3 ಡಿಸಿಎಂ ಹುದ್ದೆಗಾಗಿ ಸುರ್ಜೆವಾಲ ಮೇಲೆ ಹೆಚ್ಚಾಯ್ತು ಒತ್ತಡ?: ಜ.11ಕ್ಕೆ 28 ಸಚಿವರಿಗೆ ದೆಹಲಿಗೆ ಬುಲಾವ್
ಬೆಂಗಳೂರು, ಜನವರಿ 09: ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದು ಇದೀಗ ಲೋಕಸಭಾ ಚುನಾವಣೆಗೆ ಸಜ್ಜಾಗಬೇಕಿದ್ದ ಕರ್ನಾಟಕ ಕಾಂಗ್ರೆಸ್‌ನಲ್ಲಿ ಇದೀಗ ಉಪಮುಖ್ಯಮಂತ್ರಿ ಹುದ್ದೆಗಳ ಬೇಡಿಕೆಗೆ ಭಾರೀ ಬಲ ಬರುತ್ತಿದೆ.
ಲೋಕಸಭಾ ಚುನಾವಣೆಗೂ ಮೊದಲೇ ಮೂರು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎಂದು ರಾಜ್ಯ ಸಚಿವರು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಒತ್ತಡ ಹೇರಿದ್ದಾರೆ.

ಮುಖ್ಯಮಂತ್ರಿ ಸ್ಥಾನ ಸಿದ್ದರಾಮಯ್ಯನವರಿಗೆ ನೀಡಿದ ಬಳಿಕ ಡಿಸಿಎಂ ಸ್ಥಾನ ಒಂದೇ ಎನ್ನಲಾಗಿತ್ತು. ಆದರೆ ಇದೀಗ ಹೆಚ್ಚುವರಿಯಾಗಿ ಮೂರು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಡ ತರುತ್ತಿದ್ದಾರೆ. ಒಟ್ಟು ಎಂಟು ಮಂದಿಯ ಬಣವೊಂದು ಸುರ್ಜೆವಾಲ ಅವರ ಮೇಲೆ ಒತ್ತಡ ಹೇರಿದೆ ಎಂದು ಮೂಲಗಳು ತಿಳಿಸಿವೆ.
ಯಾರೆಲ್ಲ ಡಿಸಿಎಂ ಹುದ್ದೆಗೆ ಒತ್ತಾಯಿಸಿದ್ದಾರೆ?
ಸದ್ಯ ಕಾಂಗ್ರೆಸ್‌ನಲ್ಲಿ ಈ ಬಗ್ಗೆ ಎಲ್ಲಿಯೂ ಸಾರ್ವಜನಿಕ ಚರ್ಚೆಗಳು ಆಗದೇ ಡಿಸಿಎಂ ಹುದ್ದೆ ಸೃಷ್ಟಿ ನಿರ್ಧಾರವನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಅವರ ನಿರ್ಧಾರಕ್ಕೆ ನಾನು ಬದ್ಧ ಎಂಬ ಮಾತುಗಳನ್ನು ಸಚಿವರ ಹೇಳಿದ್ದಾರೆ.
ರಣದೀಪ್ ಸುರ್ಜೇವಾಲ ಅವರಿಗೆ ಒತ್ತಡ ಹೇರಿದ ನಾಯಕರು/ಸಚಿವರು ಯಾರು ಎಂದು ನೋಡುವುದಾದರೆ, ಸಚಿವರಾದ ರಮೇಶ್ ಜಾರಕಿಹೊಳಿ, ಎಚ್‌ಸಿ ಮಹಾದೇವಪ್ಪ, ಡಾ.ಜಿ.ಪರಮೇಶ್ವರ, ಕೆ.ಎನ್. ರಾಜಣ್ಣ, ದಿನೇಶ್ ಗುಂಡೂರಾವ್, ಎಂಬಿ ಪಾಟೀಲ್ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಹೆಸರುಗಳ ಕೇಳಿ ಬಂದಿವೆ. ಇವರು ಡಿಸಿಎಂ ಹುದ್ದೆ ಸೃಷ್ಟಿಗೆ ಒತ್ತಡ ಹೇರಿದ್ದಾರೆ? ಎಂದು ಹೇಳಲಾಗುತ್ತಿದೆ.
ನಾರ್ವಜನಿಕ ಹೇಳಿಕೆಗೆ ನಕಾರ
ಡಿಸಿಎಂ ಹುದ್ದೆ ಕುರಿತು ಕೇಳಲಾದ ಪ್ರಶ್ನೆಗೆ ಈ ಬಗ್ಗೆ ನಾನು ಸಾರ್ವಜನಿಕವಾಗಿ ಮಾತನಾಡಲ್ಲ. ಏನಿದ್ದರು ವರಿಷ್ಠರು ಕೇಳಿದರೆ ನನ್ನ ಅಭಿಪ್ರಾಯವನ್ನು ನಾಲ್ಕು ಗೋಡೆಗಳ ಮಧ್ಯೆ ತಿಳಿಸುತ್ತೇನೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ತಿಳಿಸಿದ್ದರು. ಅಲ್ಲದೇ ಈ ಬಗ್ಗೆ ಇನ್ನಿತರ ಸಚಿವರ ನೇರವಾಗಿ ಪ್ರತಿಕ್ರಿಯಿಸುವ ಗೋಜಿಗೆ ಹೋಗಿರಲಿಲ್ಲ.
ಲೋಕಸಭಾ ಚುನಾವಣೆಗೂ ಮೊದಲು ಹೀಗೆ ಡಿಸಿಎಂ ಹುದ್ದೆಗಳ ಸೃಷ್ಟಿಯಿಂದ ಬಣ ರಾಜಕೀಯ, ಇಲ್ಲವೇ ಪಕ್ಷ ಸಂಘಟನೆಗೆ ಹೊಡೆತ ಕೊಡುವುದೇ ಎಂಬುದರ ಕುರಿತು ಕುತೂಹಲ ಮೂಡಿವೆ.

