ನಾನೀಗ ಬಿಜೆಪಿ ಸೊಸೆ ಎನ್ನುತ್ತಾರೆ ನಟಿ ಭಾವನಾ ರಾಮಣ್ಣ
ಬೆಂಗಳೂರು, ಮೇ 10: ಟಿಕೆಟ್ ಸಿಗದೆ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದ ನಟಿ ಭಾವನಾ ರಾಮಣ್ಣ, ಗುರುವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು.
ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಮುರುಳೀಧರರಾವ್ ಅವರ ಸಮ್ಮುಖದಲ್ಲಿ ಅವರು ಬಿಜೆಪಿಯನ್ನು ಸೇರಿಕೊಂಡರು. ಪಿ.ಸಿ. ಮೋಹನ್, ತೇಜಸ್ವಿನಿ ರಮೇಶ್, ಅನ್ವರ್ ಮಾಣಿಪ್ಪಾಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮುರಳೀಧರರಾವ್ ಅವರು ಪಕ್ಷದ ಶಾಲು ಹೊದೆಸಿ ಪಕ್ಷಕ್ಕೆ ಬರಮಾಡಿಕೊಂಡರು.
ಕಾಂಗ್ರೆಸ್‌ನಲ್ಲಿ ನನ್ನ ಸಂಘಟನಾ ಕಾರ್ಯಗಳಿಗೆ ಒಂದು ರೀತಿಯ ಹಿನ್ನಡೆಯಾಗಿದೆ ಎನಿಸಿತು. ಆದರೆ, ಅದನ್ನು ಅಸಮಾಧಾನ ಎಂದು ಹೇಳಲು ಸಾಧ್ಯವಿಲ್ಲ. ನಾನು ಸೇವೆ ಮುಂದುವರಿಸಬೇಕಿತ್ತು. ಯಾವುದೇ ರೀತಿಯ ಸೇವೆಗೆ ಅವಕಾಶಗಳಿದೆಯೋ ಅಲ್ಲಿಗೆ ಹೋಗುತ್ತೇನೆ ಎಂದು ಭಾವನಾ ಹೇಳಿದರು.

ಟಿಕೆಟ್ ಕೈ ತಪ್ಪಿದ ಕಾರಣಕ್ಕೆ ಬಿಜೆಪಿಗೆ ಬಂದಿಲ್ಲ. ಕೆಲವು ಸಿದ್ಧಾಂತಗಳಿಗೆ ಸರಿ ಹೊಂದುವ ಸನ್ನಿವೇಶ ಅಲ್ಲಿ ಇಲ್ಲ ಎಂದೆನಿಸಿತ್ತು.
ಮಗಳು ಮದುವೆಯಾಗಿ ಇನ್ನೊಂದು ಕಡೆ ಹೋದರೂ ಅಲ್ಲಿನ ವಾತಾವರಣ ಹೇಗೆ ಇದ್ದರೂ ಹೊಂದಿಕೊಳ್ಳಬೇಕಾಗುತ್ತದೆ. ನಾನು ಇಲ್ಲಿಗೆ ಸೊಸೆಯಾಗಿ ಬಂದಿದ್ದೇನೆ.
ಅವಕಾಶವಾದಿಯಲ್ಲ...
ಟಿಕೆಟ್ ತಪ್ಪಿದ್ದರಿಂದ ಬೇಸರವಾಗುವುದು ಸಹಜ. ಸ್ವಲ್ಪ ಗಂಟೆಗಳ ಮಟ್ಟಿಗೆ ಬೇಸರ ಆಗಿರಬಹುದು. ಪಕ್ಷದ ಪರವಾಗಿ ದುಡಿಯುವ ಜತೆಗೆ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸುವ ಅವಕಾಶಕ್ಕಾಗಿ ಹುಡುಕುತ್ತಿದ್ದೆ. ಆ ಅವಕಾಶ ಹತ್ತಿರದಲ್ಲಿ ಕಾಣಿಸಲಿಲ್ಲ ಎಂದರು.
ಯಾರಿಗೂ ನೋವಾಗದಂತೆ ನನ್ನೊಟ್ಟಿಗೆ ಇರುವವರ ಮನಸ್ಥಿತಿ ಅರ್ಥಮಾಡಿಕೊಂಡು ಈ ಹೆಜ್ಜೆ ಇರಿಸಿದ್ದೇನೆ. ನಾನು ಅವಕಾಶವಾದಿಯಲ್ಲ ಎಂದು ಹೇಳಿದರು.
ಯಾವುದೇ ಪಕ್ಷದಲ್ಲಿದ್ದರೂ ನನಗೆ ಚಿತ್ರದುರ್ಗ ಕಾರ್ಯಕ್ಷೇತ್ರ ಆಗಿರುತ್ತದೆ. ಆದರೆ, ಪಕ್ಷ ಯಾವುದೇ ರೀತಿಯ ಜವಾಬ್ದಾರಿ ನೀಡಿದರೂ ಅದಕ್ಕೆ ಬದ್ಧನಾಗಿರುತ್ತೇನೆ ಎಂದರು.

ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದ ಭಾವನಾ, ಅಲ್ಲಿ ಕಾಂಗ್ರೆಸ್‌ನ ಟಿಕೆಟ್ ಸಿಗಲಿದೆ ಎಂಬ ನಿರೀಕ್ಷೆ ಹೊಂದಿದ್ದರು. ಆದರೆ, ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿರದಿದ್ದರಿಂದ ಅವರು ಪಕ್ಷದ ವಿರುದ್ಧ ಅಸಮಾಧಾನ ಹೊಂದಿದ್ದರು.
ಅಲ್ಲದೆ, ಚಿತ್ರದುರ್ಗದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಪದಗ್ರಹಣ ಸಮಾರಂಭದಲ್ಲಿ ಆಜಾನ್ ಸಮಯದಲ್ಲಿ ಭಾಷಣ ನಿಲ್ಲಿಸಿದ್ದಕ್ಕೆ ಕೋಪಗೊಂಡಿದ್ದ ಅವರು, ಅರ್ಧದಲ್ಲಿಯೇ ಸಮಾರಂಭದಿಂದ ಹೊರಹೋಗಿದ್ದರು. ಆಜಾನ್‌ನಿಂದ ಹೊರಬಂದಿದ್ದು ನನ್ನ ಅಭಿವ್ಯಕ್ತಿ, ನನ್ನ ಅಭಿಪ್ರಾಯ. ಅದನ್ನು ವ್ಯಕ್ತಪಡಿಸಲು ನನಗೆ ಎಲ್ಲ ಹಕ್ಕೂ ಇದೆ. ಅದು ತಪ್ಪು ಎನಿಸಿಲ್ಲ ಎಂದು ಭಾವನಾ ಹೇಳಿದರು.
-
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ












Click it and Unblock the Notifications