ಕರ್ನಾಟಕ ಬಂದ್: ಬೆಂಬಲಕ್ಕಿಂತ ಬೈಗುಳವೇ ಜಾಸ್ತಿ?!

Recommended Video

      Karnataka bandh for Mahadayi : ಬೆಂಬಲಕ್ಕಿಂತ ಬೈಗುಳವೇ ಜಾಸ್ತಿ? | Oneindia Kannada

      ಬೆಂಗಳೂರು, ಜನವರಿ 25: ಕೇಂದ್ರ ಸರ್ಕಾರ, ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂದು ಇಂದು ನಡೆಯುತ್ತಿರುವ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

      ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಸೇವೆಗಳು ಸ್ಥಗಿತಗೊಂದಿವೆ. ಖಾಸಗಿ ಶಾಲೆಗಳು ಮುಚ್ಚಿವೆ. ಬೆಂಗಳೂರಿನ ರಸ್ತೆಗಳಲ್ಲಿ ಅಲ್ಲಲ್ಲಿ ಕ್ಯಾಬ್, ಆಟೋಗಳು ಕಂಡುಬರುತ್ತಿವೆಯಾದರೂ ಸದಾ ಜಿಗಿಜಿಗಿ ಎನ್ನುವ ಬೆಂಗಳೂರಿನ ರಸ್ತೆಗಳು ಅಕ್ಷರಶಃ ಸ್ತಬ್ಧವಾಗಿವೆ.

      ಕರ್ನಾಟಕ ಬಂದ್ ಟ್ವಿಟ್ಟರ್ ನಲ್ಲೂ ಟ್ರೆಂಡಿಂಗ್ ಆಗಿದ್ದು, ಹಲವರು ಬಂದ್ ಪರವಾಗಿ, ಮತ್ತಷ್ಟು ಜನ ಬಂದ್ ವಿರೋಧಿಸಿ ಟ್ವೀಟ್ ಮಾಡಿದ್ದಾರೆ. ನದಿ ನೀರಿನ ವಿವಾದ ರಾಜಕೀಯವಾಗುತ್ತಿದೆ ಎಂದು ಕೆಲವು ದೂರಿದ್ದರೆ, ಸರ್ಕಾರದ ಗಮನ ಸೆಳೆಯಲು ಇಂಥ ಬಂದ್ ಗಳು ಅನಿವಾರ್ಯ ಎಂದು ಮತ್ತಷ್ಟು ಜನ ಪ್ರತಿಕ್ರಿಯಿಸಿದ್ದಾರೆ.

      Array

      ಇದು ಕಾಂಗ್ರೆಸ್ ಹುನ್ನಾರ!

      ಬಿಜೆಪಿಯ ಪರಿವರ್ತನಾ ಯಾತ್ರೆಯ ಯಶಸ್ಸನ್ನು ಸಹಿಸಲಾಗದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಈ ಬಂದ್ ಹುನ್ನಾರ ನಡೆಸಿದೆ ಎಂದಿದ್ದಾರೆ ಅಮೋಲ್ ಕಾಟಿಯಾರ್.

      ಚಿತ್ರಗಳು : ಮಹದಾಯಿಗಾಗಿ ಕರ್ನಾಟಕ ಬಂದ್

      ಬಂದ್ ನಿಂದ ಲಾಭವೇನು?

      ಮಹದಾಯಿ ಪ್ರಕರಣ ನ್ಯಾಯಧಿಕರಣದಲ್ಲಿದೆ. ಹೀಗಿರುವಾಗ ಈ ಪ್ರಕರಣಕ್ಕಾಗಿ ಬಂದ್ ಮಾಡುವುದರಿಂದ ಆಗುವ ಲಾಭವೇನು ಎಂದು ಪ್ರಶ್ನಿಸಿದ್ದಾರೆ ಚನ್ನು.

      ಒಪ್ಪಿಸಬೇಕಾದ್ದು ಬಿಜೆಪಿಯನ್ನೋ, ಕಾಂಗ್ರೆಸ್ ಅನ್ನೋ?

