ಸೂರ್ಯನಗರ 4ನೇ ಹಂತದ ಟೌನ್ ಶಿಪ್‌ಗೆ ಗ್ರೀನ್ ಸಿಗ್ನಲ್
ಬೆಂಗಳೂರು, ಸೆ .4: ಏಷ್ಯಾದ ಅತಿದೊಡ್ಡ ಟೌನ್ ಶಿಪ್ ಯೋಜನೆ, ಪ್ರಧಾನಮಂತ್ರಿಗಳ ವಸತಿ ಬಡಾವಣೆ ಯೋಜನೆಯಡಿ ನಿರ್ಮಾಣವಾಗುತ್ತಿರುವ ಸೂರ್ಯ ನಗರ ನಾಲ್ಕನೇ ಹಂತದ ನಿರ್ಮಾಣ ಕಾರ್ಯಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಸಿರು ನಿಶಾನೆ ಸಿಕ್ಕಿದೆ ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
Recommended Video
ರಾಜಧಾನಿಯಲ್ಲಿ ವಾಸಿಸುತ್ತಿರುವ ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಲಕ್ಷಾಂತರ ಮಂದಿ ಸ್ವಂತ ಸೂರು, ನಿವೇಶನ ಹೊಂದುವ ಹೆಬ್ಬಯಕೆಯನ್ನು ಹೊಂದಿರುತ್ತಾರೆ. ಎಲ್ಲರ ಆಶೋತ್ತರಗಳನ್ನು ಈಡೇರಿಸಲು ವಸತಿ ಇಲಾಖೆ ಸಜ್ಜಾಗಿದೆ ಎಂದು ಸಚಿವರು ಹೇಳಿದರು.
ಈ ಬಡಾವಣೆಯಲ್ಲಿ ಸುಮಾರು 1938 ಎಕರೆ ವಿಸ್ತೀರ್ಣದಲ್ಲಿ 30,000 ನಿವೇಶನಗಳನ್ನು ವಿತರಿಸಲು ಉದ್ದೇಶಿಸಲಾಗಿದೆ ಬಡಾವಣೆಯ ನಿರ್ಮಾಣಕಾರ್ಯ ಸಮರೋಪಾದಿಯಲ್ಲಿ ಪ್ರಾರಂಭವಾಗಲಿದೆ. ಭೂಮಾಲೀಕರ ಜೊತೆ ಸತತ ಸಭೆಗಳನ್ನು ನಡೆಸಿ ಕೊನೆಗೆ ಶೇ 50: 50ರ ಅನುಪಾತದಲ್ಲಿ ಭೂಮಿ ಪಡೆಯಲು ಪರಿಹಾರ ಸೂತ್ರ ಕಲ್ಪಿಸಲಾಗಿದೆ ಎಂದರು.
ಸೂರ್ಯ ನಗರ ಟೌನ್ ಶಿಪ್ ನಿರ್ಮಾಣದ ಪ್ರಾಥಮಿಕ ಹಂತದ ಅಧಿ ಸೂಚನೆ 2013ರಲ್ಲೇ ಪ್ರಕಟಿಸಲಾಗಿತ್ತು. ಕಳೆದ ವರ್ಷ ನಿವೇಶನಕ್ಕಾಗಿ ಅರ್ಜಿಯನ್ನು ಕರೆಯಲಾಗಿತ್ತು.

ಭೂ ಮಾಲೀಕರ ಜೊತೆ 7 ವರ್ಷಗಳ ಸುದೀರ್ಘ ಸಭೆ
ಕಳೆದ 7 ವರ್ಷಗಳಿಂದ ಭೂ ಮಾಲೀಕರ ಜೊತೆ ಪರಿಹಾರ ಸೂತ್ರ ಕಂಡುಕೊಳ್ಳಲು ಸರ್ಕಾರ ಕೂಡಾ ನಿರಂತರವಾಗಿ ಯತ್ನಿಸುತ್ತಲೇ ಇತ್ತು. ಕೊನೆಗೂ ಸೋಮಣ್ಣ ಅವರು ಭೂ ಮಾಲೀಕರ ಮನ ಒಲಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ಎಕರೆಗೆ 20 ಲಕ್ಷ ರುಪಾಯಿ ಮುಂಗಡ ನೀಡಲು ಸಚಿವ ಸಂಪುಟದಲ್ಲಿ ಅನುಮತಿ ಸಿಕ್ಕಿದೆ.

