ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುಲ್ವಮಾ ದಾಳಿ ಖಂಡಿಸಿ ವಾಟಾಳ್ ನಾಗರಾಜ್‌ರಿಂದ ಕರಾಳ ದಿನಾಚರಣೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 19 : ಪುಲ್ವಮಾದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಕನ್ನಡ ಒಕ್ಕೂಟದ ವತಿಯಿಂದ ಕರಾಳ ದಿನಾಚರಣೆ ಆಚರಿಸಲಾಯಿತು. ಮಂಗಳವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಅನ್ನು ವಾಪಸ್ ಪಡೆಯಾಗಿತ್ತು.

ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಮಂಗಳವಾರ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಯಿತು. ಉಗ್ರರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು.

ಕರ್ನಾಟಕ ಬಂದ್ ಇಲ್ಲ : ವಾಟಾಳ್ ನಾಗರಾಜ್ಕರ್ನಾಟಕ ಬಂದ್ ಇಲ್ಲ : ವಾಟಾಳ್ ನಾಗರಾಜ್

Kannada okkuta observed black day to protest against Pulwama attack

ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನೂರಾರು ಜನರು ಕಪ್ಪು ಬಟ್ಟೆ ಧರಿಸಿ, ಮಾನವ ಸರಪಳಿ ಮಾಡಿ ಉಗ್ರರ ವಿರುದ್ಧ, ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಉಗ್ರರ ಪ್ರತಿಕೃತಿ ದಹನ ಮಾಡಲಾಯಿತು.

ತಂದೆಯ ಸಮವಸ್ತ್ರ ಧರಿಸಿ ಅಂತಿಮ ಸೆಲ್ಯೂಟ್ ಹೊಡೆದ 2 ವರ್ಷದ ಪುತ್ರ!ತಂದೆಯ ಸಮವಸ್ತ್ರ ಧರಿಸಿ ಅಂತಿಮ ಸೆಲ್ಯೂಟ್ ಹೊಡೆದ 2 ವರ್ಷದ ಪುತ್ರ!

ಫೆ.19ರಂದು ಮೊದಲು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆದ್ದರಿಂದ, ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ್ದ ವಾಟಾಳ್ ನಾಗರಾಜ್ ಕರಾಳ ದಿನಾಚರಣೆ ಆಚರಣೆ ಮಾಡುತ್ತೇವೆ. ಕರ್ನಾಟಕ ಬಂದ್ ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು.

'ಮೋದಿ ಸರ್ಕಾರ ನಂಬಲ್ಲ' ಎಂದ ಹುತಾತ್ಮ ಯೋಧನ ದುಃಖತಪ್ತ ಪತ್ನಿ'ಮೋದಿ ಸರ್ಕಾರ ನಂಬಲ್ಲ' ಎಂದ ಹುತಾತ್ಮ ಯೋಧನ ದುಃಖತಪ್ತ ಪತ್ನಿ

ಪುಲ್ವಾಮದ ಅವಂತಿಪುರ್‌ನಲ್ಲಿ ಫೆ.14ರಂದು ಉಗ್ರರು ಸೇನಾ ವಾಹನದ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.

English summary
Kannada okkuta observed black day on February 19, 2019 to protest against Pulwama attack. Okkuta members staged protest in the leadership of Kannada Chalavali Vatal Paksha president Vatal Nagaraj Mysore bank circle, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X