ಹೊರ ವರ್ತುಲ ರಸ್ತೆ:ಗ್ರೇಡ್ ಸಪರೇಟರ್ ಡಿಸೆಂಬರ್‌ನಲ್ಲಿ ರೆಡಿ
ಬೆಂಗಳೂರು, ಜು.9: ನಗರದ ಹೊರ ವರ್ತುಲ ರಸ್ತೆಯ ಕಂಠೀರವ ಸ್ಟುಡಿಯೋ ಜಂಕ್ಷನ್‌ನ ಗ್ರೇಡ್ ಸಪರೇಟರ್ ಡಿಸೆಂಬರ್ ವೇಳೆಗೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿಯ ಆರ್. ಅಶೋಕ್ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೊಂದು ವಾರದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ಸ್ವಲ್ಪ ಭೂ ಸ್ವಾಧೀನ ಸಮಸ್ಯೆಯಿಂದಾಗಿ ಕುಂಠಿತವಾಗಿತ್ತು.ಡಿಸೆಂಬರ್ ವೇಳೆಗೆ ಗ್ರೇಡ್ ಸೆಪರೇಟರ್ ಕಾಮಗಾರಿ ಪೂರ್ಣ ಗೊಳಿಸಲಾಗುವುದು ಎಂದು ಹೇಳಿದರು.

ಕಂಠೀರವ ಸ್ಟುಡಿಯೋ ಜಂಕ್ಷನ್ ಗ್ರೇಡ್ ಸೆಪರೇಟರ್ ನಿರ್ಮಾಣದಿಂದಾಗಿ ಈ ಜಂಕ್ಷನ್ ಸಿಗ್ನಲ್‌ಮುಕ್ತ ಜಂಕ್ಷನ್ ಆಗಲಿದೆ. ಮಾಗಡಿ ರಸ್ತೆ ಕಡೆಗಿನ ಕೆಳಸೇತುವೆ ಇಳಿಜಾರು ಕಾಮಗಾರಿ ಪೂರ್ಣಗೊಂಡಿದೆ. ಪೀಣ್ಯ ಕಡೆಗಿನ ಕೆಳಸೇತುವೆ ಇಳಿಜಾರು ಕಾಮಗಾರಿ ಪ್ರಗತಿಯಲ್ಲಿದೆ. ಮಾಗಡಿ ರಸ್ತೆಯಿಂದ ತುಮಕೂರು ರಸ್ತೆಗೆ ಮೇಲ್ಸೇತುವೆ ನಿರ್ಮಾಣ, ಪೀಣ್ಯ ಕಡೆಯಿಂದ ಮಹಾಲಕ್ಷ್ಮೀ ಲೇ ಔಟ್ ಕಡೆಗೆ ಕೆಳಸೇತುವೆ ನಿರ್ಮಾಣ, ಗ್ರೇಡ್ ಮಟ್ಟದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.[ಐಎಎಸ್, ಕೆಎಎಸ್ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸಬೇಕು]
ಬನ್ನೇರುಘಟ್ಟ-ಸರ್ಜಾಪುರ ಟೋಲ್ ಫ್ಲೈ ಓವರ್: ಬನ್ನೇರುಟ್ಟ-ಸರ್ಜಾಪುರ ರಸ್ತೆಗಳನ್ನು ಅಗಲೀಕರಣ ಮಾಡಿ, ಟೋಲ್ ಸಂಗ್ರಹಿಸುವ ಫ್ಲೈ ಓವರ್ ರಸ್ತೆಯನ್ನು 800 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.












Click it and Unblock the Notifications