• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಏರ್‌ಪೋರ್ಟ್‌ಗೆ ಮುತ್ತಿಗೆ:ಕರವೇ ಕಾರ್ಯಕರ್ತರು ವಶಕ್ಕೆ

|

ಬೆಂಗಳೂರು, ಸೆಪ್ಟೆಂಬರ್ 28: ರಾಜ್ಯದಲ್ಲಿ ಅನ್ನದಾತರ ಕಿಚ್ಚು ತೀವ್ರಗೊಂಡಿದೆ. ರೈತ, ಕಾರ್ಮಿಕ ವಿರೋಧಿ ವಿಧೇಯಕಗಳನ್ನು ಜಾರಿಗೊಳಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸೋಮವಾರ ಕರ್ನಾಟಕ ಬಂದ್ ಮಾಡಲಾಗಿದೆ.

ಮೆಜೆಸ್ಟಿಕ್ ಹಾಗೂ ಬೆಂಗಳೂರು ರೈಲ್ವೆ ನಿಲ್ದಾಣ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕನ್ನಡಪರ, ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಬೆಂಗಳೂರು ಕೆಂಪೇಗೌಡ ರೈಲು ನಿಲ್ದಾಣಕ್ಕೆ ರೈತ ಹಾಗೂ ಕನ್ನಡ ಪರ ಸಂಘಟನೆಗಳು ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ.

Video: ಕೃಷಿ ಸಂಬಂಧಿತ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಗೆ ಬೆಂಕಿ! Video: ಕೃಷಿ ಸಂಬಂಧಿತ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಗೆ ಬೆಂಕಿ!

ಕರವೇ ಕಾರ್ಯಕರ್ತರಿಂದ ಏರ್ ಪೋರ್ಟ್ ಗೆ ಮುತ್ತಿಗೆ, ಬಿಗಿಭದ್ರತೆ ಕೃಷಿ ಮಸೂದೆಗಳನ್ನು ವಿರೋಧಿಸಿ ಇಂದು ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ರೈತ ಮತ್ತು ಹಲವು ಕನ್ನಡಪರ ಸಂಘಟನೆಗಳು ಸಾಥ್ ನೀಡಿವೆ.

 ದೇವನಹಳ್ಳಿ, ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್

ದೇವನಹಳ್ಳಿ, ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್

ದೇವನಹಳ್ಳಿ, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 07 ರ ಎರಡೂ ಬದಿಯ ಏರ್ಪೋರ್ಟ್ ಗೇಟ್ ಗಳಿಗೆ ಬ್ಯಾರಿಕೇಡ್ ಗೆ ಅಳವಡಿಸಿ ಒಳ ಬರುವ ಪ್ರತಿಯೊಂದು ವಾಹನಗಳನ್ನ ತಪಾಸಣೆ ಮಾಡಲಾಯಿತು. ಬೋರ್ಡಿಂಗ್ ಪಾಸ್​ ಹೊಂದಿರುವವರನ್ನ ಹೊರತು ಪಡಿಸಿ ಉಳಿದೆಲ್ಲಾ ವಾಹನ ಮತ್ತು ವ್ಯಕ್ತಿಗಳನ್ನ ಏರ್ಪೋರ್ಟ್ ಹೊರಭಾಗದಲ್ಲೆ ತಡೆದು ಹಿಂದಕ್ಕೆ ಕಳಿಸಲಾಯಿತು.

 ಏರ್‌ಪೋರ್ಟ್ ಒಳಭಾಗದಲ್ಲಿ ಕಾರ್ಯಾಚರಣೆ

ಏರ್‌ಪೋರ್ಟ್ ಒಳಭಾಗದಲ್ಲಿ ಕಾರ್ಯಾಚರಣೆ

ಇನ್ನು ಎಂದಿನಂತೆ ಏರ್ಪೋರ್ಟ್ ಒಳ ಭಾಗದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಕ್ಯಾಬ್, ಬಿ.ಎಂ.ಟಿ.ಸಿ, ಕೆ.ಎಸ್.ಆರ್.ಟಿ.ಸಿ ಸಂಚಾರ ನಡೆಸಿದವು. ಬೆಳಿಗ್ಗೆ 4 ಗಂಟೆಗೆ ಕರವೇ ಕಾರ್ಯಕರ್ತರು ಏರ್ಪೋರ್ಟ್​​​ಗೆ ಮುತ್ತಿಗೆ ನಡೆಸಿದ್ರಿಂದ ಏರ್ಪೋರ್ಟ್ ಗೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
|
ಈ ವೇಳೆ ಇದಕ್ಕೆ ಪೊಲೀಸರು ತಡೆಯೊಡ್ಡಿದ್ದು, ಹಲವು ಕಾರ್ಯಕರ್ತರನ್ನು ಪೋಲಿಸರು ಬಂಧಿಸಿ ಕರೆದೊಯ್ದಿದ್ದಾರೆ. ಈ ನಡುವೆ ವಿವಿಧ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಯುತ್ತಿರುವ ವರದಿಗಳು ಬಂದಿವೆ.

 ನಮ್ಮ ನಿರೀಕ್ಷೆ ಸರ್ಕಾರ ಹುಸಿಗೊಳಿಸಿದೆ

ನಮ್ಮ ನಿರೀಕ್ಷೆ ಸರ್ಕಾರ ಹುಸಿಗೊಳಿಸಿದೆ

ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಬೆಂಗಳೂರು ರೈಲ್ವೆ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತ ವಿರೋಧಿ ಮಸೂದೆಗಳನ್ನು ಸರ್ಕಾರ ಹಿಂಪಡೆಯಬಹುದು ಎಂಬ ನಿರೀಕ್ಷೆಯನ್ನು ಸರ್ಕಾರ ಹುಸಿಗೊಳಿಸಿದೆ. ಈ ಧೋರಣೆಯನ್ನು ವಿರೋಧಿಸಿ, ಉಗ್ರ ಪ್ರತಿಭಟನೆ ನಡೆಸುತ್ತೇವೆ. ನಮ್ಮ ಬೇಡಿಕೆ ಈಡೇರುವ ತನಕ ಹೋರಾಟ ನಿಲ್ಲುವುದಿಲ್ಲ ತಿಳಿಸಿದ್ದಾರೆ.

 ಬೆಂಗಳೂರಿನಾದ್ಯಂತ ಬಿಗಿ ಬಂದೋಬಸ್ತ್

ಬೆಂಗಳೂರಿನಾದ್ಯಂತ ಬಿಗಿ ಬಂದೋಬಸ್ತ್

ಪ್ರತಿಭಟನೆ ಹಿನ್ನೆಲೆ ಬೆಂಗಳೂರು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರೈತರಿಗಾಗಿ ಜೈಲಿಗೆ ಹೋಗಲು ಸಿದ್ದ ಎಂದು ರೈತ ಮುಖಂಡರು ಹೇಳಿದ್ದಾರೆ. ಪ್ರತಿಭಟನಾಕಾರನ್ನು ಕರೆದುಕೊಂಡು ಪೊಲೀಸರು 400 ಬಿಎಂಟಿಸಿ ಬಸ್ ಸಿದ್ಧ ಮಾಡಿಕೊಂಡಿದ್ದಾರೆ.

ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್‌ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
English summary
Karnataka Bandh: KaRaVe Workers Protest At Kempegowda Airport against News Farm Bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X