ನ.17ರಂದು ಕನ್ನಡ ವಿಕಿಪೀಡಿಯ ದಶಮಾನೋತ್ಸವ

ವಿಕಿಪೀಡಿಯ ಮುಖಾಂತರವೇ ವಿಷಯಗಳ ವಿನಿಮಯ ಮಾಡಿಕೊಳ್ಳುತ್ತಿದ್ದ ವಿಕಿಪೀಡಿಯನ್ನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಾವು ಬರೆದ ಲೇಖನ, ಮಾಹಿತಿಗಳ ಬಗ್ಗೆ ಮುಖತಃ ಚರ್ಚಿಸುವ ಅವಕಾಶವನ್ನು ವಿಕಿಪೀಡಿಯ ಒದಗಿಸಿದೆ. ಜೊತೆಗೆ, ವಿಕಿಪೀಡಿಯ ಪರಿಚಯ, ಸಂಪಾದಕ ಆಗುವ ವಿಧಾನ, ಲೇಖನ ಬರೆಯುವ ಬಗೆ, ಚಿತ್ರಗಳನ್ನು ಸೇರಿಸುವ ವಿವರಗಳನ್ನು ಈ ಕಾರ್ಯಕ್ರಮದಲ್ಲಿ ತಿಳಿಸಿಕೊಡಲಾಗುವುದು.
ಕನ್ನಡದ ಖ್ಯಾತ ಲೇಖಕ ಡಾ. ಯು.ಆರ್. ಅನಂತಮೂರ್ತಿ, ಸಂಶೋಧಕ ಡಾ. ಜಿ. ವೆಂಕಟಸುಬ್ಬಯ್ಯ ಮತ್ತು ಪತ್ರಕರ್ತ ರವಿ ಹೆಗಡೆ ಅವರ ಮಾತುಗಳನ್ನು ಕೇಳುವ ಸುಯೋಗ ವಿಕಿಪೀಡಿಯನ್ನರಿಗೆ ಲಭಿಸಲಿದೆ. ಭಾಗವಹಿಸಲಿಚ್ಛಿಸುವವರು ಮೊದಲೇ ನೋಂದಾಯಿಸಿಕೊಳ್ಳಬೇಕು.
ಸ್ಥಳ : ಎಚ್.ಎನ್. ಮಲ್ಟಿಮೀಡಿಯ ಹಾಲ್, ನ್ಯಾಶನಲ್ ಕಾಲೇಜು, ಬಸವನಗುಡಿ
ದಿನಾಂಕ : ನವಂಬರ್ 17, 2013
ಸಮಯ : 9:30ರಿಂದ 13:00
ಕಾರ್ಯಕ್ರಮ ವಿವರ:
9:30-10:00 ನೋಂದಣಿ
10:00 ರಿಂದ 11:00 ಸಭಾ ಕಾರ್ಯಕ್ರಮ
ಸ್ವಾಗತ ಗೀತೆ - ಲಕ್ಷ್ಮಿ ಚೈತನ್ಯ
ಸ್ವಾಗತ ಮತ್ತು ನಿರ್ವಹಣೆ - ಡಾ. ಎ. ಸತ್ಯನಾರಾಯಣ
ಪ್ರಸ್ತಾವನೆ - ಡಾ. ಯು. ಬಿ. ಪವನಜ
ಮುಖ್ಯ ಅತಿಥಿಗಳ ಮಾತು
ಡಾ. ಯು. ಆರ್. ಅನಂತಮೂರ್ತಿ
ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ
ರವಿ ಹೆಗಡೆ, ಸಮೂಹ ಸಂಪಾದಕ, ಉದಯವಾಣಿ
ಹತ್ತು ವರ್ಷದಲ್ಲಿ ಉತ್ತಮ ಕೆಲಸ ಮಾಡಿದ ಪ್ರಮುಖ ವಿಕಿಪೀಡಿಯನ್ನರುಗಳಿಗೆ ಮತ್ತು ನಿರ್ವಾಹಕರುಗಳಿಗೆ ಸ್ಮರಣಿಕೆ ನೀಡಿಕೆ
ಧನ್ಯವಾದ ಸಮರ್ಪಣೆ
11:00 - 11:15 - ಚಹಾ
11:15 - 12:00
ಕನ್ನಡ ವಿಕಿಪೀಡಿಯ ಪ್ರಾತ್ಯಕ್ಷಿಕೆ - ಓಂಶಿವಪ್ರಕಾಶ
ಕ್ರಿಯೇಟಿವ್ ಕಾಮನ್ಸ್ - ಕಿರಣ್ ರವಿಕುಮಾರ
ವಿಕಿಪೀಡಿಯನ್ನರುಗಳ ಮಾತು
12:00-13:00 - ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-thon)
ಲೇಖನಗಳನ್ನು ಸಿದ್ಧ ಮಾಡಿಕೊಂಡು ಬಂದು ಲೇಖನ ಸೇರಿಸುವುದು.
ಸಾಧ್ಯವಿದ್ದವರು ಲ್ಯಾಪ್‌ಟಾಪ್, ಇಂಟರ್‌ನೆಟ್ ಡಾಂಗಲ್ ಮತ್ತು ಒಂದು ಸಿದ್ಧಪಡಿಸಿದ ಲೇಖನ ತಂದು ಕೊನೆಯ ಸಂಪಾದನೋತ್ಸವದಲ್ಲಿ ಪಾಲ್ಗೊಳ್ಳಬಹುದು. ಬರುವವರು ದಯವಿಟ್ಟು ಈ ಪುಟದಲ್ಲಿ ನೋಂದಾಯಿಸಿಕೊಳ್ಳಿ - https://kn.wikipedia.org/wiki/ವಿಕಿಪೀಡಿಯ:ಸಮ್ಮಿಲನ/ದಶಮಾನೋತ್ಸವ












Click it and Unblock the Notifications