• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸದ್ಯಕ್ಕೆ ಯಾಕಿಲ್ಲ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ?

|
   ಬಿಎಸ್ವೈ ಗೆ ಅಮಿತ್ ಷಾ ಟೈಮ್ ಕೊಡ್ತಿಲ್ಲ ಯಾಕೆ? | Oneindia Kannada

   ಬೆಂಗಳೂರು, ಡಿಸೆಂಬರ್ 11: ಉಪ ಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ ಆಗುತ್ತೆ ಎಂಬ ಮಾಜಿ ಅನರ್ಹರ ಹಾಗೂ ಸಚಿವಾಂಕ್ಷಿಗಳ ಆಸೆಗೆ ಸದ್ಯ ಮುಖ್ಯಮಂತ್ರಿ ಯಡಿಯೂರಪ್ಪ ಬ್ರೇಕ್ ನೀಡಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

   'ನಾನು ಇನ್ನೂ ನಾಲ್ಕು ದಿನ ದೆಹಲಿಗೆ ಹೋಗುವುದಿಲ್ಲ. ಅಮಿತ್ ಶಾ ಅವರು ಯಾವಾಗ ದೆಹಲಿಗೆ ಬಾ ಎನ್ನುತ್ತಾರೋ ಆಗ ಹೋಗುತ್ತೇನೆ. ಹಾಗಂತ ತೀರಾ ವಿಳಂಬ ಕೂಡ ಮಾಡುವುದಿಲ್ಲ. ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ನಮ್ಮನ್ನು ನಂಬಿ ಬಂದವರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ' ಎಂದು ಅವರು ಹೇಳಿದ್ದಾರೆ.

   ಯಡಿಯೂರಪ್ಪ ಸಂಪುಟ ವಿಸ್ತರಣೆ, ಯಾರಿಗೆ ಯಾವ ಖಾತೆ ಸಿಗಲಿದೆ?

   ರಾಷ್ಟ್ರೀಯ ಪೌರತ್ವ ತಿದ್ದುಪಡೆ ಮಸೂದೆಯನ್ನು ಅಂತಿಮಗೊಳಿಸುವುದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಗ್ನರಾಗಿದ್ದಾರೆ. ಅಲ್ಲದೆ, ಒಂದು ವಾರ ಝಾರ್ಖಂಡ್ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಅವರು ಮುಳಗಲಿದ್ದಾರೆ. ಉಪ ಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂದು ತೀವ್ರ ಹುಮ್ಮಸ್ಸಿನಲ್ಲಿದ್ದ ಯಡಿಯೂರಪ್ಪ ಅವರಿಗೆ ಅಮಿತ್ ಷಾ ಸಮಯ ನೀಡದಿರುವುದು ಕೊಂಚ ಹಿನ್ನಡೆಯಾಗಿದೆ. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ಈ ತಿಂಗಳಾಂತ್ಯಕ್ಕೆ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.

   English summary
   After by election in karnataka, cabinet Expansion postfoned. CM Yediyurappa said in bengalore. central home minister amit sha now not available for yediyurappa,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X