ಆನೇಕಲ್ ತಾಲೂಕಿನಲ್ಲಿ ಬೃಹತ್ ಟೌನ್ ಶಿಪ್
ಗೃಹ ಮಂಡಳಿಯು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕೋನಸಂದ್ರ, ಬೊಮ್ಮಂಡಹಳ್ಳಿ, ಕಾಡುಜಕ್ಕನಹಳ್ಳಿ, ಇಂಡ್ಲವಾಡಿ ಮತ್ತು ಬಗ್ಗನದೊಡ್ಡಿ ಗ್ರಾಮಗಳಲ್ಲಿ 1938 ಎಕರೆ ಜಮೀನಿನಲ್ಲಿ ಉತ್ತಮ ಗುಣಮಟ್ಟದ ನಿವೇಶನ/ಮನೆಗಳನ್ನು ಅಭಿವೃದ್ಧಿ ಪಡಿಸಲಿದೆ. ಯೋಜನಾ ವೆಚ್ಚ ಸುಮಾರು 1910 ಕೋಟಿ ರು ಎಂದು ಅಂದಾಜಿಸಲಾಗಿದೆ.

2019ರ ಡಿಸೆಂಬರ್ ತಿಂಗಳಿನಲ್ಲಿ ನಿವೇಶನ ಹಂಚಿಕೆ ಅರ್ಜಿ
ಈ ಯೋಜನೆಯಡಿ ನಿಯಮಾವಳಿಗೆ ಅನುಗುಣವಾಗಿ ನಿವೇಶನಗಳನ್ನು ಹೊಂದಲು ಬಯಸುವ ಸಾರ್ವಜನಿಕರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನಿವೇಶನಗಳಿಗೆ ಮಂಡಳಿ ವತಿಯಿಂದ ನಿಗದಿಪಡಿಸಿದ ಅಂದಾಜು ದರ ಪ್ರತಿ ಚದರ ಅಡಿಗೆ ರೂ. 1500 ರೂ., ಪ್ರತಿ ಚದರ ಮೀಟರ್‌ಗೆ 16,146 ರೂ.ಗಳು ಎಂದು ಕಳೆದ ಡಿಸೆಂಬರ್ ನಲ್ಲಿ ಅರ್ಜಿ ಕರೆಯಲಾಗಿತ್ತು.

ಸೂರ್ಯನಗರ ಟೌನ್ ಶಿಪ್ ಬಗ್ಗೆ ಮಾಹಿತಿ
ಹೆಚ್ಚಿನ ಮಾಹಿತಿಗಾಗಿ ಜನರು ಸಹಾಯಕ ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ಗೃಹ ಮಂಡಳಿ, ಸೂರ್ಯ ನಗರ ಯೋಜನಾ ಕಚೇರಿ, ಸೂರ್ಯ ನಗರ ಬೆಂಗಳೂರು ಇವರನ್ನು ಖುದ್ದಾಗಿ ಅಥವ ದೂರವಾಣಿ ಮೂಲಕ ಸಂಪರ್ಕಿಸಬಹುದು. 9448373762/9886647084
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Vastu Tips for Home: ಮನೆಗೆ ಎರಡು ಮುಖ್ಯ ಪ್ರವೇಶ ದ್ವಾರಗಳು ಇರಬಹುದೇ? ವಾಸ್ತು ಹೇಳುವುದು ಏನು -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ












Click it and Unblock the Notifications