Get Updates
Get notified of breaking news, exclusive insights, and must-see stories!

'ಸಿಎಂ ಕುರ್ಚಿ ಡೀಲ್: ಸಿಎಂ ಆಗಲು ಕಾಂಗ್ರೆಸ್ ಹೈಕಮಾಂಡ್‌ಗೆ ಕೋಟಿ ಕೋಟಿ ನೀಡಬೇಕು!'

Karnataka CM Tussle: ಕರ್ನಾಟಕದಲ್ಲಿ ಕುರ್ಚಿಗಾಗಿ ಕಿತ್ತಾಟ, ದೆಹಲಿಗೆ ತೆರಳಿ ತೆರೆಮರೆಯ ಕಸರತ್ತು ಜೋರಾಗಿತ್ತು. ಬೆಳಗಾವಿ ಅಧಿವೇಶನ ಹೊತ್ತಿಗೆ ತಾತ್ಕಾಲಿಕವಾಗಿ ಆ ವಿಚಾರ ತಣ್ಣಗಾಗಿದೆ. ಇದೇ ಹೊತ್ತಿನಲ್ಲಿ ಕಾಂಗ್ರೆಸ್‌ ರಾಜಾಧ್ಯಕ್ಷರೊಬ್ಬರು ಪತ್ನಿಯೊಬ್ಬರು ನೀಡಿರುವ ಹೇಳಿಕೆ ಭಾರಿ ಸದ್ದು ಮಾಡುತ್ತಿದೆ. 'ಸಿಎಂ ಕುರ್ಚಿ ಬೇಕಾದರೆ ಕಾಂಗ್ರೆಸ್ ಹೈಕಮಾಂಡ್‌ಗೆ ಕೋಟಿ ಕೋಟಿ ಹಣ ನೀಡಬೇಕು' ಎಂದಿದ್ದಾರೆ. ಅದನ್ನೆ ಉಲ್ಲೇಖಿಸಿ ರಾಜ್ಯ ಬಿಜೆಪಿ ಸಹ ' ಕೋಟಿಗೆ ಕುರ್ಚಿ ಡೀಲ್' ಎಂದು ಟೀಕಿಸಿದೆ.

ಕರ್ನಾಟಕ ಸಿಎಂ ಸ್ಥಾನ ಯಾರಿಗೆ? ಎಂಬ ಗೊಂದಲ ಉಂಟಾಗಿತ್ತು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಮಧ್ಯೆ ಬಿಗ್ ಫೈಟ್ ನೆಡೆದಿತ್ತು. ಉಭಯ ನಾಯಕ ಬಣದವರು ಸರತಿಯಾಗಿ ದೆಹಲಿ ಹೈಕಮಾಂಡ್ ಕಂಡು ಬಂದಿದ್ದಾರೆ. ಇದರ ಬೆನ್ನಲ್ಲೆ ಸಿಎಂ ಕುರ್ಚಿಗಾಗಿ ಕೋಟಿ ರೂಪಾಯಿ ಡೀಲ್ ವಿಚಾರ ಬೆಳಕಿಗೆ ಬಂದಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದೆ.

Karnataka CM Crisis BJP Slams Congress After Sidhu s Wife Claims Crores Needed for CM Post

ಸಿಎಂ ಕುರ್ಚಿ ಬೇಕಾದರೆ ಬೇಕಾದರೆ ಕಾಂಗ್ರೆಸ್ ಹೈಕಮಾಂಡ್‌ಗೆ ಕೋಟಿ ಕೋಟಿ ನೀಡಬೇಕು ಎಂದು ಪಂಬಾಜ್‌ ಕಾಂಗ್ರೆಸ್ಸಿನ ಮಾಜಿ ರಾಜ್ಯಾಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಅವರ ಪತ್ನಿ ಹೇಳಿದ್ದಾರೆ. ಇದು ಅತ್ಯಂತ ಗಂಭೀರವಾದುದು. ಕಾಂಗ್ರೆಸ್ಸಿನ ಭ್ರಷ್ಟ ಪರಂಪರೆಗೆ ಮತ್ತೊಂದು ಸಾಕ್ಷಿಯಾಗಿದೆ ಎಂದು ಬಿಜೆಪಿ ದೂರಿದೆ. ಈ ವಿಚಾರ ಕರ್ನಾಟಕ ವಿಧಾನಮಂಡಲ ಚಳಿಗಾಲ ಅಧಿವೇಶನದಲ್ಲೂ ಸದ್ದು ಮಾಡುವ ಸಾಧ್ಯತೆ ಇದೆ.

ಬಿಜೆಪಿ ಮುಂದುವರಿದು, ಕರ್ನಾಟಕ ಕಾಂಗ್ರೆಸ್‌ ಸರ್ಕಾರ ರಚನೆಯ ವೇಳೆಯಲ್ಲೂ ಇದೇ ಮಾದರಿ ಅನುಸರಿಸಲಾಗಿತ್ತೇ ಎನ್ನುವ ಅನುಮಾನ ಕಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಕುರ್ಚಿ ಜಗಳದ ನಡುವೆ ಸಿಎಂ ಕುರ್ಚಿ ಸಿದ್ದರಾಮಯ್ಯ ಪಾಲಾಗಿತ್ತು. ಎಷ್ಟು ಕೋಟಿ ನೀಡಿ ಮುಖ್ಯಮಂತ್ರಿ ಕುರ್ಚಿ ಖರೀದಿಸಿದ್ದು ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಬೇಕು ಎಂದು ಟಾಂಗ್ ನೀಡಿತು.

ಸಚಿವ ಸಂಪುಟ ಪುನರ್‌ ರಚನೆಯ ವೇಳೆಯಲ್ಲೂ ಸಚಿವಗಿರಿಗಾಗಿ ಕೋಟಿಗಟ್ಟಲೆ ಬೆಲೆ ನಿಗದಿ ಮಾಡಿರುವ ಸುದ್ದಿ ಹೊರಬಿದ್ದಿತ್ತು. ಈಗ ಕಾಂಗ್ರೆಸ್‌ ನಾಯಕನ ಪತ್ನಿಯ ಹೇಳಿಕೆಯ ಬಳಿಕ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಸೂಟ್‌ಕೇಸ್‌ ರಾಜಕಾರಣ ಅಂತೆಕಂತೆಗಳಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಬಿಜೆಪಿ ದೂರಿದೆ. ಇದಕ್ಕೆ ಬಿಜೆಪಿ ನಾಯಕರು ಏನೆಂದು ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯಲು ಜನ ಕಾತರದಿಂದ ಕಾಯುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+