್ತ ಸಂಸದರು ದೋಸೆ ತಿನ್ನುವುದರಲ್ಲಿ ಬ್ಯುಸಿ ಇದ್ದರು.

ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದೆ. 'ಮತಿ 'ದೋಷ' ಇರುವವರನ್ನು ಆಯ್ಕೆ ಮಾಡಿದರೆ, ಜನ ಮುಳುಗುವಾಗ 'ದೋಸೆ' ತಿನ್ನಲು ಹೋಗುತ್ತಾರೆ!' ಎಂದು ವಾಗ್ದಾಳಿ ನಡೆಸಿದೆ.

Karnataka Congress Tweet Against MP Tejasvi Surya

'ಬೆಂಗಳೂರು ಮುಳುಗಿದೆ, ಜನತೆ ಪರದಾಡುತ್ತಿದ್ದಾರೆ, ಆದರೆ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಅವರು ದೋಸೆ ತಿನ್ನುವ ಟೆಂಪ್ಟ್ ಆಗಿದ್ಯಂತೆ!' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ವಿಡಿಯೋದಲ್ಲಿ ಏನಿದೆ?; ಸಂಸದ ತೇಜಸ್ವಿ ಸೂರ್ಯ, "ಈಗ ನಾನು ಪದ್ಮನಾಭನಗರದ ಹೋಟೆಲ್‌ಗೆ ಬಂದಿದ್ದೇನೆ. ಇನ್‌ಸ್ಟಾಗ್ರಾಮ್‌ನಲ್ಲಿ ದೋಸೆಯ ಫೋಟೋ ನೋಡಿ ಟೆಂಪ್ಟ್‌ ಆಗಿ ಇಲ್ಲಿಗೆ ಬಂದಿದ್ದೇನೆ" ಎಂದು ಹೇಳಿದ್ದಾರೆ.

"ಬೆಣ್ಣೆ ಮಸಾಲೆ ತುಂಬಾ ಚೆನ್ನಾಗಿದೆ. ನೀವು ಬನ್ನಿ, ಅದನ್ನು ತಿಂದಾಗಲೇ ಆಸ್ವಾದನೆ ಗೊತ್ತಾಗುವುದು. ಉಪ್ಪಿಟ್ಟು ಸಹ ಬಹಳ ಚೆನ್ನಾಗಿದೆ" ಎಂದು ವಿಡಿಯೋದಲ್ಲಿ ಹೇಳಿದ್ದು, ವಿಡಿಯೋ ವೈರಲ್ ಆಗಿದೆ.

ಎಎಪಿ ಆಕ್ರೋಶ; ಮತ್ತೊಂದು ಕಡೆ ಆಮ್ ಆದ್ಮಿ ಪಕ್ಷ ಕರ್ನಾಟಕ ಸಹ ಸಂಸದರ ದೋಸೆ ಪೋಸ್ಟ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದು, 'ಪೂರ್ಣಚಂದ್ರ ತೇಜಸ್ವಿ ಅವರು ಹಿಂದೆಯೇ ಹೇಳಿದ್ದಾರೆ ಪುಂಡ ಪೋಕರಿಗಳಿಗೆ ವೋಟ್ ಹಾಕಬೇಡಿ' ಎಂದು ಹೇಳಿದೆ.

'ಬೇಜವಾಬ್ದಾರಿ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಇಡೀ ನಗರದ ಪ್ರವಾಹದಿಂದ ತತ್ತರಿಸಿರುವಾಗ ಹೋಟೆಲ್‌ ಪರವಾಗಿ ಪ್ರಚಾರ ಮಾಡುವುದರಲ್ಲಿ ಬ್ಯುಸಿ ಇದ್ದರು. ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+