ಕುತೂಹಲ ಕೆರಳಿಸಿದ ಡಿಸಿಎಂ ಮಾತುಕತೆ
ಇದೆಲ್ಲ ಬೆಳವಣಿಗೆ ಮಧ್ಯೆದಲ್ಲಿ ಎಚ್ಚೆತ್ತುಕೊಂಡಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು, ಹೈಕಮಾಂಡ್ ಪ್ರಭಾವಿ ನಾಯಕ ಹಾಗೂ ಎಐಸಿಸಿ ಪ್ರಧಾನಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಹೆಚ್ಚು ಕಡಿಮೆ 45 ಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ. ಇಲ್ಲಿ ಡಿಸಿಎಂ ಹುದ್ದೆ ಸೃಷ್ಟಿ, ಅದಕ್ಕಾಗಿ ಸುರ್ಜೇವಾಲರ ಮೇಲೆ ಸಚಿವರ ಒತ್ತಡದ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.
28 ಸಚಿವರಿಗೆ ದೆಹಲಿ ಬುಲಾವ್: ಯಾಕೆ?
ಲೋಕಸಭಾ ಚುನಾವಣೆ ಸಿದ್ಧತೆಯಲ್ಲಿ ತೊಡಗಿರುವ ಕಾಂಗ್ರೆಸ್ ಎಲ್ಲ ಕ್ಷೇತ್ರಗಳಿಗೆ ಒಟ್ಟು 28 ಸಚಿವರನ್ನು ಸಂಯೋಜಕರಾಗಿ ನೇಮಕ ಮಡಲಾಗಿದೆ. ಇಷ್ಟು ಮಂದಿಯನ್ನು ಚುನಾವಣೆ ಸಿದ್ಧತೆ ಸಲುವಾಗಿ ಕೇಂದ್ರ ಕಾಂಗ್ರೆಸ್ ವರಿಷ್ಠರು ದೆಹಲಿಗೆ ಕರೆಸಿಕೊಳ್ಳುತ್ತಿದ್ದಾರೆ.
ಜನವರಿ 11ರಂದು ದೆಹಲಿಗೆ ಬರುವಂತೆ ಕಾಂಗ್ರೆಸ್ ಹೈಕಮಾಂಡ್ 28 ಸಚಿವರಿಗೆ ಬುಲಾವ್ ನೀಡಿದೆ. ದೆಹಲಿಯಲ್ಲಿ ಅಂದು ಮಧ್ಯಾಹ್ನ ಕರ್ನಾಟಕದಲ್ಲಿನ ಲೋಕಸಭಾ ಚುನಾವಣೆ ಕುರಿತು ಮಹತ್ವದ ಚರ್ಚೆ ನಡೆಯಲಿವೆ. ಸಿದ್ಧತೆ, ರೂಪುರೇಷೆ ಕುರಿತು ಚರ್ಚೆ ಆಗಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೂ ಮೊದಲು ಅಂದರೆ ಜನವರಿ 10ರಂದು ರಣದೀಪ್ ಸಿಂಗ್ ಸುರ್ಜೆವಾಲ ಅವರು ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಇಲ್ಲಿ ಅಂಶಗಳನ್ನು ಮುಂದಿಟ್ಟುಕೊಂಡು ಮತ್ತೆ ದೆಹಲಿಯಲ್ಲಿ ಚರ್ಚೆಗಳು ನಡೆಯಲಿವೆ ಎನ್ನಲಾಗಿದೆ.












Click it and Unblock the Notifications