      ಹೋರಾಟಗಾರರೇ ಉತ್ತರಿಸಿ.. ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ‌. ಗೋವಾ ಹಾಗು ಮಹಾರಾಷ್ಟ್ರ ಕಾಂಗ್ರೆಸ್ ಅನ್ನು ಒಪ್ಪಿಸಿಕೊಂಡು ಬನ್ನಿ‌. ಬಿಜೆಪಿಯನ್ನ ನಾನು ಒಪ್ಪಿಸುತ್ತೇನೆ ಎಂದು. ಬಿಜೆಪಿ ಒಪ್ಪಿಸಿಯಾಗಿದೆ. ಕಾಂಗ್ರೆಸ್ ಇನ್ನೂ ಒಪ್ಪಿಸಿಲ್ಲ. ನೀವು ನಿಜವಾಗಿಯೂ ಪ್ರಶ್ನಿಸಬೇಕಾಗಿದ್ದು ಬಿಜೆಪಿಯನ್ನೋ ಕಾಂಗ್ರೆಸ್ ಅನ್ನೋ? ಎಂದು ಪ್ರಶ್ನಿಸಿದ್ದಾರೆ ರಾಜಶೇಖರ್ ಶೆಟ್ಟಿ.

      ರಸ್ತೆಯೆಲ್ಲ ಸ್ತಬ್ಧ ಸ್ತಬ್ಧ!

      ಕರ್ನಾಟಕ ಬಂದ್: ರಸ್ತೆಗಳೆಲ್ಲ ಸ್ತಬ್ಧವಾಗಿವೆ. ವಾಹನಗಳ ಸದ್ದಿಲ್ಲ, ಹಾರ್ನ್ ಸದ್ದೂ ಇಲ್ಲ! ಅಹಿತಕರ ಘಟನೆಗಳು ನಡೆಯಾರದೆಂದು ಬೆಂಗಳೂರಿಗರೆಲ್ಲ ಮನೆಯಲ್ಲೇ ಇರಲು ಬಯಸುತ್ತಿದ್ದಾರೆ ಎಂದು ಕಣ್ಣನ್ ಬೋಸ್ ಎಂಬುವವರು ಟ್ವೀಟ್ ಮಾಡಿದ್ದಾರೆ.

      ಸಾಮಾನ್ಯ ಜನರ ಬಗ್ಗೆ ಕಾಳಜಿಯಿಲ್ಲ

      ಬಿಜೆಪಿಗೆ ಕರಣಿ ಸೇನೆಯ ಗೂಂಡಾಗಳನ್ನು ತಡೆಯುವುದಕ್ಕಾಗುವುದಿಲ್ಲ, ಕಾಂಗ್ರೆಸ್ಸು ಕರವೇ ಗ್ಯಾಂಗ್ ಅನ್ನು ಬಂದ್ ಗೆ ಪ್ರಚೋದಿಸುತ್ತದೆ. ಈ ಎರಡೂ ಪಕ್ಷಕ್ಕೂ ಸಾಮಾನ್ಯ ಜನರ ಬಗ್ಗೆ ಕಾಳಜಿಯಿಲ್ಲ ಎಂದಿದ್ದಾರೆ ಜಗದೀಶ ಎಚ್. ಎಂ.

      ಬಂದ್ ಯಶಸಸ್ಸಿಗೆ ಇದೇ ಸಾಕ್ಷಿ!

      ಬೆಂಗಳೂರು ರಸ್ತೆಗಳಲ್ಲಿ ಎಲ್ಲೂ ಟ್ರಾಫಿಕ್ ಇಲ್ಲ. ರಸ್ತೆಗಳೆಲ್ಲ ಶಾಂತವಾಗಿವೆ. ಬಂದ್ ಯಶಸ್ವಿಯಾಗಿದೆ ಎಮಬುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ ಉತ್ಕರ್ಷ್ ಸಿಂಗ್.

      ಬಂದ್ ಗೆ ಎಲ್ಲರೂ ಬೆಂಬಲ ನೀಡಿ

      ದಯವಿಟ್ಟು ಕರ್ನಾಟಕ ಬಂದ್ ಅನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡುವ ಮೂಲಕ ಈ ಬಂದ್ ಗೆ ಬೆಂಬಲ ನೀಡಿ ಎಂದು ನಾನು ಸುದ್ದಿವಾಹಿನಿಗಳಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ ಸನತ್ ಕುಮಾರ್!

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+