Get Updates
Get notified of breaking news, exclusive insights, and must-see stories!

ನ.1ರ ರಾಜ್ಯೋತ್ಸವ ಸಾಂಸ್ಕೃತಿಕ ಮೆರವಣಿಗೆಗೆ ಸಜ್ಜಾಗಿದೆ ಮಲ್ಲೇಶ್ವರ

ಬೆಂಗಳೂರು, ಅಕ್ಟೋಬರ್ 23: ಇನ್ನು ಕೆಲವೇ ದಿನಗಳಲ್ಲಿ ಕನ್ನಡ ಮಾಸ ಆರಂಭವಾಗಲಿದೆ. ನವೆಂಬರ್ 1 ರ ಕನ್ನಡ ರಾಜ್ಯೋತ್ಸವಕ್ಕೆ ಈಗಾಗಲೇ ಉದ್ಯಾನನಗರಿ ಸಿಂಗರಿಸಿಕೊಂಡಿದ್ದು, ಬೆಂಗಳೂರಿನ ಮಲ್ಲೇಶ್ವರ ಸಾಂಸ್ಕೃತಿಕ ಮೆರವಣಿಗೆಗೆ ಸಜ್ಜಾಗಿದೆ.

ಕರ್ನಾಟಕದ ಜನರಲ್ಲಿ ಕನ್ನಡದ ಜಾಗೃತಿ, ಅಸ್ಮಿತೆಯನ್ನು ಮೂಡಿಸಿದ 1982 ರ ಗೋಕಾಕ್ ಚಳವಳಿಯ ಸ್ಮರಣೆಗಾಗಿ ಈ ಬಾರಿಯ ನವೆಂಬರ್ ಮೊದಲ ದಿನವನ್ನು(92 ನೇ ಕನ್ನಡ ರಾಜ್ಯೋತ್ಸವ) ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಮಲ್ಲೇಶ್ವರ ಶಾಸಕ ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

Kannada Rajyotsav: Cultural rally in Malleshwaram to remember Gokak movement

ನವೆಂಬರ್ 1 ರ, ಗುರುವಾರ ಬೆಳಿಗ್ಗೆ 10 ಗಂಟೆಗೆ ಮಲ್ಲೇಶ್ವರ ಆಟದ ಮೈದಾನದಿಂದ, ಸಂಪಿಗೆ ರಸ್ತೆಯ ಮೂಲಕ ಸಿಇಟಿ ಸೆಲ್ ಬಳಿ ಇರುವ ವೃತ್ತದವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಇದರೊಟ್ಟಿಗೆ ಮಲ್ಲೇಶ್ವರ 18 ನೇ ಅಡ್ಡರಸ್ತೆಯ ಸಿಇಟಿ ಸೆಲ್ ಎದುರಿನ ವೃತ್ತಕ್ಕೆ 'ಗೋಕಾಕ್ ಚಳವಳಿ ಸ್ಮರಣಾರ್ಥ' ವೃತ್ತ ಎಂದು ಹೆಸರಿಟ್ಟು, ಈ ವೃತ್ತವನ್ನು ಇದೇ ದಿನ ಲೋಕಾರ್ಪಣೆಗೊಳಿಸಲಾಗುತ್ತಿದೆ. ಗೋಕಾಕ್ ಚಳವಳಿಯ ಹರಿಕಾರ, ಕನ್ನಡದ ವರನಟ ಡಾ.ರಾಜಕುಮಾರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ವಿಜಯ ಪ್ರಕಾಶ್ ಮತ್ತು ತಂಡದವರು ಸಂಗಿತ ಸುಧೆ ಹರಿಸಲಿದ್ದು, ಗೋಕಾಕ್ ಚಳವಳಿ ಕುರಿತು ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಸಹೃದಯ ಕನ್ನಡಾಭಿಮಾನಿಗಳು ಬಂದು ಈ ಕನ್ನಡದ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಬೇಕಾಗಿ ಶಾಸಕ ಅಶ್ವತ್ಥನಾರಾಯಣ್ ಅವರು ಕೋರಿದ್ದಾರೆ.

ಗೋಕಾಕ್ ಚಳವಳಿಯ ಮಹತ್ವವನ್ನು ಕಿರುವಿಡಿಯೋ ಮೂಲಕ ತಿಳಿಸಿರುವ ಅಶ್ವತ್ಥನಾರಾಯಣ್ ಅವರು
"1982 ರಲ್ಲಿ ಸಾಮಾನ್ಯ ಜನತೆಯಲ್ಲೂ ಕನ್ನಡ ಜಾಗೃತಿ ಮೂಡಿಸಿದ್ದ ಗೋಕಾಕ್ ಚಳುವಳಿ, ಡಾ. ರಾಜ್ ಕುಮಾರ್ ರವರ ಮುಂದಾಳತ್ವದ ಪಾಲ್ಗೊಳ್ಳುವಿಕೆಯಿಂದ ಮನೆ ಮನೆಗೂ ತಲುಪುವಂತಾಗಿತ್ತು. ಈ ಯಶಸ್ವಿ ಚಳುವಳಿಯನ್ನು ಮೆಲುಕು ಹಾಕಿ, ಕನ್ನಡದ ವೈಭವದ ಚರಿತ್ರೆಯ ಪುಟವನ್ನು ಇಂದಿನ ಜನಾಂಗಕ್ಕೆ ಪರಿಚಯಿಸಬೇಕಿದೆ" ಎಂದು ಟ್ವೀಟ್ ಮಾಡಿದ್ದಾರೆ.

ನ.1 ರ ಕಾರ್ಯಕ್ರಮದಲ್ಲಿ ವಿವಿಧ ಸಾಹಿತಿಗಳು, ನಟರು ಸೇರಿದಂತೆ ಖ್ಯಾತನಾಮರು ಭಾಗವಹಿಸಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+